ಸೋ.ಪೇಟೆ: ಸಿಂಥೆಟಿಕ್ ಟರ್ಫ್ ಮೈದಾನ ತಡೆಗೋಡೆ ಕಾಮಗಾರಿಗೆ ಚಾಲನೆ

| Published : Oct 22 2024, 12:00 AM IST

ಸಾರಾಂಶ

ಸೋಮವಾರಪೇಟೆ ಪಟ್ಟಣದ ಸಿಂಥೆಟಿಕ್ ಟರ್ಫ್ ಮೈದಾನದ ಬದಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ೫೦ ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು, ಶಾಸಕ ಡಾ. ಮಂತರ್ ಗೌಡ ಕಾಮಗಾರಿಗೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಪಟ್ಟಣದ ಸಿಂಥೆಟಿಕ್ ಟರ್ಫ್ ಮೈದಾನದ ಬದಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಸಣ್ಣ ನೀರಾವರಿ ಇಲಾಖೆಯಿಂದ ೫೦ ಲಕ್ಷ ರು. ಅನುದಾನ ಬಿಡುಗಡೆಯಾಗಿದ್ದು, ಶಾಸಕ ಡಾ. ಮಂತರ್ ಗೌಡ ಕಾಮಗಾರಿಗೆ ಚಾಲನೆ ನೀಡಿದರು.ಸಣ್ಣ ನೀರಾವರಿ ಇಲಾಖಾ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಅವರಲ್ಲಿ ಕಾಮಗಾರಿಯ ಅವಶಕ್ಯತೆಯ ಬಗ್ಗೆ ಗಮನ ಸೆಳೆದ ಹಿನ್ನೆಲೆ ತಕ್ಷಣ ಅನುದಾನ ಬಿಡುಗಡೆಗೊಳಿಸಿದ್ದು, ಗುಣಮಟ್ಟದ ಕಾಮಗಾರಿ ನಿರ್ವಹಿಸಬೇಕು. ಯಾವ ಹಂತದಲ್ಲಿಯೂ ಕಾಮಗಾರಿ ಕಳಪೆಯಾಗಬಾರದು ಎಂದು ಶಾಸಕರು ಸಂಬಂಧಿಸಿದ ಅಭಿಯಂತರರಿಗೆ ಸೂಚನೆ ನೀಡಿದರು.

ಕೊಡಗು ಕ್ರೀಡಾ ಜಿಲ್ಲೆಯಾಗಿದ್ದು, ಕ್ರೀಡೆ ಎಂಬುದು ರಕ್ತಗತವಾಗಿದೆ. ಕ್ರೀಡೆಗಳಿಗೆ ಅವಶ್ಯಕವಿರುವ ಮೈದಾನ ಹಾಗೂ ಕ್ರೀಡಾಪಟುಗಳಿಗೆ ಸೌಲಭ್ಯ ಒದಗಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಮೈದಾನದ ಒಂದು ಬದಿಯಲ್ಲಿ ೭೦ ಮೀಟರ್ ಉದ್ದ, ೪.೫ ಮೀಟರ್ ಎತ್ತರದಲ್ಲಿ ತಡೆಗೋಡೆ ನಿರ್ಮಾಣಗೊಳ್ಳಲಿದೆ. ಇದು ಶಾಶ್ವತ ಕಾಮಗಾರಿಯಾಗಿದ್ದು, ಗುಣಮಟ್ಟಕ್ಕೆ ಆದ್ಯತೆ ನೀಡಬೇಕೆಂದರು.ಈ ಸಂದರ್ಭ ಅಕ್ರಮ ಸಕ್ರಮ ಸಮಿತಿ ಸದಸ್ಯ ಬಿ.ಬಿ. ಸತೀಶ್, ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ಕುಮಾರಸ್ವಾಮಿ, ಕ್ರೀಡೆ ಮತ್ತು ಯುವ ಸಬಲೀಕರಣ ಇಲಾಖೆಯ ಅಧಿಕಾರಿ ವಿಸ್ಮಯಿ, ಪ.ಪಂ. ಸದಸ್ಯೆ ಶೀಲಾ ಡಿಸೋಜ, ಪ್ರಮುಖರಾದ ಚಂಗಪ್ಪ, ಸಿ.ಇ. ಚೇತನ್, ಜನಾರ್ದನ್, ಮಂಜುಳಾ ಹರೀಶ್, ಎಂ.ಎ. ರುಬೀನಾ, ಮೀನಾಕುಮಾರಿ, ಜಮೀರ್‌ಖಾನ್, ಗೌಡಳ್ಳಿ ಮಹೇಶ್, ಕೂಗೂರು ಸುಮಂತ್, ಭುವನೇಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.