ಗೋವಿನ ಮೇಲೆ ಕ್ರೌರ್ಯ ಮೆರೆದವರ ವಿರುದ್ಧ ಕ್ರಮ ಕೈಗೊಳ್ಳಿ: ಹರೀಶ ಹಾನಗಲ್ಲ ಎಚ್ಚರಿಕೆ

| Published : Jul 06 2025, 01:48 AM IST

ಗೋವಿನ ಮೇಲೆ ಕ್ರೌರ್ಯ ಮೆರೆದವರ ವಿರುದ್ಧ ಕ್ರಮ ಕೈಗೊಳ್ಳಿ: ಹರೀಶ ಹಾನಗಲ್ಲ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಮತಾಂಧ ವ್ಯಕ್ತಿಯೊಬ್ಬ ಗೋವಿನ ಮೇಲೆ ಅನುಚಿತವಾಗಿ ಲೈಂಗಿಕ ದೌರ್ಜನ್ಯ ಮೆರೆದಿರುವ ಘಟನೆ ನಡೆದಿರುವುದು ಹಿಂದುಗಳ ಮಾನವೀಯ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ.

ಹಾನಗಲ್ಲ: ತಾಲೂಕಿನಲ್ಲಿ ನಿರಂತರವಾಗಿ ಗೋವಿನ ಮೇಲಿನ ಕ್ರೌರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದ್ದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತಗಳು ಕಣ್ಮುಚ್ಚಿ ಕುಳಿತಿವೆ. ಈ ಅಕ್ರಮಗಳನ್ನು ತಡೆಯದಿದ್ದರೆ ಸಂಘಟನೆಯಿಂದ ತೀವ್ರ ಸ್ವರೂಪದ ಹೋರಾಟ ಅನಿವಾರ್ಯವಾಗುತ್ತದೆ ಎಂದು ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಯೋಜಕ ಹರೀಶ ಹಾನಗಲ್ಲ ಎಚ್ಚರಿಸಿದ್ದಾರೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಂದೂ ಜಾಗರಣ ವೇದಿಕೆ ಕಾಡಶೆಟ್ಟಿಹಳ್ಳಿ ಗ್ರಾಮದಲ್ಲಿ ಮತಾಂಧ ವ್ಯಕ್ತಿಯೊಬ್ಬ ಗೋವಿನ ಮೇಲೆ ಅನುಚಿತವಾಗಿ ಲೈಂಗಿಕ ದೌರ್ಜನ್ಯ ಮೆರೆದಿರುವ ಘಟನೆ ನಡೆದಿರುವುದು ಹಿಂದುಗಳ ಮಾನವೀಯ ಹಾಗೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ತಾಲೂಕಿನಲ್ಲಿರುವ ಅಕ್ರಮ ಕಸಾಯಿಖಾನೆಗಳ ಮೇಲೆ ದಾಳಿ ನಡೆದು ಪ್ರಕರಣ ದಾಖಲಾಗಿದ್ದರೂ ಸಹಿತ ಅವುಗಳು ಮತ್ತೆ ಗೋವುಗಳ ವಧೆಯಲ್ಲಿ ತೊಡಗಿಕೊಂಡಿವೆ. ಈ ರೀತಿಯ ಅಕ್ರಮ ಕಸಾಯಿಖಾನೆ ದಂಧೆಯಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿದ್ದರೆ ಗೋವಿನ ಮೇಲಿನ ಈ ರೀತಿಯ ಕ್ರೌರ್ಯಗಳು ನಡೆಯುತ್ತಿರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಪುಣ್ಯಕ್ಷೇತ್ರವಾದ ಪಂ. ಪಂಚಾಕ್ಷರಿ ಗವಾಯಿಗಳವರ ಹುಟ್ಟೂರಾದ ಕಾಡಶೆಟ್ಟಿಹಳ್ಳಿಯಲ್ಲಿ ಗವಾಯಿಗಳ ಮಠದ ಆವರಣದಲ್ಲಿಯೇ ದೇವರಿಗಾಗಿ ಸಮರ್ಪಿಸಿದಂಥ ಗೋವಿನ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ, ಕೋಮು ಸೌಹಾರ್ದಕ್ಕೆ ಧಕ್ಕೆ ತಂದಿರುವ ಮುಸ್ಲಿಂ ಸಮುದಾಯದ ವ್ಯಕ್ತಿಯ ಮೇಲೆ ತಕ್ಷಣವೇ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಬೇಕು. ಆತನ ಕುಟುಂಬವನ್ನು ಗಡಿಪಾರು ಪಾಡಿ ಆದೇಶ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾ ಸಹ ಸಂಯೋಜಕರಾದ ಚಂದ್ರು ತೆರೆದಹಳ್ಳಿ, ರವಿಚಂದ್ರ ಪುರೋಹಿತ, ಮನೋಜ ಕಲಾಲ, ತಾಲೂಕು ಸಂಯೋಜಕ ಲಿಖಿತ ಹದಲಗಿ, ಗಿರೀಶ ಕರಿದ್ಯಾವಣ್ಣನವರ ಸೇರಿದಂತೆ ಉಪಸ್ಥಿತರಿದ್ದರು.ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆಆಗ್ರಹ

ಹಾನಗಲ್ಲ: ತಾಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ನಡೆದ ಗೋವಿನ ಮೇಲೆ ಮನುಷ್ಯನಿಂದ ನಡೆದ ಅನೈಸರ್ಗಿಕ ಲೈಂಗಿಕ ಕ್ರಿಯೆ ಖಂಡನೀಯವಾಗಿದ್ದು. ಇದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಕೃತ್ಯ ಎಂದು ಅಖಿಲ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಕೋತಂಬರಿ ಕಿಡಿಕಾರಿದರು.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅತ್ಯಂತ ಪವಿತ್ರವಾದ ಕಾಡಶೆಟ್ಟಿಹಳ್ಳಿಯ ಮಠವೊಂದರ ಆವರಣದಲ್ಲಿ ಗೋವಿನ ಮೇಲೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆದ ಘಟನೆಯನ್ನು ಯಾವುದೇ ಕಾಲಕ್ಕೂ ಮುಚ್ಚಿ ಹಾಕುವ ಯತ್ನ ಆಡಳಿತದಿಂದ ನಡೆಯಬಾರದು ಎಂದರು.ಸರ್ಕಾರಿ ಆಡಳಿತ ಈ ಘಟನೆಯ ಸರಿಯಾದ ಪರಿಶೀಲನೆ ನಡೆಸಿ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಈಗಾಗಲೇ ಆರೋಪಿಯನ್ನು ಬಂಧಿಸಿರುವ ವಿಷಯ ತಿಳಿದಿದೆ. ಆದರೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯಕೂಡದು. ಈ ಘಟನೆ ಕುರಿತಂತೆ ಸರ್ಕಾರಿ ಆಡಳಿತಕ್ಕೆ ಎಲ್ಲ ಸಾಕ್ಷ್ಯಗಳು ಸಿಸಿ ಕ್ಯಾಮೆರಾ ಆದಿಯಾಗಿ ದೊರೆತಿದ್ದು, ಈ ವಿಷಯದಲ್ಲಿ ನಿಷ್ಕಾಳಜಿ ಸಲ್ಲದು ಎಂದರು.ಶೀಘ್ರವೇ ಪ್ರಮೋದ ಮುತಾಲಿಕ್ ಅವರು ಕಾಡಶೆಟ್ಟಿಹಳ್ಳಿಗೆ ಆಗಮಿಸಲಿದ್ದು, ತಾಲೂಕಿನ ಎಲ್ಲ ಹಿಂದೂಪರ ಸಂಘಟನೆಗಳು ಹಾಗೂ ವಿವಿಧ ಸಮಾಜದ ಮುಖಂಡರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಈ ಘಟನೆಯನ್ನು ಖಂಡಿಸಲಿದ್ದೇವೆ ಎಂದರು.ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ರೈತ ಸಂಘದ ತಾಲೂಕು ಅಧ್ಯಕ್ಷ ಸದಾನಂದಗೌಡ ಪಾಟೀಲ, ನ್ಯಾಯವಾದಿಗಳಾದ ರಾಜು ಗೌಳಿ, ವಿನಾಯಕ ಕುರುಬರ, ಪ್ರಶಾಂತ ಕಾಮನಹಳ್ಳಿ, ಸಿ.ಐ. ಪಾಟೀಲ, ಮುಖಂಡರಾದ ಸೋಮನಗೌಡ ಪಾಟೀಲ, ತಿರಕನಗೌಡ ಪಾಟೀಲ, ಮಲಕಪ್ಪ ಕೋತಂಬರಿ ಇದ್ದರು.