ಬೀಜ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ: ಎಂ.ಆರ್. ಪಾಟೀಲ

| Published : Oct 02 2024, 01:03 AM IST

ಬೀಜ ವಿತರಣೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಿ: ಎಂ.ಆರ್. ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ಕುಂದಗೋಳ ತಾಲೂಕಿನ ರೈತರಿಗೆ ಸಾಕಾಗುವಷ್ಟು ಕಡಲೆ ಬೀಜದ ದಾಸ್ತಾನು ಈಗಾಗಲೇ ಶೇಖರಣೆಯಲ್ಲಿದೆ ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.

ಕುಂದಗೋಳ: ರೈತ ನಮ್ಮ ದೇಶದ ಬೆನ್ನೆಲೆಬು. ಅವನು ಬೆಳೆದರೆ ನಾಡೆಲ್ಲ ಸಮೃದ್ಧಿ, ಅವಿನಿದ್ದರೆ ನಾವು ನೀವೆಲ್ಲ. ಕಾರಣ ಅನ್ನದಾತನಿಗೆ ಕಡಲೆ ಬೀಜದ ವಿತರಣೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಎಂ.ಆರ್. ಪಾಟೀಲ ಹೇಳಿದರು.

ಪಟ್ಟಣದ ಕೃಷಿ ಇಲಾಖೆಯ ಆವರಣದಲ್ಲಿ ಮಂಗಳವಾರ ಕಡಲೆ ಬೀಜ ವಿತರಣಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿ, ತಾಲೂಕಿನ ರೈತರಿಗೆ ಸಾಕಾಗುವಷ್ಟು ಕಡಲೆ ಬೀಜದ ದಾಸ್ತಾನು ಈಗಾಗಲೇ ಶೇಖರಣೆಯಲ್ಲಿದೆ. ಮಳೆಯು ಸಮರ್ಪಕವಾಗಿ ಆಗಿರುವುದರಿಂದ ರೈತರಿಗೆ ಬೀಜ ವಿತರಣೆ ಸಂದರ್ಭದಲ್ಲಿ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಈಗಾಗಲೇ ಸೂಚನೆ ನೀಡಲಾಗಿದೆ. ಬೀಜ ಖರೀದಿಗೆ ಆಗಮಿಸುವವರಿಗೆ ಕುಡಿಯುವ ನೀರಿನ ವ್ಯವಸ್ಥೆ, ಸರದಿ ಸಾಲಿನಲ್ಲಿ ನಿಲ್ಲಲು ನೆರಳಿನ ವ್ಯವಸ್ಥೆ ಮಾಡಬೇಕು. ಅಗತ್ಯ ಪ್ರಮಾಣದ ಗೊಬ್ಬರದ ದಾಸ್ತಾನಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಕರೆ ನೀಡಿದರು.ಸಹಾಯಕ ಕೃಷಿ ನಿರ್ದೇಶಕಿ ಭಾರತಿ ಮೆಣಸಿನಕಾಯಿ ಮಾತನಾಡಿದರು. ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ಪಪಂ ಸದಸ್ಯ ಗಣೇಶ ಕೋಕಾಟೆ, ಮುಖಂಡ ಅರವಿಂದ ಕಟಗಿ, ಮಲ್ಲಿಕ ಶಿರೂರ, ಕೃಷಿ ಇಲಾಖೆ ಅಧಿಕಾರಿ ಅಂಬಿಕಾ ಮಹೇದ್ರಕರ, ಸಿದ್ದು ಧಾರವಾಡ ಶೆಟ್ಟರ್, ಬಾಬಾಜಾನ ಮಿಶ್ರಿಕೋಟಿ, ಸತೀಶ್ ಪಾಟೀಲ, ನಾಗರಾಜ ಶಿಬಾರಗಟ್ಟಿ, ವಾಗೀಶ ಮಣಕಟ್ಟಿಮಠ ಸೇರಿ ಹಲವರಿದ್ದರು.