ಸಾರಾಂಶ
ಹಿಂದೆ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ನಗರ ಪ್ರದೇಶಗಳ ಶಾಲೆಗಳನ್ನು ಉಡುಕಿಹೊಂಡು ಹೋಗುತ್ತಿದ್ದರು, ಆದರೆ ಇಂದು ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣವು ಸಿಗುತ್ತಿದೆ
- ಬೆಂಗಳೂರು ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಚಿಕ್ಕಮೊಗ ಅಭಿಮತ
----ಕನ್ನಡಪ್ರಭ ವಾರ್ತೆ ಬನ್ನೂರು
ಮಕ್ಕಳಲ್ಲಿ ಅಡಗಿರುವ ಸುಪ್ತ ಕೌಶಲ್ಯ ಹೊರ ತೆಗೆಯಲು ಸಾಂಸ್ಕೃತಿಕ ವೇದಿಕೆ ಕಲ್ಪಸಿಕೊಟ್ಟಾಗ ಮಾತ್ರ ಉತ್ತಮ ಸಮಾಜ ಕಾಣಲು ಸಾಧ್ಯ ಎಂದು ಬೆಂಗಳೂರು ರಾಜೀವ್ ಗಾಂಧಿ ವಿಶ್ವ ವಿದ್ಯಾನಿಲಯದ ಸಿಂಡಿಕೇಟ್ ಸದಸ್ಯ ಚಿಕ್ಕಮೊಗ ಹೇಳಿದರು.ಟಿ, ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಅತ್ತಹಳ್ಳಿ ಗ್ರಾಮದ ಜಿ.ಪಿ.ಪಿ. ಎಜುಕೇಶನ್ ಟ್ರಸ್ಟ್ ನ ಜಿಪಿಪಿ ಪಬ್ಲಿಕ್ ಸ್ಕೂಲ್ ಅಯೋಜಿಸಿದ್ದ ಪ್ರಥಮ ವರ್ಷದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕಾಗಿ ನಗರ ಪ್ರದೇಶಗಳ ಶಾಲೆಗಳನ್ನು ಉಡುಕಿಹೊಂಡು ಹೋಗುತ್ತಿದ್ದರು, ಆದರೆ ಇಂದು ಗ್ರಾಮೀಣ ಭಾಗದಲ್ಲಿ ಉತ್ತಮ ಶಿಕ್ಷಣವು ಸಿಗುತ್ತಿದೆ ಎಂದರು.ಸಂಸ್ಥೆಯ ಕಾರ್ಯದರ್ಶಿ ಜಿ.ಪಿ. ಪ್ರಸನ್ನ, ಮೈಸೂರು ಕೆ.ಆರ್. ಅಸ್ಪತ್ರೆ ಮನೋವೈದ್ಯ ಡಾ.ಬಿ.ಎನ್. ರವೀಶ್, ಟಿ. ನರಸೀಪುರ ತಾಲೂಕು ಶಿಕ್ಷಣಾಧಿಕಾರಿ ಶೋಭ ಮಾತನಾಡಿದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ನೃತ್ಯ ಪ್ರದರ್ಶಿಸಿದರು.ಗ್ರಾಮೀಣ ಜಿ.ಪಿ.ಪಿ. ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಜಿ.ಪಿ. ಪ್ರಕಾಶ್, ಉಪಾಧ್ಯಕ್ಷ ಕೆಂಪೇಗೌಡ, ಜಿ.ಪಿ. ಪ್ರತಾಪ್. ಸಂಸ್ಥೆ ಆಡಳಿತಾಧಿಕಾರಿ ಬಿ.ಎಲ್. ವೆಂಕಟೇಶ್ ಮೂರ್ತಿ, ಅತ್ತಹಳ್ಳಿ ಪಂಚಾಯಿತಿ ಅಧ್ಯಕ್ಷ ಡಿ, ಸುನೀಲ್ ಕುಮಾರ್, ಮುಖ್ಯಶಿಕ್ಷಕಿ ಶ್ವೇತ, ಸದಸ್ಯ ಮಹೇಶ್, ಶಿಕ್ಷಕರು, ಪೋಷಕರು ಇದ್ದರು.