ಈ ಇಬ್ಬರ ಮನೆ, ಕಚೇರಿ ಸೇರಿದಂತೆ 7 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ
ಫೋಟೋ- 5ಎಂವೈಎಸ್26, 27, 28
ಇಬ್ಬರು ಅಧಿಕಾರಿಗಳ ಮನೆಯಲ್ಲಿ ಪತ್ತೆಯಾದ ಚಿನ್ನಾಭರಣ, ಹಣ ಮತ್ತು ಇತರೆ ವಸ್ತುಗಳು.----ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಇಬ್ಬರು ಅಧಿಕಾರಿಗಳ ಮನೆಯ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿ, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಪತ್ತೆ ಮಾಡಿದ್ದಾರೆ.ಜಿಲ್ಲೆಯ ಟಿ. ನರಸೀಪುರದ ಪುರಸಭೆಯ ಕಿರಿಯ ಎಂಜಿನಿಯರ್ (ಮೈಸೂರು ಮಹಾನಗರ ಪಾಲಿಕೆಯಿಂದ ನಿಯೋಜನೆ) ಕೆ.ಆರ್. ಚಂದ್ರಶೇಖರ್ ಹಾಗೂ ಸೆಸ್ಕ್ ಪ್ರಭಾರ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ಅಲ್ತಾಫ್ ಹುಸೇನ್ ಜಕಾರ್ತಿ ಮನೆಯಲ್ಲಿ ಕೋಟ್ಯಂತರ ಮೌಲ್ಯದ ಚಿನ್ನಾಭರಣ, ಮನೆ ಇನ್ನಿತರ ಆಸ್ತಿ ಪತ್ತೆಯಾಗಿದೆ.
ಈ ಇಬ್ಬರ ಮನೆ, ಕಚೇರಿ ಸೇರಿದಂತೆ 7 ಕಡೆಗಳಲ್ಲಿ ಲೋಕಾಯುಕ್ತ ಪೊಲೀಸರು ಗುರುವಾರ ಬೆಳಗ್ಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ.ಚಂದ್ರಶೇಖರ್ ವಿಜಯನಗರದಲ್ಲಿ 82 ಲಕ್ಷ ಮೌಲ್ಯದ ಮನೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇದರೊಂದಿಗೆ 55 ಲಕ್ಷ ಮೌಲ್ಯದ 2 ನಿವೇಶನ ಪತ್ತೆಯಾಗಿದೆ. 2.02 ಕೋಟಿ ಮೌಲ್ಯದ ಚಿನ್ನಾಭರಣ, 62 ಲಕ್ಷ ಹಣ, 10.70 ಲಕ್ಷ ಮೌಲ್ಯದ ವಾಹನಗಳ ಸಹಿತ ಒಟ್ಟು 2.75 ಕೋಟಿ ಚರಾಸ್ತಿ ಪತ್ತೆಯಾಗಿದೆ.
ಅಲ್ತಾಫ್ ಹುಸೇನ್ ಜಕಾರ್ತಿ ನಗರದ ಪ್ರಮುಖ ಸ್ಥಳಗಳಲ್ಲಿ ಹಾಗೂ ತುಮಕೂರಿನಲ್ಲಿ 1.03 ಕೋಟಿ ಮೌಲ್ಯದ ನಾಲ್ಕು ನಿವೇಶನ ಹೊಂದಿದ್ದಾರೆ. ರೈಲ್ವೆ ಬಡಾವಣೆಯಲ್ಲಿ 1.31 ಕೋಟಿ ಮೌಲ್ಯದ ಐಷಾರಾಮಿ ಮನೆಯಲ್ಲಿ ವಾಸವಿದ್ದಾರೆ. ಇವರ ಮನೆಯಲ್ಲಿ 2.34 ಕೋಟಿ ಮೌಲ್ಯದ ಸ್ಥಿರಾಸ್ತಿ, 1.10 ಕೋಟಿ ಮೌಲ್ಯದ ಚರಾಸ್ತಿ ಪತ್ತೆಯಾಗಿದೆ. 1.45 ಲಕ್ಷ ಹಣ, 75.46 ಲಕ್ಷ ಮೌಲ್ಯದ ಚಿನ್ನಾಭರಣ, 19.55 ಲಕ್ಷ ಮೌಲ್ಯದ ವಾಹನ ಪತ್ತೆಯಾಗಿದೆ.ಲೋಕಾಯಕ್ತ ಎಸ್ಪಿ ಟಿ.ಜೆ. ಉದೇಶ ನೇತೃತ್ವದಲ್ಲಿ ಡಿವೈಎಸ್ಪಿ ಶೈಲೇಂದ್ರ, ಇನ್ಸ್ ಪೆಕ್ಟರ್ ಗಳಾದ ವಿಜಯ್ ಕುಮಾರ್, ಉಮೇಶ್, ಶಾಂತಿನಾಥ್ ವನ್ನೂರ್, ಶಶಿಕುಮಾರ್ ಮತ್ತು ಸಿಬ್ಬಂದಿ ಈ ದಾಳಿ ನಡೆಸಿದ್ದಾರೆ.