ಸಾರಾಂಶ
ಬೆಂಗಳೂರಿಗೆ ಅಕ್ರಮವಾಗಿ ಕಳಪೆ ಮಾಂಸ ಪೂರೈಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಹಿಂದು ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮೇಲೆ ದೌರ್ಜನ್ಯ ನಡೆಸಿದ ಎಸಿಪಿ ಚಂದನ ಕುಮಾರ ಅವರನ್ನು ಅಮಾನತುಗೊಳಿಸಬೇಕು ಹಾಗೂ ರಾಮ ನಗರದ ಹೆಸರನ್ನು ದಕ್ಷಿಣ ಬೆಂಗಳೂರು ಎಂಬುದಾಗಿ ಮರುನಾಮಕರಣ ಮಾಡಬಾರದು ಎಂದು ಆಗ್ರಹಿಸಿ ಹಿಂದು ರಾಷ್ಟ್ರ ಸಮನ್ವಯ ಸಮಿತಿ ಶನಿವಾರ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ದಾವಣಗೆರೆಯಲ್ಲಿ ಮನವಿ ಸಲ್ಲಿಸಿತು.
- ಹಿಂದು ರಾಷ್ಟ್ರ ಸಮನ್ವಯ ಸಮಿತಿ ಒತ್ತಾಯ
- ದೌರ್ಜನ್ಯ ಎಸಗಿದ ಎಸಿಪಿ ವಿರುದ್ಧ ಕ್ರಮಕ್ಕೆ ಆಗ್ರಹ- - -
ದಾವಣಗೆರೆ: ಬೆಂಗಳೂರಿಗೆ ಅಕ್ರಮವಾಗಿ ಕಳಪೆ ಮಾಂಸ ಪೂರೈಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಹಿಂದು ಕಾರ್ಯಕರ್ತ ಪುನೀತ್ ಕೆರೆಹಳ್ಳಿ ಮೇಲೆ ದೌರ್ಜನ್ಯ ನಡೆಸಿದ ಎಸಿಪಿ ಚಂದನ ಕುಮಾರ ಅವರನ್ನು ಅಮಾನತುಗೊಳಿಸಬೇಕು ಹಾಗೂ ರಾಮ ನಗರದ ಹೆಸರನ್ನು ದಕ್ಷಿಣ ಬೆಂಗಳೂರು ಎಂಬುದಾಗಿ ಮರುನಾಮಕರಣ ಮಾಡಬಾರದು ಎಂದು ಆಗ್ರಹಿಸಿ ಹಿಂದು ರಾಷ್ಟ್ರ ಸಮನ್ವಯ ಸಮಿತಿ ಶನಿವಾರ ಜಿಲ್ಲಾಧಿಕಾರಿ ಮುಖಾಂತರ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತು.ನಗರದ ಡಿಸಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ಮುಖಂಡರು ಮಾತನಾಡಿ, ರಾಮನಗರ ಹೆಸರು ಬದಲಾವಣೆಗೆ ರಾಜ್ಯಪಾಲರು ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದು ಎಂದರು.
ಗುರು ದತ್ತಾತ್ರೇಯ ಸೇವಾ ಟ್ರಸ್ಟ್‌ನ ರಾಘವೇಂದ್ರ ಅಂಗಡಿ, ಭಜರಂಗ ದಳ ಜಿಲ್ಲಾ ಗೋರಕ್ಷಾ ಪ್ರಮುಖ ಮಲ್ಲೇಶ ಪೂಜಾರ, ಅಪ್ಪು ಅಭಿಮಾನಿ ಬಳಗದ ಲೋಕೇಶ ಆಚಾರ್, ಹಿಂದೂ ಜನಜಾಗೃತಿ ಸೇನಾ ಸಮಿತಿ ಚೇತನ್, ಮಾಜಿ ಸೈನಿಕ ವೆಂಕಟೇಶ್ ರಾಯ್ಕರ್, ಹಿಂದೂ ಜನಜಾಗೃತಿ ಸಮಿತಿಯ ವಿಜಯ ರೇವಣಕರ್, ಸೋಮಶೇಖರ, ಪದ್ಮಾ, ನಿರ್ಮಲ ಇನ್ನಿತರರು ಇದ್ದರು.- - - -3ಕೆಡಿವಿಜಿ14:
ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ರಾಷ್ಟ್ರ ಸಮನ್ವಯ ಸಮಿತಿಯಿಂದ ದಾವಣಗೆರೆ ಡಿಸಿ ಜಿ.ಎಂ. ಗಂಗಾಧರ ಸ್ವಾಮಿ ಅವರಿಗೆ ಮನವಿ ಅರ್ಪಿಸಲಾಯಿತು.