ಬೆಳಗಾವಿ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಆತ್ಮಹತ್ಯೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಿ

| Published : Nov 07 2024, 11:53 PM IST / Updated: Nov 07 2024, 11:54 PM IST

ಬೆಳಗಾವಿ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಆತ್ಮಹತ್ಯೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ತಾಲೂಕು ಕಚೇರಿ ದ್ವಿತೀಯ ದರ್ಜೆ ಸಹಾಯಕರಾದ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ತಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಹಿರೇಕೆರೂರ ತಾಲೂಕು ಕಂದಾಯ ಇಲಾಖಾ ನೌಕರರ ಸಂಘದಿಂದ ತಹಸೀಲ್ದಾರ್‌ ಎಚ್.ಪ್ರಭಾಕರಗೌಡ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಹಿರೇಕೆರೂರು: ಬೆಳಗಾವಿ ತಾಲೂಕು ಕಚೇರಿ ದ್ವಿತೀಯ ದರ್ಜೆ ಸಹಾಯಕರಾದ ರುದ್ರಣ್ಣ ಯಡವಣ್ಣವರ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ತಪಿತಸ್ಥರ ಮೇಲೆ ಕ್ರಮ ಕೈಗೊಳ್ಳುವಂತೆ ಹಿರೇಕೆರೂರ ತಾಲೂಕು ಕಂದಾಯ ಇಲಾಖಾ ನೌಕರರ ಸಂಘದಿಂದ ತಹಸೀಲ್ದಾರ್‌ ಎಚ್.ಪ್ರಭಾಕರಗೌಡ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ಬೆಳಗಾವಿ ತಾಲೂಕು ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ದ್ವಿತೀಯ ದರ್ಜೆ ಸಹಾಯಕರಾದ ರುದ್ರಣ್ಣ ಯಡವಣ್ಣವರ ಕಚೇರಿಯ ತಹಸೀಲ್ದಾರ ಚೇಂಬರ್‌ನಲ್ಲಿಯೇ ಫ್ಯಾನ್‌ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ಅತ್ಯಂತ ವಿಷಾದನೀಯ ಸಂಗತಿಯಾಗಿರುತ್ತದೆ. ಸದರಿ ನೌಕರ ಆತ್ಮಹತ್ಯೆಗೂ ಮುನ್ನ ಕಚೇರಿಯ ವಾಟ್ಸಪ್ ಗ್ರೂಪ್ ನಲ್ಲಿ ತನ್ನ ಸಾವಿಗೆ ತಹಸೀಲ್ದಾರ್ ಹಾಗೂ ಸಿಬ್ಬಂದಿ ಕಾರಣರೆಂದು ಮೆಸೇಜ್ ಮಾಡಿರುತ್ತಾರೆ. ತಹಸೀಲ್ದಾರರು ಒಂದು ವರ್ಷದಿಂದ ಕಿರುಕುಳ ನೀಡುತ್ತಿರುವುದಾಗಿ ಹೇಳಿಕೊಂಡಿರುತ್ತಾರೆ. ಕಾರಣ, ನಮ್ಮಗಳ ವಿನಂತಿಪೂರ್ವಕ ಆಗ್ರಹವೇನೆಂದರೆ, ಮೃತ ನೌಕರನ ಸಾವಿನ ಕುರಿತು ನ್ಯಾಯೋಚಿತ ತನಿಖೆ ಕೈಗೊಂಡು ತಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಂದಾಯ ಇಲಾಖೆಯಲ್ಲಿ ಹುದ್ದೆಗಳು ಖಾಲಿ ಇರುವುದರಿಂದ ನೌಕರರು ಹೆಚ್ಚು ಕೆಲಸದ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಕಚೇರಿಗಳಲ್ಲಿ ವಿವಿಧ ಹಂತದ ಮೇಲಾಧಿಕಾರಿಗಳು ವಾಸ್ತವ ಸ್ಥಿತಿಯನ್ನು ಪರಿಶೀಲಿಸದೇ ಸಾರ್ವಜನಿಕರ ಎದುರಿಗೆ ನೌಕರರನ್ನು ನಿಂದಿಸುವುದು, ವೈಯುಕ್ತಿಕ ಕೆಲಸಗಳಿಗೆ ರಜೆ ನೀಡುವುದನ್ನು ನಿರಾಕರಿಸುವುದು ಮತ್ತು ನೌಕರರಿಗೆ ಅವರ ಸಾಮರ್ಥ್ಯಕ್ಕಿಂತ ಹೆಚ್ಚಿನ ಕೆಲಸಗಳನ್ನು ನೀಡುತ್ತಿದ್ದು ಇದರಿಂದ ನೌಕರರು ಮಾನಸಿಕವಾಗಿ ಒತ್ತಡವನ್ನು ಅನುಭವಿಸುತ್ತಿದ್ದಾರೆ. ಕಾರಣ ಖಾಲಿ ಇರುವ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಿ ನೌಕರರ ಕೆಲಸದ ಒತ್ತಡ ನಿವಾರಿಸಬೇಕು ಎಂದ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಎಸ್.ಆರ್. ಸಿದ್ದನಗೌಡ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ. ಎತ್ತಿನಮನಿ ಹಾಗೂ ಸರ್ಕಾರಿ ನೌಕರ ಸಂಘ ತಾಲೂಕು ಘಟಕ ನಿರ್ದೇಶಕ ಮೇಘರಾಜ ಮಾಳಗಿಮನಿ, ನಾಗರಾಜ ಕಟ್ಟಿಮನಿ, ಚನ್ನಬಸಪ್ಪ ಕಾಯಕದ, ಕಂದಾಯ ಇಲಾಖೆ ಸಿಬ್ಬಂದಿಗಳಾದ ಎನ್.ಎಸ್. ಸೋನೆ. ಕಲ್ಲಪ್ಪ ಲಮಾಣಿ. ಶಿವಾನಂದಪ್ಪ ಆಪಿನಕೊಪ್ಪ, ಸಂದೀಪ ಬರಡಿ, ಸಾಕಮ್ಮ ವಾಲ್ಮೀಕಿ, ವಾಣಿಶ್ರೀ ಹಿರೇಕೆರೂರು,ಆಶಾ ಶಿಗ್ಗಾಂವಿ, ನಂದಾ ಹಲಗೇರಿ ಕಾವ್ಯ.ಎಸ್ ಉಪಸ್ಥಿತರಿದ್ದರು.