ಅವಕಾಶ ಸದ್ಬಳಕೆ ಮಾಡಿಕೊಂಡು ಗುರಿ ಮುಟ್ಟಬೇಕು

| Published : May 03 2024, 01:03 AM IST

ಸಾರಾಂಶ

ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮಕ್ಕಳಿಗೂ ಮತ್ತಷ್ಟು ಸಾಧನೆ ಮಾಡಲು ಉತ್ತೇಜನೆ ಸಿಗುತ್ತದೆ ಇಂತಹ ಕೆಲಸ ಕನ್ನಡ ಸಂಘವು ಪ್ರತಿ ವರ್ಷ ಮಾಡುತ್ತಿರುವುದು ಉತ್ತಮ ಕೆಲಸ

ಕನ್ನಡಪ್ರಭ ವಾರ್ತೆ ಬಂಗಾರಪೇಟೆವಿದ್ಯಾರ್ಥಿಗಳು ಸಿಕ್ಕ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು ಗುರಿ ಮುಟ್ಟಲು ಪ್ರಯತ್ನಿಸಿದರೆ ಮಾತ್ರ ಸಾಧನೆ ಮಾಡಲು ಸಾಧ್ಯವೆಂದು ಸಿವಿಲ್ ನ್ಯಾಯಾಲಯದ ನ್ಯಾ.ಕೇಶವಮೂರ್ತಿ ಹೇಳಿದರು.ನಗರದ ಕುವೆಂಪು ವೃತ್ತದಲ್ಲಿ ಕನ್ನಡ ಸಂಘದಿಂದ ೧೨೦ನೇ ತಿಂಗಳ ಕನ್ನಡ ರಾಜ್ಯೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.ವಿದ್ಯೆ ಸ್ವಯಾರ್ಜಿತ ಆಸ್ತಿ

ಮಕ್ಕಳಿಗೆ ಪಿತ್ರಾರ್ಜಿತವಾಗಿ ಬರುವುದು ಆಸ್ತಿ ಮಾತ್ರ, ಆದರೆ ಸ್ವಯಾರ್ಜಿತವಾಗಿ ಬರುವುದು ವಿದ್ಯೆ ಮಾತ್ರ. ವಿದ್ಯೆ ಯಾರಿಂದಲೂ ಕಸಿಯಲಾಗದೆ ದೊಡ್ಡ ವಸ್ತು, ಈ ವಿದ್ಯಾರ್ಥಿಗಳು ಮತ್ತಷ್ಟು ಕಷ್ಟಪಟ್ಟು ಓದಿದರೆ ಮುಂದೆ ನಿಮ್ಮ ಜೀವನ ಹಸನಾಗಿರುತ್ತದೆ ಎಂದರಲ್ಲದರ ಸಾಧನೆ ಮಾಡಿರುವ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮಕ್ಕಳಿಗೂ ಮತ್ತಷ್ಟು ಸಾಧನೆ ಮಾಡಲು ಉತ್ತೇಜನೆ ಸಿಗುತ್ತದೆ ಇಂತಹ ಕೆಲಸ ಕನ್ನಡ ಸಂಘವು ಪ್ರತಿ ವರ್ಷ ಮಾಡುತ್ತಿರುವುದು ಉತ್ತಮ ಕೆಲಸವಾಗಿದೆ ಎಂದು ಶ್ಲಾಘಿಸಿದರು. ಇಲ್ಲಿನ ಕನ್ನಡ ಸಂಘವು ಬರೀ ನಾಡು, ನುಡಿ, ಭಾಷೆ ಬೆಳವಣಿಗೆಗೆ ಮಾತ್ರ ಮೀಸಲಿಡದೆ ಸಮಾಜ ಮುಖಿ ಕಾರ್ಯಗಳನ್ನು ಸಹ ಮಾಡುತ್ತಾ ರಾಜ್ಯದಲ್ಲಿಯೆ ಮಾದರಿ ಕನ್ನಡ ಸಂಘವಾಗಿದೆ. ಅವಕಾಶ ವಂಚಿತ ಅನೇಕ ಪ್ರತಿಭೆಗಳ ಪ್ರತಿಭೆ ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕೆಲಸ ಸಹ ಯಾವುದೇ ಸ್ವಾರ್ಥವಿಲ್ಲದೆ ಕೈಗೊಳ್ಳುತ್ತಿರುವುದನ್ನು ಅಭಿನಂದಿಸಿದರು.ಮಣಿಪಲ್ಲವಿಯವರಿಗೆ ಬೆಂಬಲಸಿ

ಬೆಮಲ್ ಕಾರ್ಖಾನೆಯ ಇ.ಡಿ.ಈಶ್ವರ್ ಭಟ್ ಮಾತನಾಡಿ, ಗಡಿ ಭಾಗದಲ್ಲಿ ಅದರಲ್ಲಿಯೂ ಅನ್ಯ ಭಾಷಿಗರ ಪ್ರಭಾವ ಹೆಚ್ಚಿಗಿರುವ ಪ್ರದೇಶದಲ್ಲಿ ಕನ್ನಡ ಭಾಷೆ ಉಳಿವಿಗಾಗಿ ಕನ್ನಡ ಸಂಘದ ಅಧ್ಯಕ್ಷ ಪಲ್ಲವಿಮಣಿ ಕಂಕಣ ತೊಟ್ಟಿರುವುದು ಸಾಮಾನ್ಯವಲ್ಲ ಮಣಿರವರಿಗೆ ಇತರೇ ಕನ್ನಡಿಗರು ಉತ್ತೇಜನ ನೀಡಿ ಬೆನ್ನು ತಟ್ಟಿದರೆ ಅವರಿಗೆ ಮತ್ತಷ್ಟು ಕನ್ನಡಪರ ಚಟುವಟಿಕೆಗಳಲ್ಲಿ ತೊಡಗಲು ಉತ್ಸಾಹ ದೊರೆಯುತ್ತದೆ ಎಂದರು.

ದ್ವಿತೀಯ ಪರೀಕ್ಷೆಯಲ್ಲಿ ಜಿಲ್ಲೆಗೆ ಕೀರ್ತಿ ತರುವಂತೆ ಸಾಧನೆಗೈದಿರುವ ವಿದ್ಯಾರ್ಥಿಗಳನ್ನು ಸತ್ಕರಸಿರುವು ಮತ್ತಷ್ಟು ಮಕ್ಕಳಿಗೆ ನಾವು ಚೆನ್ನಾಗಿ ಓದಬೇಕೆಂದು ಪ್ರೇರಣೆ ದೊರೆಯುತ್ತದೆ. ೧೨೦ ತಿಂಗಳಿಂದ ನಿರಂತರವಾಗಿ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮ ಮಾಡುತ್ತಿರುವುದು ಮುಂದೆ ೫೦೦ ತಿಂಗಳಾಗಲಿ ಎಂದರು.

ಗುರುರಾಜ ಮತ್ತು ತಂಡದಿಂದ ನಡೆದ ಹಾಸ್ಯ ಮತ್ತು ಜಾದು ಕಾರ್ಯಕ್ರಮ ರಂಜಿಸಿತು. ಇದೇ ವೇಳೆ ಕನ್ನಡ ಸಂಘದ ಅಧ್ಯಕ್ಷ ಡಾ.ಪಲ್ಲವಿಮಣಿ, ಕಾರ್ಯದರ್ಶಿ ಹೇಮಂತ್ ಕುಮಾರ್, ವಕೀಲರ ಸಂಘದ ಅಧ್ಯಕ್ಷ ನಾರಾಯಣಪ್ಪ, ವೈ.ವಿ.ರಮೇಶ್, ಪ್ರಸಾದ್, ಮಂಜುನಾಥ್, ಜಯಪ್ರಕಾಶ್ ಇದ್ದರು.