ದಸರಾ ರಜೆ ಕಡಿತಗೊಳಿಸಿರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಿ

| Published : Oct 08 2024, 01:14 AM IST

ದಸರಾ ರಜೆ ಕಡಿತಗೊಳಿಸಿರುವ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ದಸರಾ ಹಬ್ಬದ ರಜೆಗಳನ್ನು ಕಡಿತಗೊಳಿಸಿ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕ್ರಿಶ್ಚಿಯನ್ ಹಾಗೂ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಇಲ್ಲಿನ ಶ್ರೀ ರಾಮಸೇನೆ ವತಿಯಿಂದ ತಾಲೂಕು ಕ್ಷೇತ್ರಾ ಶಿಕ್ಷಣಾಧಿಕಾರಿ ಹಾಗೂ ತಾಲೂಕು ಕಚೇರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು

ಕನ್ನಡಪ್ಱಭ ವಾರ್ತೆ ಪಾವಗಡ

ದಸರಾ ಹಬ್ಬದ ರಜೆಗಳನ್ನು ಕಡಿತಗೊಳಿಸಿ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಕ್ರಿಶ್ಚಿಯನ್ ಹಾಗೂ ಖಾಸಗಿ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ಇಲ್ಲಿನ ಶ್ರೀ ರಾಮಸೇನೆ ವತಿಯಿಂದ ತಾಲೂಕು ಕ್ಷೇತ್ರಾ ಶಿಕ್ಷಣಾಧಿಕಾರಿ ಹಾಗೂ ತಾಲೂಕು ಕಚೇರಿಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು

ಈ ವೇಳೆ ಮಾತನಾಡಿದ ಜಿಲ್ಲಾಧ್ಯಕ್ಷ ಪಾವಗಡದ ಅನಿಲ್ ಯಾದವ್, ಹಿಂದೂಗಳ ಪವಿತ್ರ ದಸರಾ ಹಬ್ಬದ ರಜೆಯನ್ನು ಸರ್ಕಾರ ಈಗಾಗಲೇ ಘೋಷಿಸಿದೆ. ಆದರೂ ಸರ್ಕಾರದ ಆದೇಶ ಲೆಕ್ಕಿಸದೇ ಕ್ರಿಶ್ಟಿಯನ್‌ಗೆ ಸಂಬಂಧಪಟ್ಟ ತಾಲೂಕಿನ ಹಲವಾರು ಶಾಲೆಗಳಲ್ಲಿ ತರಗತಿ ಮತ್ತು ಪರೀಕ್ಷೆ ನಡೆಸುವ ಮೂಲಕ ಹಿಂದೂ ಧರ್ಮದ ಪವಿತ್ರ ದಸರಾ ಹಬ್ಬ ಆಚರಣೆಗೆ ತೊಂದರೆ ನೀಡುತ್ತಿರುವುದು ಸರಿಯಲ್ಲ ಎಂದರು.ದಸರಾ ಹಬ್ಬದ ರಜೆಯನ್ನು ಕ್ರಿಸ್ಮಸ್‌ನಲ್ಲಿ ನೀಡುವ ಮೂಲಕ ಮತಾಂತರಕ್ಕೆ ಪ್ರೇರಣೆ ನೀಡಲಾಗುತ್ತಿದೆ. ಹಲವಾರು ವರ್ಷಗಳಿಂದ ಇಡೀ ರಾಜ್ಯದಲ್ಲಿ ಪ್ರಾಥಮಿಕ ಪ್ರೌಢ ಶಾಲೆಗಳು ದಸರಾ ರಜೆ ನೀಡುತ್ತಿರುವುದು ಸಂಪ್ರದಾಯ. ಆದರೆ ಈ ಪರಂಪರೆಯನ್ನು ಇತ್ತೀಚಿಗೆ ಉದ್ದೇಶ ಪೂರ್ವಕವಾಗಿ ತಡೆಯುವ ಷಡ್ಯಂತ್ರ ಇದಾಗಿದೆ ಎನ್ನುವುದು ಹಿಂದೂ ಸಮಾಜದ ವಿದ್ಯಾರ್ಥಿ ಪೋಷಕರಿಂದ ಕೇಳಿ ಬರುತ್ತಿದೆ. ಇದು ಮೇಲ್ನೋಟಕ್ಕೆ ಸತ್ಯ ಸಹ ಅನ್ನಿಸುತ್ತಿದೆ ಎಂದು ದೂರಿದರು. ಕ್ರಿಸ್ಮಸ್ ರಜೆ ಎಲ್ಲ ಶಾಲೆಗಳಿಗೆ ಕೊಡುವ ಉದ್ದೇಶವಾದರು ಏನು? ಕ್ರಿಶ್ಚಿಯನ್ ಶಾಲೆಯಲ್ಲಿ ಶೇ.95 ರಷ್ಟು ಹಿಂದೂ ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಏಕೆ ಅವರಿಗೆ 10 ದಿನದ ದಸರಾ ಹಬ್ಬದ ಹೆಚ್ಚುವರಿ ರಜೆ ನೀಡುವುದು. ಇದು ನಿಜಕ್ಕೂ ಧರ್ಮದ ವಿಷಯದಲ್ಲಿ ದೊಡ್ಡ ಪಿತೂರಿ ನಡೆಯುತ್ತಿದ್ದು, ತಕ್ಷಣವೇ ದಸರಾ ರಜೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಕ್ರಿಸ್ಮಸ್ ರಜೆ ರದ್ದುಗೊಳಿಸಬೇಕು. ಇದೇ ರೀತಿ ಮುಂದುವರಿದರೆ ಸರ್ಕಾರದ ಆದೇಶವನ್ನು ಧಿಕ್ಕರಿಸುವಂತಹ ಶಾಲೆಗಳಿಗೆ ಬೀಗ ಜಡಿದು ಪ್ರತಿಭಟನೆಗೆ ಸಜ್ಜಾಗಬೇಕಿದೆ ಎಂದು ಎಚ್ಚರಿಸಿದರು.ಇದೇ ವೇಳೆ ಜಿಲ್ಲಾ ಉಪಾಧ್ಯಕ್ಷ ರಾಮು,ಖಜಾಂಚಿ ಜಿತೇಂದ್ರ ಬಾಬು, ತಾಲೂಕು ಅಧ್ಯಕ್ಷ ರಾಮಾಂಜಿ,ಅಲಕುಂದಿರಾಜ್,ತಿರುಮಲೇಶ್, ಮಾರುತಿ,ಸ್ವರೂಪ,ನಿತಿನ್,ನಾಗೇಂದ್ರಯ್ಯ,ರಾಜಕುಮಾರ್,ರಾಮಪ್ಪ, ನಾಗರಾಜು,ಉಮೇಶ್‌ ಹಾಗೂ ಇನ್ನೂ ಆನೇಕ ಮಂದಿ ಶ್ರೀರಾಮ ಸೇನೆಯ ಪದಾಧಿಕಾರಿಗಳಿದ್ದರು.