ನೋಟಿಸ್‌ ನೀಡದೆ ಮನೆ ಕೆಡವಿದ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಿ

| Published : Jul 22 2025, 12:17 AM IST

ನೋಟಿಸ್‌ ನೀಡದೆ ಮನೆ ಕೆಡವಿದ ಪಿಡಿಒ ವಿರುದ್ಧ ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ದೇವಾಲಯದ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಯಾವುದೇ ನೋಟಿಸ್ ನೀಡದೇ ತಮ್ಮ ವಾಸದ ಮನೆಯನ್ನು ಆಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆಡವಿದ್ದಾರೆ ಎಂದು ಆಲೂರು ಗ್ರಾಮಸ್ಥ ಎ.ಎಂ.ಮಲ್ಲು ಆರೋಪಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ ದೇವಾಲಯದ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಯಾವುದೇ ನೋಟಿಸ್ ನೀಡದೇ ತಮ್ಮ ವಾಸದ ಮನೆಯನ್ನು ಆಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆಡವಿದ್ದಾರೆ ಎಂದು ಆಲೂರು ಗ್ರಾಮಸ್ಥ ಎ.ಎಂ.ಮಲ್ಲು ಆರೋಪಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಮನೆ ಜಂಜರ್ ಸಂಖ್ಯೆ 561 ರಲ್ಲಿ 8 ಅಂಕಣ, 562 ರಲ್ಲಿ 2ಅಂಕಣ ಜಾಗವಿದ್ದು, ನಮ್ಮ ತಾತ ಮುತ್ತಾತಂದಿರು ನೂರಾರು ವರ್ಷಗಳಿಂದ ವಾಸವಾಗಿದ್ದರು. ನಾವು ಕೂಡಾ ವಾಸವಾಗಿದ್ದು, ಅಗ ಇಲ್ಲದ ದೇವಾಲಯದ ಒತ್ತುವರಿ ಈಗ ಹೇಗೆ ಬರಲು ಸಾಧ್ಯ ಎಂದು ಪ್ರಶ್ನಿಸಿದರು.

ಮೂಲನಕಾಶೆಯಲ್ಲಿ ದೇವಾಲಯದ ಜಾಗವಿಲ್ಲ. ನಾವು ದೇವಾಲಯದ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದೇವೆ ಎಂದು ಕಳೆದ ಮೂರು ವರ್ಷದ ಹಿಂದೆ ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ನಾಡಹೆಂಚಿನ ಮನೆ ಹಾಗೂ ತೆಂಗಿನ ಗರಿಯಲ್ಲಿ ನಿರ್ಮಿಸಲಾದ ಶೆಡ್ಡನ್ನು ಉರುಳಿಸಿದ್ದಾರೆ. ಉತ್ತರ ದಿಕ್ಕಿನಲ್ಲಿ ನಮ್ಮ ಮನೆಯಿದ್ದು, ಪಶ್ಚಿಮ ದಿಕ್ಕಿಗೆ ರಸ್ತೆಯಿದೆ. ನಕಲಿ ಗ್ರಾಮ ನಕಾಶೆ ಸೃಷ್ಟಿಸಿ ನಮ್ಮ ಮನೆಯನ್ನು ಕೆಡವುವ ಕೆಲಸ ಮಾಡಲಾಗಿದೆ. ಗ್ರಾಮದ ರೈತ ಮುಖಂಡ ಮಹೇಶ್ ಪ್ರಭು ಇದೇ ವಿಚಾರವಾಗಿ ತಮಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಮನೆಯನ್ನು ಕೆಡವಿರುವ ವಿರುದ್ದ ನಾವು ಹೈಕೋರ್ಟಗೆ ಮೊಕದ್ದಮೆ ಹೂಡಿದ್ದೆವು. ಇದೀಗ ಹೈಕೋರ್ಟ್ ನಮ್ಮ ಪರವಾಗಿ ತೀರ್ಪು ನೀಡಿದೆ. ತೀರ್ಪು ಪ್ರಕಟವಾದ ದಿನದಿಂದ ಮನೆ ಕಂದಾಯ ಕಟ್ಟುತ್ತ ಬರುತ್ತಿದ್ದೇವೆ. ಮನೆ ಖಾತೆ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿಗೆ ಆರ್ಜಿ ಸಲ್ಲಿಸಿದ್ದರೂ ಪಿಡಿಒ ಖಾತೆ ಮಾಡಿಕೊಡುತ್ತಿಲ್ಲ. ಹೈಕೋರ್ಟ್ ತೀರ್ಪನ್ನು ಪಿಡಿಒ ಉಲ್ಲಂಘನೆ ಮಾಡಿದ್ದಾರೆ. ಜಿಲ್ಲಾಧಿಕಾರಿ. ಜಿಪಂ ಸಿಇಒ ಚಂದಕವಾಡಿ ಗ್ರಾಪಂ ಪಿಡಿಒ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು, ಮನೆ ಖಾತೆ ಮಾಡಿಕೊಡುವಂತೆ ಆದೇಶ ನೀಡಬೇಕು ಎಂದು ಆಗ್ರಹಿಸಿದರು. ಆಲೂರು ಗ್ರಾಮದ ಮಂಗಳಮ್ಮ ಜಗದಾಂಬ, ಪಾರ್ವತಮ್ಮ, ಜಿ.ಎಂ.ಶಂಕರ್, ಬಸವರಾಜು ಹಾಜರಿದ್ದರು.