ಆ.11ರಂದು ಟಿ. ದಾಮೋದರ ಶೆಟ್ಟಿಗಾರ್ ಸಂಸ್ಮರಣೆ, ಯಕ್ಷದಾಮೋದರ ಪ್ರಶಸ್ತಿ ಪ್ರದಾನ

| Published : Aug 01 2024, 12:27 AM IST

ಆ.11ರಂದು ಟಿ. ದಾಮೋದರ ಶೆಟ್ಟಿಗಾರ್ ಸಂಸ್ಮರಣೆ, ಯಕ್ಷದಾಮೋದರ ಪ್ರಶಸ್ತಿ ಪ್ರದಾನ
Share this Article
  • FB
  • TW
  • Linkdin
  • Email

ಸಾರಾಂಶ

ಸೇರಾಜೆ ಸೀತಾರಾಮ ಭಟ್ ದಾಮೋದರ ಶೆಟ್ಟಿಗಾರರ ಕುರಿತಾಗಿ ಸಂಸ್ಮರಣೆ ಮಾತುಗಳನ್ನಾಡಲಿದ್ದಾರೆ.

ಕನ್ನಡಪ್ರಭ ವಾರ್ತೆ ಮೂಲ್ಕಿ

ಯಕ್ಷಗಾನ ಕಲಾವಿದ, ವೇಷಭೂಷಣ ಪ್ರಸಾದನ ಕಲಾ ಪರಿಣತ, ಮೋಹಿನೀ ಕಲಾ ಸಂಪದದ ಸಂಸ್ಥಾಪಕ ಟಿ. ದಾಮೋದರ ಶೆಟ್ಟಿಗಾರ್ ಅವರ ೨೫ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮ ಆಗಸ್ಟ್ 11ರಂದು ಭಾನುವಾರ ಕಿನ್ನಿಗೋಳಿ ನೇಕಾರ ಸೌಧ ಸಭಾಭವನದಲ್ಲಿ ನಡೆಯಲಿದೆ.

ಶ್ರೀಧರ ಡಿ.ಎಸ್., ಭುವನಾಭಿರಾಮ ಉಡುಪ, ಸುನಿಲ್ ಭಟ್, ಮಾಧವ ಕೆರೆಕಾಡು, ದೀನೇಶ ಶೆಟ್ಟಿ ಕೊಟ್ಟಿಂಜ, ರಶ್ಮಿ ಉಡುಪ ಮುಂತಾದವರ ಉಪಸ್ಥಿತಿಯಲ್ಲಿ ಉದ್ಘಾಟನೆ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಯಕ್ಷಗಾನ ಅಭ್ಯಾಸ ಕೇಂದ್ರ ದುಬೈ ಇವರಿಂದ ಪೂರ್ವರಂಗ, ಕೀರ್ತಿಶೇಷ ಶೆಟ್ಟಿಗಾರರ ಮೊಮ್ಮಕ್ಕಳಿಂದ ಚೆಂಡೆ ಪೀಠಿಕೆ ಜುಗಲ್ ಬಂದಿ, ಆಳ್ವಾಸ್ ಧೀಂಕಿಟ ಯಕ್ಷಗಾನ ಅಧ್ಯಯನ ಕೇಂದ್ರದವರಿಂದ ಚೂಡಾಮಣಿ ಯಕ್ಷಗಾನ, ಖ್ಯಾತ ಕಲಾವಿದರಿಂದ ಯಕ್ಷಗಾನ ಕುಂಭಕರ್ಣ, ರಾವಣ ವಧೆ, ವೀರಮಣಿ ಹಾಗೂ ಕೀರ್ತಿಶೇಷ ಶೆಟ್ಟಿಗಾರರ ಶಿಷ್ಯವೃಂದದವರಿಂದ ರಾಮಾಂಜನೇಯ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.

ಶಶಿಧರ ಶೆಟ್ಟಿ ಬರೋಡ, ವೆಂಕಟರಮಣ ಆಸ್ರಣ್ಣ, ಮೀನಾಕ್ಷಿ ರಾಮಚಂದ್ರ, ದಿನೇಶ್ ಕೊಟ್ಟಿಂಜ, ದೇವಾನಂದ ಭಟ್ ಮುಂತಾದವರ ಉಪಸ್ಥಿತಿಯಲ್ಲಿ ಸೇರಾಜೆ ಸೀತಾರಾಮ ಭಟ್ ದಾಮೋದರ ಶೆಟ್ಟಿಗಾರರ ಕುರಿತಾಗಿ ಸಂಸ್ಮರಣೆ ಮಾತುಗಳನ್ನಾಡಲಿದ್ದಾರೆ. ಐವರು ಸಾಧಕರಿಗೆ ಯಕ್ಷದಾಮೋದರ ಪ್ರಶಸ್ತಿ: ಸಮಾಜ ಸೇವಕ, ಕಲಾಪೋಷಕ ಡಾ. ಹರಿಕೃಷ್ಣ ಪುನರೂರು, ಯಕ್ಷಗಾನ ಕಲಾವಿದ, ವೇಷಭೂಷಣ ತಯಾರಿ ಪರಿಣತ ಪಡ್ರೆ ಕುಮಾರ, ಖ್ಯಾತ ಬಣ್ಣದ ವೇಷಧಾರಿ ಸಿದ್ದಕಟ್ಟೆ ಸದಾಶಿವ ಶೆಟ್ಟಿಗಾರ್, ಖ್ಯಾತ ಕಲಾವಿದ ಪಿ.ವಿ. ಪರಮೇಶ್ ಹಾಗೂ ವೇಷಭೂಷಣ ಪ್ರಸಾದನ ಸಂಸ್ಥೆ ಲಲಿತ ಕಲಾ ಆರ್ಟ್ಸ್ ಇವರಿಗೆ ಯಕ್ಷದಾಮೋದರ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಡಾ. ಮೋಹನ ಆಳ್ವ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಉಮಾನಾಥ ಕೋಟ್ಯಾನ್, ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ರವಿ ಶೆಟ್ಟಿಗಾರ್ ಕಾರ್ಕಳ, ರಾಮಪ್ರಸಾದ್ ಅಮ್ಮೆನಡ್ಕ, ದೀಪ್ತಿ ಬಾಲಕೃಷ್ಣ ಭಟ್ ಮುಂತಾದವರು ಉಪಸ್ಥಿತರಿರುವರು ಎಂದು ಮೋಹಿನಿ ಡಿ. ಶೆಟ್ಟಿಗಾರ್ ತಿಳಿಸಿದ್ದಾರೆ.