ಸಾರಾಂಶ
ತರೀಕೆರೆ, ವಿದ್ಯಾರ್ಥಿಗಳಿಗೆ ನಮ್ಮ ದೇಶದ ಇತಿಹಾಸ ತಿಳಿಸುವ ಮೂಲಕ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ಹಾಗೂ ರಾಷ್ಟ್ರಾಭಿಮಾನ ಮೂಡಿಸಬೇಕೆಂದು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ, ತರೀಕೆರೆ
ವಿದ್ಯಾರ್ಥಿಗಳಿಗೆ ನಮ್ಮ ದೇಶದ ಇತಿಹಾಸ ತಿಳಿಸುವ ಮೂಲಕ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ಹಾಗೂ ರಾಷ್ಟ್ರಾಭಿಮಾನ ಮೂಡಿಸಬೇಕೆಂದು ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಅಧ್ಯಕ್ಷ ಟಿ.ಆರ್. ಸೋಮಶೇಖರಯ್ಯ ಹೇಳಿದರು.ಪಟ್ಟಣದ ಶ್ರೀ ಪ್ರಹರ್ಷಿತ ವಿದ್ಯಾ ಸಂಸ್ಥೆ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶಾದ್ಯಂತ ಗಣರಾಜ್ಯೋತ್ಸವದ ಸಂಭ್ರಮಾಚರಣೆಯಲ್ಲಿ ನಮ್ಮ ಶಿಕ್ಷಕಿಯರು ಶಾಲಾ ಅವರಣದಲ್ಲಿ ದೇಶಕ್ಕೆ ತ್ಯಾಗ, ಬಲಿದಾನ ಕೊಟ್ಟ ಅನೇಕ ಮಹಾನ್ ವ್ಯಕ್ತಿಗಳು ಭಾವ ಚಿತ್ರವನ್ನುಇಟ್ಟಿ ಪೂಜಿಸಿ ಸ್ಮರಿಸಿ ವಿದ್ಯಾರ್ಥಿಗಳ ಜೀವನದಲ್ಲಿ ಪರಿವರ್ತನೆ ಉಂಟು ಮಾಡಿರುವುದು ಶ್ಲಾಘನೀಯ, ಭಾರತವನ್ನು ಸಾರ್ವಭೌಮ ಜಾತ್ಯ ತೀತ ಮತ್ತು ಪ್ರಜಾಪ್ರಭುತ್ವ ರಾಷ್ಟ್ರವನ್ನಾಗಿ ಘೋಷಿಸಿದ ಸುದಿನ ಎಂದು ಹೇಳಿದರು.
ಪ್ರಜಾಸತ್ತಾತ್ಮಕ ಪ್ರಜೆಗಳಿಂದ, ಪ್ರಜೆಗಳಿಗೋಸ್ಕರ ಪ್ರಜೆಗಳಿಗಾಗಿ ಕಾನೂನಿನ ವ್ಯವಸ್ಥೆ ಹಾಗೂ ಸಮಾಜದ ಕಟ್ಟಕಡೆ ವ್ಯಕ್ತಿಗೂ ಮೂಲಭೂತ ಸೌಕರ್ಯ ಸಿಗಬೇಕೆಂದು ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ ಸಂವಿಧಾನ ಅರ್ಪಿಸಿದ ದಿನ, ವಿದ್ಯಾರ್ಥಿಗಳ ಜೀವನದಲ್ಲಿ ದೇಶದ ಬಗ್ಗೆ, ಭಕ್ತಿ,ಗೌರವ ಭಾವನೆ, ಗುಣಗಳನ್ನು ಬೆಳೆಸಿಕೊಳ್ಳಬೇಕು ಹಾಗೂ ಭಾರತೀಯ ಸಂಸ್ಕೃತಿ ಬೆಳೆಸುವ ಜವಾಬ್ದಾರಿ ಶಿಕ್ಷಕಿಯರ ಮೇಲಿದೆ ಎಂದು ತಿಳಿಸಿದರು. ಮುಖ್ಯ ಶಿಕ್ಷಕಿ ವಿದ್ಯಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 194ನೇ ಹುತಾತ್ಮರಾದ ದಿನದಲ್ಲಿ ಮಾತನಾಡಿ ಕನ್ನಡ ನಾಡಿನ ವೀರ ಪುತ್ರ ಸ್ವಾತಂತ್ರ್ಯ ಸೇನಾನಿ ರಾಯಣ್ಣನ ಶೌರ್ಯ, ತ್ಯಾಗ, ಬಲಿದಾನ ಸದಾ ಸ್ಮರಣೀಯ, ಹುಟ್ಟು ಹಾಗೂ ಬಲಿದಾನ ದೇಶದ ಇತಿಹಾಸದಲ್ಲಿ ಹೆಚ್ಚು ಮಹತ್ವ ಪಡೆದಿದೆ. ಬ್ರಿಟಿಷರ ವಿರುದ್ಧ ನಾಡು ಹಾಗೂ ದೇಶದ ರಕ್ಷಣೆಗೆ ಕೆಚ್ಚೆದೆಯಿಂದ ಹೋರಾಡಿದ ಅಪ್ರತಿಮ ನಾಯಕ. ಕಿತ್ತೂರು ರಾಣಿ ಚೆನ್ನಮ್ಮ ಅವರ ಬಲಗೈ ಬಂಟನಾಗಿ ಕಾರ್ಯ ನಿರ್ವಹಿಸಿ ವೀರಯೋಧ ಎನಿಸಿ ಕೊಂಡವರು ಅವರ ಪ್ರಾಮಾಣಿಕತೆ ವಿದ್ಯಾರ್ಥಿಗಳಿಗೆ ಸ್ಪೂರ್ತಿ, ಇವರ ಆದರ್ಶ, ತತ್ವ ಸಿದ್ಧಾಂತಗಳು ಮತ್ತು ಧೈರ್ಯ, ಗುರಿ ಇಂದಿನ ವಿದ್ಯಾರ್ಥಿಗಳಲ್ಲಿ ಬೆಳೆಸುವ ಜವಾಬ್ದಾರಿ ಶಿಕ್ಷಕಿಯರ ಮೇಲೆ ಇದೆ ಎಂದು ಹೇಳಿದರು.ಸಂಸ್ಥೆಯ ಕಾರ್ಯದರ್ಶಿ ಲೀಲಾ ಸೋಮಶೇಖರಯ್ಯ, ಆಡಳಿತ ಮಂಡಳಿ ಸದಸ್ಯರು, ಪೋಷಕರು,ಶಾಲಾ ಅಡಳಿತಾಧಿಕಾರಿ ಅನೂಪ್, ಶಿಕ್ಷಕಿಯರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.26ಕೆಟಿಆರ್.ಕೆ.8ಃ
ತರೀಕೆರೆಯಲ್ಲಿ ಪ್ರಹರ್ಷಿತ ವಿದ್ಯಾ ಸಂಸ್ಥೆಯಿಂದ 76ನೇ ಗಣರಾಜ್ಯೋತ್ಸವ ದಿನಾಚರಣೆ ಏರ್ಪಡಿಸಲಾಗಿತ್ತು.