ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರ ಸದುಪಯೋಗ ಪಡೆಯಿರಿ: ಶಾಸಕ ತಮ್ಮಯ್ಯ

| Published : Oct 03 2024, 01:18 AM IST

ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರ ಸದುಪಯೋಗ ಪಡೆಯಿರಿ: ಶಾಸಕ ತಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ದಾವಣಗೆರೆ ವಿಶ್ವ ಆರೋಗ್ಯ ಕ್ಯಾನ್ಸರ್‌ ಆಸ್ಪತ್ರೆಯಿಂದ ಪ್ರತೀ 2ನೇ ಹಾಗೂ 4ನೇ ಬುಧವಾರ ನಗರದ ಮಲ್ಲೇಗೌಡ ಆಸ್ಪತ್ರೆಯಲ್ಲಿ ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಇದರ ಪ್ರಯೋಜನವನ್ನು ನಗರದ ನಾಗರಿಕರು ಪಡೆದುಕೊಳ್ಳುವಂತೆ ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.

₹ 2 ಕೋಟಿ ವೆಚ್ಚದ ಸುಸಜ್ಜಿತ ಲ್ಯಾಬ್ ಲೋಕಾರ್ಪಣೆ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ದಾವಣಗೆರೆ ವಿಶ್ವ ಆರೋಗ್ಯ ಕ್ಯಾನ್ಸರ್‌ ಆಸ್ಪತ್ರೆಯಿಂದ ಪ್ರತೀ 2ನೇ ಹಾಗೂ 4ನೇ ಬುಧವಾರ ನಗರದ ಮಲ್ಲೇಗೌಡ ಆಸ್ಪತ್ರೆಯಲ್ಲಿ ಉಚಿತ ಕ್ಯಾನ್ಸರ್‌ ತಪಾಸಣಾ ಶಿಬಿರ ಆಯೋಜಿಸಲಾಗಿದ್ದು, ಇದರ ಪ್ರಯೋಜನವನ್ನು ನಗರದ ನಾಗರಿಕರು ಪಡೆದುಕೊಳ್ಳುವಂತೆ ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.ನಗರದ ಮಲ್ಲೇಗೌಡ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಸುಮಾರು ₹2 ಕೋಟಿ ವೆಚ್ಚದ ಸುಸಜ್ಜಿತವಾದ ಎಲ್ಲಾ ಸೌಕರ್ಯವುಳ್ಳ ನೂತನ ಲ್ಯಾಬೋರೇಟರಿ ಉದ್ಘಾಟಿಸಿದರು ಮಾತನಾಡಿದ ಅವರು, ಮೆಡಿಕಲ್‌ ಕಾಲೇಜು ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾಮಗಾರಿ ನಡೆಯುತ್ತಿದ್ದು, ಇದು ಪೂರ್ಣಗೊಳ್ಳಲು ಕೆಲವು ವರ್ಷ ತೆಗೆದು ಕೊಳ್ಳುತ್ತದೆ. ಅಲ್ಲಿಯವರೆಗೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಇರಬೇಕೆಂಬ ದೃಷ್ಟಿಯಿಂದ ಜಿಲ್ಲಾ ಸರ್ಜನ್ ಮೋಹನ್‌ಕುಮಾರ್‌ ಸಾಮಾಜಿಕ ಕಾಳಜಿ ಯಿಂದ ಹೊಸ ಲ್ಯಾಬ್‌ ಉದ್ಘಾಟನೆಯಾಗಿದೆ ಎಂದು ಹೇಳಿದರು.ರಕ್ತ ತಪಾಸಣೆಗೆ ಬಂದಾಗ ಒಂದು ಅಥವಾ ಎರಡನ್ನು ಮಾತ್ರ ಮಾಡಿ ಉಳಿದ ತಪಾಸಣೆಗಳಿಗೆ ಹೊರಗಿನ ಲ್ಯಾಬ್‌ಗಳಿಗೆ ಹೋಗುವ ಪರಿಸ್ಥಿತಿ ಇತ್ತು, ಇಂದು ನೂತನ ಲ್ಯಾಬೋರೇಟರಿ ಆರಂಭವಾಗಿರುವುದರಿಂದ ಬಹುತೇಕ ಯಾವುದೇ ರಕ್ತದ ಮಾದರಿ ತಪಾಸಣೆ ಇಲ್ಲಿ ಲಭ್ಯವಾಗಲಿದೆ. ಕೇವಲ ಒಂದು ಗಂಟೆಯಲ್ಲಿ ವರದಿ ನೀಡುವ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದರು.ಥೈರಾಯಿಡ್, ಸಿಎಸ್‌ಆರ್, ಎಸ್‌ಜಿ, ಸಿಎ 125, ಸಿಎ 19 ಮುಂತಾದ ವಿಶೇಷ ಪರೀಕ್ಷೆ ಮಾಡುವಂತಹ ಸಂಪೂರ್ಣ ಸ್ವಯಂಚಾಲಿತ ಹಾರ್ಮೋನ್ ವಿಶ್ಲೇಷಕ ಪ್ರಾರಂಭ ಮಾಡಲಾಗಿದೆ. ಯಾವುದೇ ರೀತಿ ದೊಡ್ಡ ಕಾಯಿಲೆ ಬರಬಾರದೆಂದು ಪ್ರಾರ್ಥಿಸುತ್ತೇನೆಂದರು. ಈಗಾಗಲೇ ಮೆಡಿಕಲ್‌ ಕಾಲೇಜಿನಲ್ಲಿ ಹಾಲಿ 86 ಜನ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ .ಆದ್ದರಿಂದ ಯಾವುದೇ ರೀತಿಯ ವೈದ್ಯರ ಕೊರತೆ ಇಲ್ಲ, ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ಕಾಯಿಲೆಗಳಿಗೂ ವಿಶೇಷ ವೈದ್ಯರಿದ್ದಾರೆಂದು ಹೇಳಿದರು.

ಮಲ್ಲೇಗೌಡ ಸರ್ಕಾರಿ ಅಸ್ಪತ್ರೆಯಲ್ಲಿ ಒಳ ಮತ್ತು ಹೊರ ರೋಗಿಗಳ ಸಂಖ್ಯೆ ಹೆಚ್ಚಳವಾಗಿದ್ದು, ಅದೇ ರೀತಿ ಮಂಗಳೂರು ಹಾಸನಕ್ಕೆ ಹೋಗುವವರ ಸಂಖ್ಯೆ ಬಹಳ ಇತ್ತು, ಈಗ ಆ ಪರಿಸ್ಥಿತಿ ಇಲ್ಲ. ಎಲ್ಲಾ ಸೌಲಭ್ಯ ಇದೇ ಆಸ್ಪತ್ರೆಯಲ್ಲಿ ದೊರೆಯಲಿವೆ ಎಂದರು.ಜಿಲ್ಲಾಸ್ಪತ್ರೆ ಜಿಲ್ಲಾ ಸರ್ಜನ್‌ ಡಾ.ಮೋಹನ್‌ಕುಮಾರ್ ಮಾತನಾಡಿ, ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆಗಳ ಅವಶ್ಯಕತೆ ಇತ್ತು, ಅದು ಇಂದು ಈಡೇರಿದೆ. ಬಡವರಿಗೆ ಇದರಿಂದ ಬಹಳ ಉಪಕಾರಿಯಾಗಿದೆ. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ವೈದ್ಯರ ರಕ್ಷಣೆಗೆ ಸಹಾಯವಾಗಲಿ ಎಂಬ ಕಾರಣದಿಂದ ಹೋಂಗಾರ್ಡ್‌ಗಳನ್ನು ನೇಮಕ ಮಾಡಿಕೊಂಡಿದ್ದೇವೆ. ನೂತನ ಲ್ಯಾಬ್‌ಗಳಿಗೆ ರಸ್ತೆ ಮತ್ತು ಓಪಿಡಿ ಬ್ಲಾಕ್ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.ಅಧ್ಯಕ್ಷತೆಯನ್ನು ವೈದ್ಯಕೀಯ ವಿಜ್ಞಾನ ಆಸ್ಪತ್ರೆ ಮತ್ತು ಬೋಧಕ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಡಾ.ಹರೀಶ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು, ಡಾ.ಪರಮೇಶ್, ಡಾ.ಲೋಹಿತ್, ಡಾ.ಚಂದ್ರಶೇಖರ್ ಸಾಲಿಮಠ್, ಡಾ.ಕಲ್ಪನಾ ಉಪಸ್ಥಿತರಿದ್ದರು.

1 ಕೆಸಿಕೆಎಂ 2ಚಿಕ್ಕಮಗಳೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಲ್ಯಾಬೋರೇಟರಿಯನ್ನು ಶಾಸಕ ಎಚ್‌.ಡಿ. ತಮ್ಮಯ್ಯ ಉದ್ಘಾಟಿಸಿದರು. ಡಾ. ಮೋಹನ್‌ಕುಮಾರ್‌, ಡಾ. ಹರೀಶ್‌, ಡಾ. ಚಂದ್ರಶೇಖರ್‌ ಸಾಲಿಮಠ್‌, ಡಾ. ಅಶ್ವಥ್‌ ಬಾಬು ಇದ್ದರು.