ಸಾರಾಂಶ
ಧಾರವಾಡ: ಉತ್ತರ ಪ್ರದೇಶದ ಸಹರನ್ಪೂರದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ 7ನೇ ರಾಷ್ಟ್ರೀಯ ಪ್ಯಾರಾ ಟೆಕ್ವಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದ ಜಿಲ್ಲೆಯ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಜಿಲ್ಲಾ ಟೆಕ್ವಾಂಡೋ ಸಂಸ್ಥೆ ಅಧ್ಯಕ್ಷ ಬಿ.ಎಸ್. ತಾಳಿಕೋಟಿ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಡವನ್ನು ಪ್ರತಿನಿಧಿಸಿದ್ದ ಜಿಲ್ಲೆಯ ಕ್ರೀಡಾಪಟುಗಳು ಪಿ.70 ಮಹಿಳೆಯರ ವಿಭಾಗದಲ್ಲಿ ನಫಿಜಾ ದುತಿಯಾ, ಪಿ. 45 ಪುರುಷರ ವಿಭಾಗದಲ್ಲಿ ಮಹೇಶ ಅಂಗಡಿ, ರೋಹನ ರಾಠೋಡ, ಪಿ. 40, ಕೆ. 40 ಮಹಿಳೆಯರ ವಿಭಾಗದಲ್ಲಿ ಖುಷಿ ತ್ಯಾಕರ್, ಶಿವಪ್ರಸಾದ ಬಂಗಾರದ ಪದಕ ಪಡೆದಿದ್ದಾರೆ. ಕೆ. 44 ಪುರುಷರ ವಿಭಾಗದಲ್ಲಿ ಮೈುಸ್, ಶಿವಶಂಕರ ಕಂಚಿನ ಪದಕ ಪಡೆದಿದ್ದಾರೆ. ಪುರುಷರ ಕೆ. 44 ವಿಭಾಗದಲ್ಲಿ ವಿಠ್ಠಲ್ ಹಾಗೂ ಮಂಜುನಾಥ ಅಂಬಿಗೇರ ಉತ್ತಮ ಸಾಧನೆ ಮಾಡಿದ್ದಾರೆ ಎಂದರು.
ಈ ಕ್ರೀಡಾಪಟುಗಳು ವೈಯಕ್ತಿಕ ಸಾಧನೆ ಜತೆಗೆ ಸಮಗ್ರ ರನ್ನರ್ ಅಪ್ ಸಹ ಪಡೆದಿದ್ದಾರೆ. ಕರ್ನಾಟಕದಿಂದ ಒಟ್ಟು 10 ಜನರು ಭಾಗವಹಿಸಿದ್ದರು. ಈ ಪೈಕಿ ಬಹುತೇಕರು ಉತ್ತಮ ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಎಲ್ಲ ಕ್ರೀಡಾಪಟುಗಳಿಗೆ ಅಂಜಲಿ ಪರಪ್ಪ ಕೆ., ಆನಂದ ಕೀಟದಾಳ ತರಬೇತಿ ನೀಡಿ ಸಾಧನೆಗೆ ಸಹಕಾರ ನೀಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಅಂಜಲಿ ಪರಪ್ಪ ಕೆ., ನಫಿಜಾ ದುತಿಯಾ, ಮಹೇಶ ಅಂಗಡಿ, ಖುಷಿ ತ್ಯಾಕರ್ ಇದ್ದರು.