ಬಿ.ಪಿ., ಮಧುಮೇಹ ರೋಗಿಗಳಿಗೆ ಉಚಿತ ಮಾತ್ರೆ

| Published : Dec 29 2024, 01:19 AM IST

ಸಾರಾಂಶ

ಸಕ್ಕರೆ ಮತ್ತು ಕೊಬ್ಬಿನ ಆಹಾರಗಳ ಅತಿಯಾದ ಸೇವನೆ, ಕಡಿಮೆ ದೈಹಿಕ ಚಟುವಟಿಕೆಯೊಂದಿಗೆ ಜಡ ಜೀವನಶೈಲಿ, ಒತ್ತಡ, ನಿದ್ರೆಯ ಕೊರತೆ, ಧೂಮಪಾನ ಮತ್ತು ಮದ್ಯಪಾನವು ಹೃದ್ರೋಗಕ್ಕೆ ಪ್ರಮುಖ ಕಾರಣ

ಕನ್ನಡಪ್ರಭ ವಾರ್ತೆ ಕೆ.ಆರ್. ನಗರರಾಜ್ಯ ಸರ್ಕಾರದ ಗೃಹ ಆರೋಗ್ಯ ಯೋಜನೆಯಡಿ ಬಿ.ಪಿ. ಮತ್ತು ಮಧುಮೇಹ ರೋಗಿಗಳಿಗೆ ಉಚಿತವಾಗಿ ಮಾತ್ರೆಗಳನ್ನು ವಿತರಿಸುವ ಕಾರ್ಯ ಜನವರಿ ತಿಂಗಳಿಂದ ಆರಂಭವಾಗಲಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಡಿ. ನಟರಾಜು ಹೇಳಿದರು.ಸಾಲಿಗ್ರಾಮ ತಾಲೂಕಿನ ಚಿಕ್ಕಕೊಪ್ಪಲು ಗ್ರಾಮದಲ್ಲಿ ಸಿ.ಎಚ್. ದೇವೇಗೌಡ ಸ್ಮಾರಕ ಉಚಿತ ವಾಚನಾಲಯದಿಂದ ಏರ್ಪಡಿಸಿದ್ದ ಹೃದಯಾಘಾತಕ್ಕೆ ಕಾರಣ ಮತ್ತು ನಿಯಂತ್ರಣದ ಕುರಿತ ವಿಚಾರ ಸಂಕಿರ್ಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ, ಇಂತಹ ಯೋಜನೆಗಳಿಂದ ಬಡ ಜನತೆಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.ಸಕ್ಕರೆ ಮತ್ತು ಕೊಬ್ಬಿನ ಆಹಾರಗಳ ಅತಿಯಾದ ಸೇವನೆ, ಕಡಿಮೆ ದೈಹಿಕ ಚಟುವಟಿಕೆಯೊಂದಿಗೆ ಜಡ ಜೀವನಶೈಲಿ, ಒತ್ತಡ, ನಿದ್ರೆಯ ಕೊರತೆ, ಧೂಮಪಾನ ಮತ್ತು ಮದ್ಯಪಾನವು ಹೃದ್ರೋಗಕ್ಕೆ ಪ್ರಮುಖ ಕಾರಣವಾಗಲಿದ್ದು, ವೈದ್ಯರು ನೀಡುವ ಮಾರ್ಗ ಸೂಚನೆಯಂತೆ ಹೃದಯಾಘಾತದ ಮುನ್ಸೂಚನೆ ಕಂಡು ಬಂದಾಗ ನಿರ್ಲಕ್ಷ್ಯ ವಹಿಸದೇ ಆರೋಗ್ಯ ತಪಾಸಣೆ ಮಾಡಿಸಿಕೊಂಡರೆ ಇದರಿಂದ ಹೃದಯಾಘಾತದಿಂದ ಪಾರಾಗಬಹುದು ಎಂದರು.ಸಿ.ಎಚ್. ದೇವೇಗೌಡ ಸ್ಮಾರಕ ಉಚಿತ ವಾಚನಾಲಯದ ವತಿಯಿಂದ ಹೊರ ತಂದಿರುವ 2025ನೇ ವರ್ಷದ ಕ್ಯಾಲೆಂಡರ್ನ್ನು ತಾಲೂಕುಪತ್ರಕರ್ತರ ಸಂಘದ ಅಧ್ಯಕ್ಷ ವಿನಯ್ ದೊಡ್ಡಕೊಪ್ಪಲು ಬಿಡುಗಡೆ ಮಾಡಿದರು.ಕಾರ್ಯಕ್ರಮದಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ , ಚಿಮುಕು ಬಳಗದ ಉಪಾಧ್ಯಕ್ಷ ಬಾಲಕೃಷ್ಣ ಮತ್ತು ಮರಿಲಿಂಗಮ್ಮನ ಸ್ವಾಮಿಗೌಡ, ಜವರಮ್ಮ ಅವರಿಗೆ ಸಂತಾಪ ಸೂಚಿಸಲಾಯಿತು.ಪ್ರೊ. ಸಿ.ಡಿ. ಪರಶುರಾಂ, ಕುಪ್ಪೆ ಗ್ರಾಪಂ ಅಧ್ಯಕ್ಷೆ ಸವಿತಾ ಶ್ರೀನಿವಾಸ್, ಕುಪ್ಪೆ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಸಿ.ಟಿ. ಪಾರ್ಥ , ಚಿಮುಕು ಭೂಮಿ ಬಳಗದ ಅಧ್ಯಕ್ಷ ಸೋಮಪ್ಪ, ನಿವೃತ್ತ ಶಿಕ್ಷಕ ಸಿ.ಎಲ್. ಕಾಳೇಗೌಡ, ಮುಖಂಡರಾದ ನಾಗರಾಜು, ಬಸವಣ್ಣ, ಸಣ್ಣಮೊಗೇಗೌಡ, ಸಿ. ಕೆ. ರಾಮಸ್ವಾಮಿ, ಸ್ವಾಮಿ, ಸಿ.ಕೆ. ಕೆಂಪೇಗೌಡ, ಕೆ.ಎಸ್. ಸದಾಶಿವಕೀರ್ತಿ, ಗಂಗಾಧರ, ಕುಮಾರಸ್ವಾಮಿ, ವಸಂತ್, ಬಸವರಾಜು, ಪ್ರಸನ್ನಕುಮಾರ್, ಶಿಕ್ಷಕಿ ಸವಿತಾ, ಆಶಾ ಕಾರ್ಯಕರ್ತೆ ಸುಜಾತಮ್ಮ ಇದ್ದರು.