ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಟಿ.ಬಲದೇವ್ , ಉಪಾಧ್ಯಕ್ಷರಾಗಿ ಲತಾಮಣಿ ಆಯ್ಕೆ

| Published : Oct 11 2025, 12:02 AM IST

ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಟಿ.ಬಲದೇವ್ , ಉಪಾಧ್ಯಕ್ಷರಾಗಿ ಲತಾಮಣಿ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಟಿಎಪಿಸಿಎಂಎಸ್ ರೈತರ ಸಂಸ್ಥೆ. ಈ ಹಿಂದಿನ ಎಲ್ಲಾ ಆಡಳಿತ ಮಂಡಳಿಗೂ ರೈತಪರ ಕೆಲಸ ಮಾಡಿ ಪ್ರಗತಿಪರವಾಗಿ ರೂಪಿಸಿವೆ. ನೂತನ ಆಡಳಿತ ಮಂಡಳಿ ಸದಸ್ಯರು ರೈತರ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಯ ಕಡೆಗೆ ತೆಗೆದುಕೊಂಡು ಹೋಗಬೇಕಾಗಿದೆ.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ತಾಲೂಕು ಟಿಎಪಿಸಿಎಂಎಸ್ ಸಂಸ್ಥೆ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ತೆರ್ನೇನಹಳ್ಳಿ ಟಿ.ಬಲದೇವ್ ಹಾಗೂ ಉಪಾಧ್ಯಕ್ಷರಾಗಿ ಬಂಡಿಹೊಳೆ ಲತಾಮಣಿ ಮಂಜುನಾಥ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇತ್ತೀಚೆಗೆ ನಡೆದ 14 ಸ್ಥಾನಗಳ ನಿರ್ದೇಶಕರ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ 11 ಮತ್ತು ಕಾಂಗ್ರೆಸ್ ಬೆಂಬಲಿತ 3 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇಂದು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆ ಸಂಘದ ಸಭಾಂಗಣದಲ್ಲಿ ನಡೆಯಿತು.

ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಟಿ.ಬಲದೇವ್ ಮತ್ತು ಲತಾಮಣಿ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿಯಾಗಿದ್ದ ತಹಸೀಲ್ದಾರ್ ಡಾ.ಎಸ್.ಯು.ಅಶೋಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಿಸಿದರು.

ಚುನಾವಣಾ ಪ್ರಕ್ರಿಯೆಯಲ್ಲಿ ಜೆಡಿಎಸ್ ಪಕ್ಷದ ಟಿ.ಬಲದೇವ್, ಲತಾಮಣಿ, ಶೀಳನೆರೆ ಎಸ್.ಎಲ್.ಮೋಹನ್, ಮಲ್ಲೇನಹಳ್ಳಿ ಮೋಹನ್, ಎಚ್.ಟಿ.ಲೋಕೇಶ್, ಜ್ಯೋತಿ, ರಂಗನಾಥಪುರ ನಾಗರಾಜು, ಬೊಮ್ಮೇನಹಳ್ಳಿ ಮಂಜುನಾಥ್, ನಾಗರಘಟ್ಟ ದಿಲೀಪ್, ಕಿಕ್ಕೇರಿ ಮಧು ಸೇರಿ ೧೦ ಜನ ನೂತನ ನಿರ್ದೇಶಕರು ಭಾಗವಹಿಸಿದ್ದರು. ಜೆಡಿಎಸ್ ಪಕ್ಷದ ಬಿ.ಎಂ.ಕಿರಣ್, ಕಾಂಗ್ರೆಸ್ ಪಕ್ಷದ ಮಡುವಿನಕೋಡಿ ಎಂ.ಪಿ.ಲೋಕೇಶ್, ಕಿಕ್ಕೇರಿ ಸುರೇಶ್ ಮತ್ತು ಅಘಲಯ ಎ.ವೈ.ವಿಜಯಕುಮಾರ್ ಗೈರು ಹಾಜರಾಗಿದ್ದರು.

ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದ ಶಾಸಕ ಎಚ್.ಟಿ.ಮಂಜು ಮಾತನಾಡಿ, ಕ್ಷೇತ್ರದಲ್ಲಿ ಜೆಡಿಎಸ್ ಬಲ ಕುಂದಿಲ್ಲ. ರೈತಾಪಿ ವರ್ಗ ಜೆಡಿಎಸ್ ಪಕ್ಷದ ಪರವಾಗಿದೆ ಎನ್ನುವುದನ್ನು ಚುನಾವಣೆ ಮತ್ತೊಮ್ಮೆ ನಿರೂಪಿಸಿದೆ ಎಂದರು.

ಟಿಎಪಿಸಿಎಂಎಸ್ ರೈತರ ಸಂಸ್ಥೆ. ಈ ಹಿಂದಿನ ಎಲ್ಲಾ ಆಡಳಿತ ಮಂಡಳಿಗೂ ರೈತಪರ ಕೆಲಸ ಮಾಡಿ ಪ್ರಗತಿಪರವಾಗಿ ರೂಪಿಸಿವೆ. ನೂತನ ಆಡಳಿತ ಮಂಡಳಿ ಸದಸ್ಯರು ರೈತರ ನಿರೀಕ್ಷೆಯನ್ನು ಹುಸಿಗೊಳಿಸದಂತೆ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಯ ಕಡೆಗೆ ತೆಗೆದುಕೊಂಡು ಹೋಗಬೇಕಾಗಿದೆ ಎಂದರು.

ನೂತನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ತಮ್ಮ ಜವಾಬ್ದಾರಿಯನ್ನು ಅರಿತು ಸಂಸ್ಥೆಯ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕು. ನಿರ್ದೇಶಕರು ಕೈ ಜೋಡಿಸಬೇಕು. ಈ ಮೂಲಕ ಪಕ್ಷಕ್ಕೆ ಒಳ್ಳೆಯ ಹೆಸರು ತರಬೇಕು ಎಂದು ಸಲಹೆ ನೀಡಿದರು.

ನೂತನ ಅಧ್ಯಕ್ಷ ಬಲದೇವ್ ಮಾತನಾಡಿ, ಜೆಡಿಎಸ್ ಪಕ್ಷದ ಸಾಮಾನ್ಯ ಕಾರ್ಯಕರ್ತನಾದ ನನ್ನನ್ನು ಗುರುತಿಸಿ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಲು ಕಾರಣಕರ್ತರಾದ ಎಲ್ಲಾ ನಿರ್ದೇಶಕರಿಗೆ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರಿಗೆ, ಕೇಂದ್ರ ಸಚಿವ ಹಾಗೂ ಮಾಜಿ ಸಿಎಂ ಕುಮಾರಣ್ಣ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ ಹಾಗೂ ಶಾಸಕ ಎಚ್.ಟಿ.ಮಂಜಣ್ಣ ಅವರಿಗೆ, ಜೆಡಿಎಸ್ ಮುಖಂಡರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.

ಪಕ್ಷದ ವರಿಷ್ಠರು ಹಾಗೂ ಮುಖಂಡರು ನನ್ನ ಮೇಲೆ ಇಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳಲು ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಸಂಸ್ಥೆ ಸಮಗ್ರ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ಟಿಎಪಿಸಿಎಂಎಸ್ ಸಂಸ್ಥೆ ನೂತನ ನಿರ್ದೇಶಕರಾದ ಶೀಳನೆರೆ ಎಸ್.ಎಲ್.ಮೋಹನ್, ಮಲ್ಲೇನಹಳ್ಳಿ ಎಂ.ಮೋಹನ್, ಎಚ್.ಟಿ.ಲೋಕೇಶ್, ರಂಗನಾಥಪುರ ನಾಗರಾಜು, ನಾಗರಘಟ್ಟ ದಿಲೀಪ್ ಕುಮಾರ್, ಕಿಕ್ಕೇರಿ ಮಧು, ಅಗ್ರಹಾರಬಾಚಹಳ್ಳಿ ಜ್ಯೋತಿ.ಬಿ.ಕೆ., ದೇವರಾಜು, ಬೊಮ್ಮೇನಹಳ್ಳಿ ಮಂಜುನಾಥ್ ಸೇರಿದಂತೆ ಜೆಡಿಎಸ್ ಪಕ್ಷದ ಹಲವು ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದು ನೂತನ ಅಧ್ಯಕ್ಷರು, ಉಪಾಧ್ಯಕ್ಷರನ್ನು ಅಭಿನಂದಿಸಿದರು.