ಸಾರಾಂಶ
ಹೋಟೆಲ್, ಅಂಗಡಿ ಮಾಲೀಕರು ಬೀಡಿ, ಸಿಗರೇಟ್, ಗುಟ್ಕಾ, ಪಾನ್ ಪರಾಗ್ ಹಾಗೂ ಇತರೆ ತಂಬಾಕು ಉತ್ಪನ್ನಗಳನ್ನು ಚಿಲ್ಲರೆ ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತ ರಾಘವೇಂದ್ರ ಅಂಗಡಿಗಳ ಮಾಲೀಕರಿಗೆ ಸಲಹೆ ನೀಡಿದರು.
ತಂಬಾಕು ನಿಯಂತ್ರಣ ಕೋಶದಿಂದ ಅರಿವು ಮೂಡಿಸುವ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಹೋಟೆಲ್, ಅಂಗಡಿ ಮಾಲೀಕರು ಬೀಡಿ, ಸಿಗರೇಟ್, ಗುಟ್ಕಾ, ಪಾನ್ ಪರಾಗ್ ಹಾಗೂ ಇತರೆ ತಂಬಾಕು ಉತ್ಪನ್ನಗಳನ್ನು ಚಿಲ್ಲರೆ ಮಾರಾಟ ಮಾಡದಂತೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ ಕ್ರಮ ವಹಿಸಬೇಕು ಎಂದು ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಸಮಾಜ ಕಾರ್ಯಕರ್ತ ರಾಘವೇಂದ್ರ ಅಂಗಡಿಗಳ ಮಾಲೀಕರಿಗೆ ಸಲಹೆ ನೀಡಿದರು.
ಶುಕ್ರವಾರ ತಾಲೂಕಿನ ಮೆಣಸೂರು, ಹೊಸರೋಡ್, ಸೌತಿಕೆರೆ, ಶೆಟ್ಟಿಕೊಪ್ಪ, ಮಡಬೂರು ಗ್ರಾಮಗಳಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ತಾಲೂಕು ತನಿಖಾ ದಳ ಕಾರ್ಯಾಚರಣೆ ತಂಡದಿಂದ ಧೂಮಪಾನ ನಿಷೇಧದ ಬಗ್ಗೆ ಹಾಗೂ ತಂಬಾಕು ಉತ್ನನ್ನಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, 2003ರ ತಂಬಾಕು ನಿಯಂತ್ರಣ ಕಾಯ್ದೆ (ಕೋಟ್ಪಾ)ಯಡಿ ಅಂಗಡಿ, ಹೋಟೆಲ್‌ಗಳಲ್ಲಿ ಚಿಲ್ಲರೆ ಮಾರಾಟ ಮಾಡದಂತೆ ಅರಿವು ಮೂಡಿಸುವ ಸಲುವಾಗಿ ತಂಡ ಸಂಚರಿಸಿತ್ತು. 18 ವರ್ಷದೊಳಗಿನವರಿಗೆ ತಂಬಾಕು ಉತ್ಪನ್ನ ನೀಡದಂತೆ ಅಂಗಡಿಯವರು ಕ್ರಮವಹಿಸಬೇಕು. ಪ್ರತೀ ತಿಂಗಳು ಗ್ರಾಪಂ ವ್ಯಾಪ್ತಿಯ ಹೋಟೆಲ್, ಅಂಗಡಿ ಮಾಲೀಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.ವಿವಿಧ ಅಂಗಡಿಗಳಲ್ಲಿ 12 ಪ್ರಕರಣಗಳನ್ನು ಪತ್ತೆ ಮಾಡಿ 2,200 ರು. ದಂಡ ವಿಧಿಸಲಾಯಿತು.ತನಿಖಾ ತಂಡದಲ್ಲಿ ಆರೋಗ್ಯ ನಿರೀಕ್ಷಕ ನಾಗೇಂದ್ರಪ್ಪ, ಶಿಕ್ಷಣ ಇಲಾಖೆ ಸೇವ್ಯಾನಾಯ್ಕ್, ಪೊಲೀಸ್ ಇಲಾಖೆ ಕೌಶಿಕ್ ಗೌಡ ಇದ್ದರು.