ಸಾರಾಂಶ
ಬ್ಯಾಡಗಿ: ತಾಲೂಕಿನ ಕಾಗಿನೆಲೆ, ಕುಮ್ಮೂರು ಗ್ರಾಮ ಪಂಚಾಯಿತಿ ವಿವಿಧ ಗ್ರಾಮಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರುಚಿ ಬಿಂದಲ್ ಅವರು ಭೇಟಿ ನೀಡಿ ನರೇಗಾ, ಜಲಜೀವನ ಮಿಷನ್ ಕಾಮಗಾರಿ ವೀಕ್ಷಿಸಿದರಲ್ಲದೇ ಸಂಬಂಧಿಸಿದ ಕಡತಗಳ ಪರಿಶೀಲನೆ ನಡೆಸಿದರು.
ಬಳಿಕ ಕಾಗಿನಲೆ ಪ್ರಾಥಮಿಕ ಅರೋಗ್ಯ ಕೇಂದ್ರದ ನರೇಗಾ ಯೋಜನೆಯಲ್ಲಿ ನಿರ್ಮಿಸಿದ ಉದ್ಯಾನವನಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು. ಅಪೌಷ್ಟಿಕತೆ ಮಕ್ಕಳ ಕುರಿತು ಕ್ಯಾನ್ಸರ್ ರೋಗಿಗಳ ಬಗ್ಗೆ ಗರ್ಭಿಣಿಯರ ಬಗ್ಗೆ ವಿವರವಾದ ಮಾಹಿತಿಯನ್ನು ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.ಕಾಗಿನೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಪೌಷ್ಟಿಕತೆ ಮಕ್ಕಳು, ಕ್ಯಾನ್ಸರ್ ರೋಗಿಗಳು, ಗರ್ಭಿಣಿಯರ ಸವಲತ್ತುಗಳ ಕುರಿತು ಮಾಹಿತಿ ಪಡೆದರು. ಬಳಿಕ ಅಲ್ಲಿ ನಿರ್ಮಿಸಿದ ನರೇಗಾ ಯೋಜನೆಯ ಉದ್ಯಾನವನ, ಕುಮ್ಮೂರು ಪಾಸಿ ಪದ್ಮಾವತಿ ಪ್ರೌಢಶಾಲೆಯ ಭೋಜನಾಲಯ, ಆಟದ ಮೈದಾನ, ಅಮೃತ ಸರೋವರ ಕೆರೆ ಯೋಜನೆ ಕಾಮಗಾರಿ, ಸಂಜೀವಿನಿ ಶೆಡ್ ಇತ್ಯಾದಿ ಮಾಹಿತಿ ಪಡೆದರು.
ಕುಮ್ಮೂರು ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ಅವರು ಪಾಸಿ ಪದ್ಮಾವತಿ ಪ್ರೌಢಶಾಲೆಯಲ್ಲಿ ನರೇಗಾ ಯೋಜನೆಯಡಿ ನಿರ್ಮಿಸಿದ ನೂತನ ಭೋಜನಾಲಯ ಬಾಸ್ಕೆಟ್ ಬಾಲ್ ಆಟದ ಮೈದಾನವನ್ನು ವೀಕ್ಷಿಸಿ ಕಾಮಗಾರಿ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು, ಬಳಿಕ ನೆಲ್ಲಿಕೊಪ್ಪ ಗ್ರಾಮಕ್ಕೆ ಭೇಟಿ ನೀಡಿದ ಅವರು, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗುವನ್ನು ಕಂಡು ಮಗುವಿನ ತಾಯಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಜತೆ ಸಂವಾದ ನಡೆಸಿದರಲ್ಲದೇ 15 ದಿನದೊಳಗೆ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಗುವಿನ ತೂಕ ಹೆಚ್ಚಿಸಿಕೊಳ್ಳಲು ಅಗತ್ಯ ಕ್ರಮಗಳನ್ನು ಜರುಗಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಪರುಶುರಾಮ ಅಗಸನಹಳ್ಳಿ, ಎಡಿಪಿಸಿ ಮಹಾಂತೇಶ ನರೇಗಲ್, ತಾಂತ್ರಿಕ ಸಂಯೋಜಕ ಸಂತೋಷ ನಾಯ್ಕ, ಐಇಸಿ ಸಂಯೋಜಕ ಸಿ.ಜಿ. ಅಕ್ಷಯ ಕಾಗಿನೆಲೆ ಪಿಡಿಒ ವಿಶ್ವನಾಥ್ ಕಟ್ಟೇಗೌಡರ, ಕುಮ್ಮೂರು ಪಿಡಿಒ ಗದಿಗೆಪ್ಪ ಕೊಪ್ಪದ, ಅಧ್ಯಕ್ಷ ಮಾರುತಿ ಕಾಳಪ್ಪನವರ, ತಾಂತ್ರಿಕ ಸಹಾಯಕ ಮಂಜುನಾಥ್ ಗಣಕ ಯಂತ್ರ ನಿರ್ವಾಹಕ ಪ್ರಶಾಂತ್ ಜೋಶಿ, ಕಾರ್ಯದರ್ಶಿ ಹನುಮಂತಪ್ಪ, ತಾಂತ್ರಿಕ ಸಹಾಯಕಿ ರೇಖಾ ಹಿಂಡೇರ ಬಿಎಫ್‌ಟಿಗಳಾದ ಮಹೇಶ, ಕುಮಾರಸ್ವಾಮಿ ಹಿರೇಮಠ ಕಾಯಕ ಮಿತ್ರ ಹೊನ್ನಕ್ಕ ಮಾಸಣಗಿ, ಸಂಜೀವಿನಿ ಮಹಿಳಾ ಒಕ್ಕೂಟದ ಸದಸ್ಯರು ಗ್ರಾಮ ಪಂಚಾಯತಿ ಸಿಬ್ಬಂದಿ ಉಪಸ್ಥಿತರಿದ್ದರು.