ಮತದಾನ ಹೆಚ್ಚಳಕ್ಕೆ ಸೂಕ್ತ ಕ್ರಮ ವಹಿಸಿ: ಅವಿನಾಶ ಶಿಂಧೆ

| Published : Mar 23 2024, 01:03 AM IST

ಮತದಾನ ಹೆಚ್ಚಳಕ್ಕೆ ಸೂಕ್ತ ಕ್ರಮ ವಹಿಸಿ: ಅವಿನಾಶ ಶಿಂಧೆ
Share this Article
  • FB
  • TW
  • Linkdin
  • Email

ಸಾರಾಂಶ

ನನ್ನ ಮತ ನನ್ನ ಹಕ್ಕು, ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುತ್ತೇನೆ ಎನ್ನುವ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಪ್ರತಿಶತ ಮತದಾನ ಹೆಚ್ಚಳ ಮಾಡುವುದಕ್ಕೆ ಸೂಕ್ತ ಕ್ರಮ ವಹಿಸಿ ಕೆಲಸ ಮಾಡಬೇಕು.

ಲಿಂಗಸುಗೂರು: ನನ್ನ ಮತ ನನ್ನ ಹಕ್ಕು, ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುತ್ತೇನೆ ಎನ್ನುವ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಪ್ರತಿಶತ ಮತದಾನ ಹೆಚ್ಚಳ ಮಾಡುವುದಕ್ಕೆ ಸೂಕ್ತ ಕ್ರಮ ವಹಿಸಿ ಕೆಲಸ ಮಾಡಬೇಕು ಎಂದು ಸಹಾಯಕ ಆಯುಕ್ತ ಅವಿನಾಶ ಶಿಂಧೆ ಕರೆ ನೀಡಿದರು.

ಪಟ್ಟಣದ ತಾಲೂಕ ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯ್ತಿ, ತಾಲೂಕ ಆಡಳಿತ, ತಾಲೂಕ ಪಂಚಾಯಿತಿ ವತಿಯಿಂದ ಸ್ವೀಪ್ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರತಿಜ್ಞೆ ಹಾಗೂ ವಾಗ್ದಾನ ಕಾರ್ಯಕ್ರಮದಲ್ಲಿ ಮತದಾನಕ್ಕಿಂತ ಇನ್ನೊಂದಿಲ್ಲ, ನಾನು ಖಚಿತವಾಗಿ ಮತದಾನ ಮಾಡುತ್ತೇನೆ, ಯಾವುದೇ ಮತದಾರ ಮತದಾನದಿಂದ ದೂರ ಉಳಿಯಬಾರದು, ಲೋಕಸಭಾ ಚುನಾವಣೆಯಲ್ಲಿ ಪ್ರತಿಶತ ಮತದಾನ ಹೆಚ್ಚಳ ಮಾಡುವ ಕುರಿತು ಅವರು ಪ್ರತಿಜ್ಞಾನ ವಿಧಿ ಬೋಧಿಸುತ್ತಾ ತಿಳಿಸಿದರು.

ತಹಸೀಲ್ದಾರ್‌ ಡಾ.ಮಲ್ಲಪ್ಪ ಯರಗೋಳ ಮಾತನಾಡಿ, ಕಳೆದ ಚುನಾವಣೆಗಿಂತ ಈ ಸಲದ ಚುನಾವಣೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮತದಾನ ನಡೆಯುವಂತೆ ಮಾಡಿ ಚುನಾವಣೆ ಮತದಾನ ಪ್ರಕ್ರಿಯೆ ಯಶಸ್ವಿಗೊಳಿಸೋಣ ಎಂದು ಕರೆ ನೀಡಿದರು.

ತಾಲೂಕ ಪಂಚಾಯಿತಿ ಇಒ ಅಮರೇಶ ಯಾದವ್ ಮಾತನಾಡಿ, ಸ್ವೀಪ್ ಸಮಿತಿಗೆ ನೀಡಿರುವ ಜವಾಬ್ದಾರಿಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು. ಕರ್ತವ್ಯ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಮತದಾನ ಯಶಸ್ವಿಗೊಳಸಿಬೇಕೆಂದು ಅಧಿಕಾರಿ, ಸಿಬ್ಬಂದಿಗೆ ಮನವಿ ಮಾಡಿದರು.

ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಅಮರೇಶ ಪಾಟೀಲ್, ಸಿಡಿಪಿಒ ಗೋಕುಲ ಸಾಬ, ಪಶು ಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರಾಚಪ್ಪ, ಉಪತಹಸೀಲ್ದಾರ್‌ ರಂಗಪ್ಪ ನಾಯಕ ದೊರೆ, ಕುಡಿಯುವ ನೀರಿನ ಎಇಇ ರಂಗಪ್ಪ ರಾಮದುರ್ಗ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಉಮೇಶ ಸಿದ್ದಾಪುರ, ಬಿಸಿಎಂ ಇಲಾಖೆ ರಮೇಶ ರಾಠೋಡ, ತಾ.ಪಂ ಎಡಿ ಮಂಜುನಾಥ ಜಾವೂರು, ಉದ್ಯೋಗ ಖಾತ್ರಿ ಯೋಜನೆ ಬಾಲಪ್ಪ ಈಚನಾಳ ಪಿಡಿಒಗಳಾದ ಶೋಭಾರಾಣಿ, ಶಶಿಕಲಾ ಪಾಟೀಲ್, ಗೀತಾ, ಗಂಗಮ್ಮ ಸೇರಿದಂತೆ ನಾನಾ ಇಲಾಖೆ ಅಧಿಕಾರಿ, ಸಿಬ್ಬಂದಿ ಇದ್ದರು.