ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ ಪಟ್ಟಣದ ಐತಿಹಾಸಿಕ ರಾವುತರಾಯ ಮಲ್ಲಯ್ಯನ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವ ಮೂಲಕ ನೂತನ ಜಾತ್ರಾ ಕಮಿಟಿಯ ಸದಸ್ಯರು ಸೇವಾ ಮನೋಭಾವ ಜೊತೆ ಜಾತ್ರೆ ಯಶಸ್ಸಿಗೆ ಶ್ರಮಿಸುವಂತೆ ತಹಸೀಲ್ದಾರ್ ಪ್ರಕಾಶ ಸಿಂದಗಿ ಕರೆ ನೀಡಿದರು.
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ಪಟ್ಟಣದ ಐತಿಹಾಸಿಕ ರಾವುತರಾಯ ಮಲ್ಲಯ್ಯನ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವ ಮೂಲಕ ನೂತನ ಜಾತ್ರಾ ಕಮಿಟಿಯ ಸದಸ್ಯರು ಸೇವಾ ಮನೋಭಾವ ಜೊತೆ ಜಾತ್ರೆ ಯಶಸ್ಸಿಗೆ ಶ್ರಮಿಸುವಂತೆ ತಹಸೀಲ್ದಾರ್ ಪ್ರಕಾಶ ಸಿಂದಗಿ ಕರೆ ನೀಡಿದರು.ಪಟ್ಟಣದ ರಾವುತರಾಯ ಮಲ್ಲಯ್ಯನ ದೇವಸ್ಥಾನದ ಆವರಣದಲ್ಲಿ ನೂತನ ದೇವಸ್ಥಾನದ ಕಮಿಟಿ ಹಾಗೂ ಸಾರ್ವಜನಿಕರ ಸಮ್ಮುಖದಲ್ಲಿ ದೇವಸ್ಥಾನದ ಹುಂಡಿ ತೆರೆಯುವುದಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಾತ್ರಾ ಮಹೋತ್ಸವಕ್ಕೆ ಸಕಲ ರೀತಿಯಲ್ಲಿ ವ್ಯವಸ್ಥೆ ಮಾಡಿಕೊಳ್ಳಬೇಕು. ವಿವಿಧ ಇಲಾಖೆಯ ಸಿಬ್ಬಂದಿ ವರ್ಗ ಹೆಚ್ಚಿನ ನಿಗಾ ಇಡಬೇಕು ಎಂದು ಹೇಳಿದರು.
ಜಾತ್ರಾ ಕಮಿಟಿ ಅಧ್ಯಕ್ಷ ವಿನೋದಗೌಡ ಪಾಟೀಲ ಹಾಗೂ ಉಪಾಧ್ಯಕ್ಷ ಶ್ರೀಧರ ನಾಡಗೌಡ ಮಾತನಾಡಿ, ಭಕ್ತರಿಗೆ ಸ್ಥಾನದ ಗ್ರಹ, ಶೌಚಾಲಯ, ಭಕ್ತರಿಗೆ ಇಳಿದುಕೊಳ್ಳಲು ಕೋಣೆಯ ವ್ಯವಸ್ಥೆ ದೀಪಾಲಂಕಾರ ಒಂದು ವಾರದಲ್ಲಿ ಮುಗಿಸಲಾಗುವುದು. ಅ.4 ರಿಂದ 8 ವರೆಗೆ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಕಾಶಿನಾಥ ತಳಕೇರಿ, ಪ್ರಕಾಶ ಮಲ್ಹಾರಿ ಮಾತನಾಡಿ, ಜಾತ್ರೆಗೆ ಬೇಕಾಗುವ ಸಕಲ ವ್ಯವಸ್ಥೆಗಳನ್ನು ನೂತನ ಕಮಿಟಿಯ ಸದಸ್ಯರು ಒಗ್ಗಟ್ಟಾಗಿ ಶ್ರಮವಹಿಸಿ ಯಶಸ್ವಿಗೊಳಿಸೋಣ ಎಂದರು.ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲು ಜಮಾದಾರ, ಮಲ್ಲನಗೌಡ ಪಾಟೀಲ, ಯಮನೂರಿ ಸಣ್ಣಕ್ಕಿ, ಮಲ್ಲು ನಾಟಿಕಾರ, ರಾಜು ಮೆಟಗಾರ, ರಮೇಶ ಮ್ಯಾಗೇರಿ, ರಾವುತ ಮೆಟಗಾರ, ಶಾಂತಪ್ಪ ಜಲಕತ್ತಿ, ಅಪ್ಪಾಜಿ ದೇಸಾಯಿ, ಶಿವನಗೌಡ ಯರನಾಳ, ಬಾಬು ಸೌದಿ, ರಮೇಶ ಅಂಗಡಿ, ನಾಗರಾಜ ಸಂಗಣ್ಣವರ ಸೇರಿದಂತೆ ಪಟ್ಟಣದ ಪ್ರಮುಖರು ಉಪಸ್ಥಿತರಿದ್ದರು.