ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಹಾವಾಡಿಗರ ವಿರುದ್ಧ ಕ್ರಮ ಜರುಗಿಸಿ

| Published : Jan 22 2024, 02:20 AM IST

ಸುಳ್ಳು ಜಾತಿ ಪ್ರಮಾಣಪತ್ರ ಪಡೆದ ಹಾವಾಡಿಗರ ವಿರುದ್ಧ ಕ್ರಮ ಜರುಗಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ತಾಳಗುಪ್ಪ ಹೋಬಳಿಯ ಸಿರಿವಂತೆ ಗ್ರಾಮದ ಸರ್ವೆ ನಂ.74/4ರಲ್ಲಿ ಇರುವ ಜಮೀನಿನ ಮಾಲೀಕ ಬಸವರಾಜ್ ಗೌಡರ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿರುವ ಹಾವಾಡಿಗರ ಕೇರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಸದಸ್ಯರು ಸಾಗರ ಪಟ್ಟಣದ ಪೊಲೀಸ್ ಉಪ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಕನ್ನಡಪ್ರಭ ವಾರ್ತೆ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿಯ ಸಿರಿವಂತೆ ಗ್ರಾಮದ ಸರ್ವೆ ನಂ.74/4ರಲ್ಲಿ ಇರುವ ಜಮೀನಿನ ಮಾಲೀಕ ಬಸವರಾಜ್ ಗೌಡರ ಮೇಲೆ ಅಟ್ರಾಸಿಟಿ ಪ್ರಕರಣ ದಾಖಲಿಸಿರುವ ಹಾವಾಡಿಗರ ಕೇರಿಯವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ) ಸದಸ್ಯರು ಪಟ್ಟಣದ ಪೊಲೀಸ್ ಉಪ ಅಧೀಕ್ಷಕರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ವಕೀಲ ಪ್ರವೀಣಕುಮಾರ್ ಈ ಸಂದರ್ಭ ಮಾತನಾಡಿ, ಸಿರಿವಂತೆ ಗ್ರಾಮದ ಬಸವರಾಜ ಅವರಿಗೆ ಪಿತ್ರಾರ್ಜಿತವಾಗಿ ಬಂದಿರುವ ಜಮೀನಿನಲ್ಲಿ ಕೆಲಸ ಮಾಡಿಸಲು ಅಲ್ಲಿನ ಹಾವಾಡಿಗರ ಕೇರಿಯವರು ಬಿಡುತ್ತಿಲ್ಲ. ಅಲ್ಲದೇ ಜ.17ರಂದು ಸರ್ವೇ ನಂ.74/4ರ ಜಮೀನಿನಲ್ಲಿ ಅಕ್ರಮವಾಗಿ ಸಾಗುವಳಿ ತಡೆದು ಸಾಗರ ಗ್ರಾಮಾಂತರ ಠಾಣೆ ಪೊಲೀಸರು ಕರೆಸಿ, ಕೇರಿಯ ವೆಂಕಟೇಶ್, ಬಾಬು, ಲಕ್ಷ್ಮೀ, ಮಣಿಕಂಠ ಕೃಷ್ಣ ಎನ್ನುವವರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದರ ವಿರುದ್ಧವಾಗಿ ಹಾವಾಡಿಗರ ಕೇರಿಯವರು ದುರುದ್ದೇಶದಿಂದ ಅಟ್ರಾಸಿಟಿ ಪ್ರಕರಣ ಹಾಕಿದ್ದಾರೆ ಎಂದರು.

ನಿಷ್ಪಕ್ಷಪಾತ ತನಿಖೆ ನಡೆಸಿ:

ಇವರು ಅಟ್ರಾಸಿಟಿ ಕಾನೂನನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಹಾವಾಡಿಗರ ಕೇರಿಯವರ ವಿರುದ್ಧ ದಾವಣಗೆರೆಯಲ್ಲಿ ನಾಗರಿಕ ಜಾರಿ ನಿರ್ದೇಶನಾಲಯದಲ್ಲಿ ಪ್ರಕರಣವಿದ್ದು, ಬೆಂಗಳೂರಿಗೆ ವರದಿ ಕಳುಹಿಸಲಾಗಿದೆ. ಹಾವಾಡಿಗರು ಪರಿಶಿಷ್ಠ ಜಾತಿ ಪ್ರಮಾಣಪತ್ರ ಪಡೆದಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಅಟ್ರಾಸಿಟಿ ಪ್ರಕರಣದ ನಿಷ್ಪಕ್ಷ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಭರ್ಮಪ್ಪ ಮಾತನಾಡಿ, ಹಾವಾಡಿಗರು ಪ್ರವರ್ಗ 1ರಡಿ ಬರುತ್ತಾರೆ. ಆದರೆ, ಸ್ಥಳೀಯ ರಾಜಕಾರಣಿಗಳು ಓಟಿಗಾಗಿ ಅವರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಕೊಡಿಸಿದ್ದಾರೆ. ಇದರ ಲಾಭ ಪಡೆದು ಅವರು ಸರ್ಟಿಫಿಕೇಟ್ ಪಡೆದಿದ್ದಾರೆ. ಅಲ್ಲಿನ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಹೇಗೆ ಜಾತಿ ಪ್ರಮಾಣ ಪತ್ರ ನೀಡಿದರು? ಹೀಗಾಗಿ ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ ಅಧಿಕಾರಿಗಳನ್ನೂ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು.

ದಸಂಸ ತಾಲೂಕು ಸಂಘಟನಾ ಸಂಚಾಲಕ ರಮೇಶ್ ಬಂದಗದ್ದೆ, ಮಂಜುನಾಥ, ಶೇಖರ ಶೆಡ್ತಿಕೆರೆ, ಸಂದೇಶ ಸಾಗರ, ಪ್ರಥ್ವಿ, ಪ್ರದೀಪ್ ಸಾಗರ ಮೊದಲಾದವರಿದ್ದರು.

- - - -20ಕೆಎಸ್‌ಎಜಿ3:

ಸಾಗರದ ಡಿವೈಎಸ್‌ಪಿ ಕಚೇರಿಯಲ್ಲಿ ಹಾವಾಡಿಗರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಸಂಸ ಕಾರ್ಯಕರ್ತರು ಸಾಗರ ಪೊಲೀಸ್ ಉಪ ಅಧೀಕ್ಷಕರ ಕಚೇರಿ ಎದುರು ಪ್ರತಿಭಟಸಿಸಿ, ಮನವಿ ಸಲ್ಲಿಸಿದರು.