ಪೌತಿ ಖಾತೆ ಆಂದೋಲನ ಪ್ರಯೋಜನ ಪಡೆಯಲು ತಹಸೀಲ್ದಾರ್ ಎಸ್. ರೇಣುಕಾ ಮನವಿ

| Published : Jul 10 2025, 12:46 AM IST

ಪೌತಿ ಖಾತೆ ಆಂದೋಲನ ಪ್ರಯೋಜನ ಪಡೆಯಲು ತಹಸೀಲ್ದಾರ್ ಎಸ್. ರೇಣುಕಾ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಬಹುಕಾಲದಿಂದ ಪೌತಿ ಖಾತೆಗಳನ್ನು ಅವರ ವಾರಸುದಾರರಿಗೆ ಹಸ್ತಾಂತರಿಸುವ ವಿಷಯದಲ್ಲಿ ವಿಳಂಬವಾಗುತ್ತಿತ್ತು. ಆದರೆ ಸರ್ಕಾರ ಇಂತಹ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಿಲ್ಲಿ ಪೌತಿ ಖಾತೆ ಆಂದೋಲನವನ್ನೇ ಆರಂಭಿಸಿದೆ.

ಹಾನಗಲ್ಲ: ತಾಲೂಕಿನಲ್ಲಿ ೨೨ ಸಾವಿರ ಪೌತಿ ಖಾತೆದಾರರಿದ್ದು, ಇಂತಹ ಖಾತೆಗಳ ವಾರಸುದಾರರಿಗೆ ಸರ್ಕಾರದ ವಿವಿಧ ಸೌಲಭ್ಯ ಪಡೆಯಲು ಅನುವು ಮಾಡಿಕೊಡಲು ವಾರಸುದಾರರ ಹೆಸರಿಗೆ ಖಾತೆಗಳನ್ನು ನಮೂದಿಸಲು ಸರ್ಕಾರ ಪೌತಿ ಖಾತೆ ಆಂದೋಲನ ಜಾರಿ ಮಾಡಿದ್ದು, ಈ ಆಂದೋಲನದ ಅನುಕೂಲ ಮಾಡಿಕೊಳ್ಳುವಂತೆ ತಹಸೀಲ್ದಾರ್ ಎಸ್. ರೇಣುಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬುಧವಾರ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬಹುಕಾಲದಿಂದ ಪೌತಿ ಖಾತೆಗಳನ್ನು ಅವರ ವಾರಸುದಾರರಿಗೆ ಹಸ್ತಾಂತರಿಸುವ ವಿಷಯದಲ್ಲಿ ವಿಳಂಬವಾಗುತ್ತಿತ್ತು. ಆದರೆ ಸರ್ಕಾರ ಇಂತಹ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಿಲ್ಲಿ ಪೌತಿ ಖಾತೆ ಆಂದೋಲನವನ್ನೇ ಆರಂಭಿಸಿದೆ. ಪಹಣಿ ಪತ್ರಿಕೆಯಲ್ಲಿ ಪೌತಿ ಆದ ಖಾತೆದಾರರ ಹೆಸರನ್ನು ಬದಲಾಯಿಸಿ ವಾರಸುದಾರರ ಹೆಸರನ್ನು ನೋಂದಾಯಿಸಲು ಈಗ ಅವಕಾಶವಾಗಿದೆ.

ತಾಲೂಕಿನಲ್ಲಿ ಇಂತಹ ೨೨ ಸಾವಿರ ಪ್ರಕರಣಗಳಿವೆ. ಇದರಿಂದ ಬೆಳೆವಿಮೆ, ಬ್ಯಾಂಕ್ ವ್ಯವಹಾರ ಹಾಗೂ ಸರ್ಕಾರಿ ಸೌಲಭ್ಯ ಪಡೆಯಲು ಅನಾನುಕೂಲವಾಗುತ್ತಿರುವುದನ್ನು ಗಮನಿಸಿದ ಸರ್ಕಾರ ಈಗ ಪೌತಿ ಖಾತೆ ಆಂದೋಲನದ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಲು ಅವಕಾಶವಾಗಿದೆ. ಇದಕ್ಕಾಗಿ ಪೋತಿದಾರರ ಮರಣ ಪ್ರಮಾಣಪತ್ರ, ವಂಶವೃಕ್ಷ ಪ್ರಮಾಣಪತ್ರ, ಚಾಲ್ತಿ ಪಹಣಿ ಪತ್ರಿಕೆ, ಪೌತಿ ಖಾತಾ ಅರ್ಜಿ, ವಂಶವೃಕ್ಷದಲ್ಲಿರುವ ಎಲ್ಲ ಸದಸ್ಯರ ಆಧಾರ ಕಾರ್ಡ್‌ಗಳನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಸಲ್ಲಿಸಿ ಖಾತೆ ಮಾಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಎಸ್. ರೇಣುಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾಗಿನೆಲೆಯಲ್ಲಿ ಗುರುಪೂರ್ಣಿಮಾ ಮಹೋತ್ಸವ ಇಂದು

ಹಾವೇರಿ: ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದಿಂದ ಕಾಗಿನೆಲೆಯ ಅಹಲ್ಯಾಬಾಯಿ ಹೋಳ್ಕರ್‌ ಸಭಾಭವನದಲ್ಲಿ ಜು. 10ರಂದು ಬೆಳಗ್ಗೆ 11 ಗಂಟೆಗೆ ಗುರುಪೂರ್ಣಿಮಾ ಮಹೋತ್ಸವ ಆಯೋಜಿಸಲಾಗಿದೆ.ಶಿವಮೊಗ್ಗದ ಕುರುಬರ ಜಡೆ ದೇವರಮಠದ ಸ್ವಾಮಿ ಅಮೋಘಸಿದ್ದೇಶ್ವರಾನಂದರ ನೇತೃತ್ವದಲ್ಲಿ ಅಂದು ಬೆಳಗ್ಗೆ 5 ಗಂಟೆಗೆ ರೇವಣಸಿದ್ದೇಶ್ವರ, ಬೀರಲಿಂಗೇಶ್ವರ, ಮೈಲಾರಲಿಂಗೇಶ್ವರ, ಮಹಾಸಿದ್ದೇಶ್ವರಿ, ಭಕ್ತ ಕನಕದಾಸರ ರುದ್ರಾಭಿಷೇಕ ಜರುಗಲಿದೆ. ಬೆಳಗ್ಗೆ 11 ಗಂಟೆಗೆ ಬೀರೇಂದ್ರ ಕೇಶವ ತಾರಕಾನಂದಪುರಿ ಸ್ವಾಮಿಗಳ 19ನೇ ವರ್ಷದ ಪುಣ್ಯಾರಾಧನೆ, ಗುರು ಪೂರ್ಣಿಮಾ ಮಹೋತ್ಸವ ನಡೆಯಲಿದೆ.ಸಾನ್ನಿಧ್ಯವನ್ನು ಕಾಗಿನೆಲೆ ಕ್ಷೇತ್ರದ ನಿರಂಜನಾನಂದಪುರಿ ಸ್ವಾಮೀಜಿ ವಹಿಸಲಿದ್ದಾರೆ. ಕಲ್ಲೋಡು ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ, ಕೆ.ಆರ್‌. ನಗರ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ, ತಿಂಥಣಿ ಬ್ರಿಡ್ಜ್‌ ಸಿದ್ದರಾಮಾನಂದಪುರಿ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರದೇಶ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಹನುಮಂತಗೌಡ ಗಾಜಿಗೌಡ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.