ಸಹಕಾರಿ ಸಂಘಗಳಲ್ಲಿ ಯೋಜನೆಗಳ ಲಾಭ ಪಡೆಯಿರಿ: ವಿಶ್ವನಾಥರೆಡ್ಡಿ
2 Min read
KannadaprabhaNewsNetwork
Published : Oct 09 2023, 12:45 AM IST
Share this Article
FB
TW
Linkdin
Whatsapp
ಶಹಾಪುರ ನಗರದ ಸರಕಾರಿ ನೌಕರರ ಭವನದಲ್ಲಿ ಸಹಕಾರ ಮಹಾ ಮಂಡಳಿ ವತಿಯಿಂದ ತರಬೇತಿ ಕಾರ್ಯಾಗಾರ ನಡೆಯಿತು. | Kannada Prabha
Image Credit: KP
ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಸಹಕಾರಿ ಯೂನಿಯನ್ ಒಕ್ಕೂಟದ ಅಧ್ಯಕ್ಷ ಸಲಹೆ
ಶಹಾಪುರ: ಸಹಕಾರಿ ಸಂಘಗಳಲ್ಲಿ ಜನಪರವಾದ ಸಾಕಷ್ಟು ಯೋಜನೆಗಳಿವೆ. ತರಬೇತಿ ಪಡೆಯುವ ಮೂಲಕ ಹೆಚ್ಚಿನ ಅನುಭವ ಪಡೆದು ಅವುಗಳ ಪ್ರಯೋಜನ ಪಡೆಯಲು ಮುಂದಾಗಬೇಕಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟದ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಾಪೂರ್ ಹೇಳಿದರು. ನಗರದ ಸರ್ಕಾರಿ ನೌಕರರ ಭವನದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಯಾದಗಿರಿ ಜಿಲ್ಲಾ ಸಹಕಾರ ಯೂನಿಯನ್ ಒಕ್ಕೂಟ ನಿ. ಯಾದಗಿರಿ, ಜಿಲ್ಲಾ ಸಹಕಾರ ಇಲಾಖೆಗಳ ಆಶ್ರಯದಲ್ಲಿ ಜಿಲ್ಲಾಮಟ್ಟದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ಸಂಘಗಳಿಗೆ ಅಭಿವೃದ್ಧಿಗೆ ನಾವೆಲ್ಲರೂ ಒಕ್ಕೂಟದ ಮುಖಾಂತರ ಸಲಹೆ ನೀಡೋಣ ಮತ್ತು ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಪ್ರತಿ ತಿಂಗಳಿಗೊಮ್ಮೆ ತರಬೇತಿ ಇರುತ್ತದೆ. ಈ ತರಬೇತಿಯಲ್ಲಿ ಅನುಭವ ಪಡೆದು ಬ್ಯಾಂಕ್ ಅಭಿವೃದ್ಧಿ ಮಾಡಲು ಸಾಧ್ಯ ಎಂದರು. ಜಿಲ್ಲಾ ಮಟ್ಟದ ಕಾರ್ಯಾಗಾರ ತರಬೇತಿ ಕಾರ್ಯಕ್ರಮವನ್ನು ಜಿಲ್ಲಾಮಟ್ಟದ ಎಲ್ಲಾ ಸಹಕಾರಿ ಸಂಘಗಳು ಮತ್ತು ಬ್ಯಾಂಕ್‌ನ ಎಲ್ಲಾ ಲೆಕ್ಕ ಪರಿಶೋಧನೆ ಬಗ್ಗೆ ಹಾಗೂ ಸಹಕಾರ ಬ್ಯಾಂಕುಗಳ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳವಣಿಗೆಗೆ ತರಬೇತಿ ನೀಡಲು ಜಿಲ್ಲಾ ಮತ್ತು ತಾಲ್ಲೂಕಿನಾದ್ಯಂತ ಯಶಸ್ವಿಯಾಗಲಿ ಎಂದು ಹಾರೈಸಿದರು. ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಅಧ್ಯಕ್ಷರರಾದ ಗುರುನಾಥರಡ್ಡಿ ಪಾಟೀಲ್ ಹಳಿಸಗರ ಅವರು, ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಹಕಾರ ಸಂಘಗಳಿಗೆ ಅಭಿವೃದ್ಧಿಗೆ ನಾವೆಲ್ಲರೂ ಒಕ್ಕೂಟದ ಮುಖಾಂತರ ಸಲಹೆ ನೀಡೋಣಾ ಮತ್ತು ಸಹಕಾರಿ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳಿಗೆ ಪ್ರತಿ ತಿಂಗಳಗೊಮ್ಮೆ ತರಬೇತಿ ಇರುತ್ತದೆ ಈ ತರಬೇತಿಯಲ್ಲಿ ಅನುಭವ ಪಡೆದು ಬ್ಯಾಂಕ್ ಅಭಿವೃದ್ಧಿ ಮಾಡಲು ಸಾಧ್ಯ.ಸಹಕಾರ ಸಂಘಗಳಿಂದ ಗ್ರಾಮೀಣ ಮಟ್ಟದ ವ್ಯಾಪಾರ ವಹಿವಾಟು ಹೆಚ್ಚು ಹೆಚ್ಚಾಗಿ ಅಭಿವೃದ್ಧಿಯಾಗಲಿ ಎಂದು ಹಾರೈಸಿದರು. ತರಬೇತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಎಂ.ಬಿ. ಬಾಳಿಗಿರಿ ಸಹಕಾರಿ ಸಂಘಗಳು ಬಗ್ಗೆ ಹಲವಾರು ರೀತಿಯ ಅಧ್ಯಕ್ಷರುಗಳಿಗೆ ಮತ್ತು ಕಾರ್ಯದರ್ಶಿಗಳಿಗೆ ತರಬೇತಿ ನೀಡಿದರು. ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟದ ಉಪಾಧ್ಯಕ್ಷ ಎಂ. ನಾರಾಯಣ, ಜಿಲ್ಲಾ ಸಹಕಾರಿ ಯೂನಿಯನ್ ಒಕ್ಕೂಟದ ನಿರ್ದೇಶಕ ವೈಜನಾಥ ಪಾಟೀಲ್, ಲೆಕ್ಕಪರಿಶೋಧಕರ ಸಂಪನ್ಮೂಲಗಳ ವ್ಯಕ್ತಿ, ಸೇಡಂ ಗೋವಿಂದಪ್ಪ, ಜಿಲ್ಲಾ ನಿರ್ದೇಶಕ ಅಂಬ್ರಣ್ಣಗೌಡ ಗಡ್ಡೆಸೂಗೂರ, ಕೆಂಚಪ್ಪ ನಗನೂರು, ಪಿಎಲ್‌ಡಿ ಬ್ಯಾಂಕಿನ ಮಾಜಿ ಅಧ್ಯಕ್ಷ ಶಾಂತಗೌಡ ಸಾದ್ಯಪೂರ, ಜಿಲ್ಲಾ ಸಹಕಾರಿ ಶಿಕ್ಷಕಿ ಸುಜಾತ ಮಠ ಇತರರಿದ್ದರು. ತಿಪ್ಪಣ್ಣ ಖ್ಯಾತನಾಳ ನಿರೂಪಿಸಿದರು. ಕಾಶಿಬಾಯಿ ಮಲಗೊಂಡ ವಂದಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.