ಸಾರಾಂಶ
ನಂ 33 ಮಾಜಿ ಸೈನಿಕರ ಸಂಘ ಟಿ. ಶೆಟ್ಟಿಗೇರಿ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ನಂ 33 ಮಾಜಿ ಸೈನಿಕರ ಸಂಘ ಟಿ.ಶೆಟ್ಟಿಗೇರಿ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಿಸಲಾಯಿತು. ಈ ಸಂದರ್ಭ ಪಟ್ಟಣದ ವೃತ್ತದಲ್ಲಿರುವ ಅಮರ ಜವಾನ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಪುಷ್ಪ ನಮನವನ್ನು ಸಲ್ಲಿಸಿ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರಿಗಾಗಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಸಮಾರಂಭದಲ್ಲಿ ಸಂಘದ ಅಧ್ಯಕ್ಷ ಕಟ್ಟೇರ ವಿಶ್ವನಾಥ್, ಉಪಾಧ್ಯಕ್ಷರಾದ ಮನ್ನೇರ ರಮೇಶ್, ಕಾರ್ಯದರ್ಶಿ ಚಂಗುಲಂಡ ಸತೀಶ್, ಸಹ ಕಾರ್ಯದರ್ಶಿ ಅಪ್ಪಚಂಗಡ ಮೋಟಯ್ಯ, ಖಜಾಂಚಿ ಚೆಟ್ಟಂಗಡ ವಿಜಯ ಕಾರ್ಯಪ್ಪ, ನಿರ್ದೇಶಕರಾದ ಮಚ್ಚಮಾಡ ಮನುಕುಶಾಲಪ್ಪ, ಮಂದಮಾಡ ಬೆಳ್ಯಪ್ಪ, ಮೀದೇರಿರ ಸುರೇಶ, ಚೊಟ್ಟೆಯಂಡಮಾಡ ಅರಸು ಗೋಕುಲ, ಕರ್ನಂಡ ಕುಶಾಲಪ್ಪ, ಚೆಟ್ಟಂಗಡ ಪುಣ್ಯವತಿ, ಗೌರವ ಸಲಹೆಗರಾರರು ಕೈಬುಲೀರ ಪಾರ್ವತಿ ಬೋಪಯ್ಯ, ಚೆಟ್ಟಂಗಡ ಪುಣ್ಯವತಿ, ಮತ್ತು ಸಂಘದ ಸದಸ್ಯರು ಹಾಜರಿದ್ದರು.