ಗ್ಯಾರಂಟಿ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ

| Published : Aug 18 2025, 12:00 AM IST

ಸಾರಾಂಶ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡ ಮತ್ತು ಮಧ್ಯಮವರ್ಗದವರ ಬದುಕನ್ನು ಸುಧಾರಿಸಲು ಮಹತ್ವಪೂರ್ಣವಾಗಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್‌ ತಿಳಿಸಿದರು. ಈ ಯೋಜನೆಗಳನ್ನು ಸಾರ್ವಜನಿಕರು, ವಿಶೇಷವಾಗಿ ಯುವಕರು ಹೆಚ್ಚು ಆಸಕ್ತಿಯಿಂದ ಬಳಸಿಕೊಳ್ಳಬೇಕು, ಯುವನಿಧಿ ಕುರಿತು ಯುವಕರು ಹೆಚ್ಚಿನ ಮಾಹಿತಿ ಪಡೆದು ತಕ್ಷಣವೇ ನೋಂದಾಯಿಸಿಕೊಳ್ಳಬೇಕು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಾಹಿತಿ ಬ್ಯಾನರ್‌ಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ಬಡ ಮತ್ತು ಮಧ್ಯಮವರ್ಗದವರ ಬದುಕನ್ನು ಸುಧಾರಿಸಲು ಮಹತ್ವಪೂರ್ಣವಾಗಿವೆ ಎಂದು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್‌ ತಿಳಿಸಿದರು.

ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಹಾಗೂ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಗೀಜಿಹಳ್ಳಿ ಧರ್ಮಶೇಖರ್‌, ಈ ಯೋಜನೆಗಳನ್ನು ಸಾರ್ವಜನಿಕರು, ವಿಶೇಷವಾಗಿ ಯುವಕರು ಹೆಚ್ಚು ಆಸಕ್ತಿಯಿಂದ ಬಳಸಿಕೊಳ್ಳಬೇಕು, ಯುವನಿಧಿ ಕುರಿತು ಯುವಕರು ಹೆಚ್ಚಿನ ಮಾಹಿತಿ ಪಡೆದು ತಕ್ಷಣವೇ ನೋಂದಾಯಿಸಿಕೊಳ್ಳಬೇಕು. ತಾಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಮಾಹಿತಿ ಬ್ಯಾನರ್‌ಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಸ್ವಚ್ಛತೆಗೆ ಗಮನ ಹರಿಸಬೇಕು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರಮುಖ ಸ್ಥಳಗಳಲ್ಲಿ ಬಸ್‌ ನಿಲುಗಡೆ ವ್ಯವಸ್ಥೆ ಮತ್ತು ಹೊಸವಾಗಿ ಆರಂಭಗೊಂಡ ಡಿಪ್ಲೋಮಾ ಹಾಗೂ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಬಸ್‌ ವ್ಯವಸ್ಥೆ ಮಾಡಬೇಕೆಂದು ಅವರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಬಸ್‌ ಡಿಪೋ ವ್ಯವಸ್ಥಾಪಕ ಕೃಷ್ಣಪ್ಪ ಅವರು, ಈ ಬಗ್ಗೆ ಯೋಜನೆ ಈಗಾಗಲೇ ಚಿಂತನೆಯಲ್ಲಿದ್ದು, ಶೀಘ್ರದಲ್ಲೇ ಸೇವೆ ಆರಂಭವಾಗಲಿದೆ ಎಂದು ಭರವಸೆ ನೀಡಿದರು.ಗೃಹಲಕ್ಷ್ಮೀ:

ಈಗಾಗಲೇ ಒಂದು ಕಂತು ಪಾವತಿಯಾಗಿದ್ದು, ಜೂನ್-ಜುಲೈ ಕಂತುಗಳನ್ನು ಗೌರಿ ಹಬ್ಬದೊಳಗೆ ಬಿಡುಗಡೆ ಮಾಡುವ ಸೂಚನೆ ಇದೆ. ಶೇಕಡ 99% ಸಾಧನೆ ಇದ್ದು, ಕೇವಲ 193 ಮಂದಿಗೆ ಬಾಕಿಯಿದೆ ಎಂದು ಹೇಳಿದರು.ಗೃಹಜ್ಯೋತಿ:

ಅಧಿಕಾರಿ ಮಂಜುನಾಥ್‌ ಪ್ರಕಾರ ಶೇಕಡ 99.73% ಸಾಧನೆ ಇದ್ದರು 224 ಅರ್ಜಿದಾರರು ಲೈಟ್‌ ಬಿಲ್ ಮತ್ತು ಆಧಾರ್‌ ನೀಡಿದರೆ ತಕ್ಷಣ ಸೇವೆ ದೊರೆಯಲಿದೆ ಎಂದು ವಿವರಿಸಿದರು.ಯಾವುದೇ ಗ್ಯಾರಂಟಿ ಯೋಜನೆಯ ವೇತನವಿತರಣೆಯಲ್ಲಿ ವಿಳಂಬವಿಲ್ಲ. ತಿಂಗಳಿಗೆ ಸರಿಯಾಗಿ ಹಣ ಪಾವತಿಸಲಾಗುತ್ತಿದೆ ಎಂದು ಸಮಿತಿ ಸದಸ್ಯರು ತಿಳಿಸಿದರು. ಪಡಿತರ ವಿತರಣೆಯ ವಿಷಯದಲ್ಲಿ ಬಾಲು ಅವರು ಮಾತನಾಡಿ, ಈವರೆಗೆ ಪಡಿತರ ವಿತರಣೆಯಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ. ತಿದ್ದುಪಡಿ ಅಗತ್ಯವಿದ್ದರೆ ಪೋರ್ಟಲ್‌ ಮೂಲಕ ಉಪಯೋಗಿಸಬಹುದು ಎಂದು ತಿಳಿಸಿದರು.ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಎಚ್.ಕೆ. ಸತೀಶ್‌, ಸಮಿತಿಯ ಸದಸ್ಯರಾದ ಕೃಷ್ಣೇಗೌಡ, ಚಾಂದ್‌ಪಾಷ್‌, ಶಿವಕುಮಾರ್‌, ಲೋಕೇಶ್‌, ವಿರೂಪಾಕ್ಷಪ್ಪ, ಬಸವರಾಜು, ಪ್ರದೀಪ್‌, ಸಿದ್ದೇಶ್‌ ಜಾಜೂರು, ಎ.ಎಸ್. ಬಸವರಾಜು, ಕಮಲಮ್ಮ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.