ಸಾರಾಂಶ
ಕೊಡವ ಸಮಾಜದಲ್ಲಿ ಆಯೋಜನೆ । 140ಕ್ಕೂ ಅಧಿಕ ಜನರಿಂದ ತಪಾಸಣೆ
ಕನ್ನಡಪ್ರಭ ವಾರ್ತೆ ಶ್ರೀಮಂಗಲಟಿ. ಶೆಟ್ಟಿಗೇರಿ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ಹಾಗೂ ಗೋಣಿಕೊಪ್ಪ ಲೋಪಮುದ್ರ ಮೆಡಿಕಲ್ ಸೆಂಟರ್, ಲೋಪಮುದ್ರ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಟಿ. ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ಸೋಮವಾರ ಆರೋಗ್ಯ ತಪಾಸಣಾ ಉಚಿತ ಶಿಬಿರ ನಡೆಯಿತು. ಶಿಬಿರದಲ್ಲಿ ಸುಮಾರು 140 ಜನರು ಆರೋಗ್ಯ ತಪಾಸಣೆಯಲ್ಲಿ ಪಾಲ್ಗೊಂಡರು.ಶಿಬಿರವನ್ನು ಉದ್ಘಾಟಿಸಿದ ಲೋಪಮುದ್ರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಅಮೃತ್ ನಾಣಯ್ಯ ಮಾತನಾಡಿ, ಒಬ್ಬ ಮನುಷ್ಯನಿಗೆ ಅತಿ ಹೆಚ್ಚು ಪ್ರಾಮುಖ್ಯತೆ ಆರೋಗ್ಯವಾಗಿರುತ್ತದೆ. ಆರೋಗ್ಯವಿದ್ದವರಿಗೆ ನೂರಾರು ಆಸೆ ಆಕಾಂಕ್ಷೆ ಇರುತ್ತದೆ. ಆದರೆ ಅನಾರೋಗ್ಯ ಪೀಡಿತರಿಗೆ ಒಂದೇ ಆಸೆ ಆರೋಗ್ಯವಂತನಾಗುವುದು ಮಾತ್ರ ಎಂದು ತಿಳಿಸಿದರು.
ಲೋಪಮುದ್ರ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞೆ ಡಾ. ಸೌಮ್ಯ ನಾಣಯ್ಯ ಮಾತನಾಡಿ, ಉಚಿತ ಆರೋಗ್ಯ ಸೇವೆಗೆ ಒಂದು ಮೌಲ್ಯವಿರಬೇಕು. ಕೇವಲ ಪ್ರಚಾರ ಪಡೆದು ಹೋಗುವ ಉದ್ದೇಶ ಇರಬಾರದು. ಜನರಿಗೆ ಆರೋಗ್ಯ ಹಾಗೂ ಕಣ್ಣಿನ ಆರೋಗ್ಯ ಇದ್ದರೆ ಮಾತ್ರ ಜೀವನ. ಆರೋಗ್ಯ ಇಲ್ಲದಿದ್ದರೆ ಏನು ಇಲ್ಲ. ನಮ್ಮ ಆರೋಗ್ಯಕ್ಕೆ ನಾವು ಸಮಯ ಮೀಸಲಿಡಬೇಕು ಹೊರತು ಬೇರೆಯವರು ಮೀಸಲಿಡಲು ಸಾಧ್ಯವಿಲ್ಲ ಎಂದು ಹೇಳಿದರು.ಟಿ.ಶೆಟ್ಟಿಗೇರಿ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಮಾತನಾಡಿದರು.
ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಾಡ ರೇಷ್ಮಾ ಕಾರ್ಯಪ್ಪ ಮಾತನಾಡಿ, ಉತ್ತಮ ಅರೋಗ್ಯವೇ ಅತೀ ದೊಡ್ಡ ಆಸ್ತಿಯಾಗಿದೆ, ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಮುತುವರ್ಜಿ ಅಗತ್ಯ ಎಂದರು.ಡಾ.ಅಮೃತ್ ನಾಣಯ್ಯ, ಡಾ. ಸೌಮ್ಯ ನಾಣಯ್ಯ, ಡಾ.ತಸೀನಾ ತಿಮ್ಮಯ್ಯ, ಡಾ. ಸಿಂಧು, ಆಹಾರ ತಜ್ಞೆ ರಶ್ಮಿ ಹಾಗೂ ಸಿಬ್ಬಂದಿಯಿಂದ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು.
ಕೊಡವ ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಖಜಾಂಚಿ ಚಂಗುಲಂಡ ಸತೀಶ್, ಸಾಂಸ್ಕೃತಿಕ ಸಮಿತಿ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ, ನಿರ್ದೇಶಕಿಯರಾದ ಚಂಗುಲಂಡ ಅಶ್ವಿನಿ ಸತೀಶ್, ತಡಿಯಂಗಡ ಸೌಮ್ಯ ಕರುಂಬಯ್ಯ, ಕರ್ನಂಡ ರೂಪ ದೇವಯ್ಯ ಹಾಗೂ ಪೊಮ್ಮಕ್ಕಡ ಕೂಟದ ಉಪಾಧ್ಯಕ್ಷೆ ಮನ್ನೆರ ಸರು ರಮೇಶ್, ಕಾರ್ಯದರ್ಶಿ ಕಳ್ಳಿಚಂಡ ದೀನಾ ಉತ್ತಪ್ಪ ಮತ್ತು ನಿರ್ದೇಶಕಿಯರು ಪಾಲ್ಗೊಂಡಿದ್ದರು.