ಸಾರಾಂಶ
ವಾಲ್ಮೀಕಿ ಸಮುದಾಯಕ್ಕೆ ಅವಾಚ್ಯ ಪದ ಬಳಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ
ಹನುಮಸಾಗರ: ವಾಲ್ಮೀಕಿ ಸಮುದಾಯಕ್ಕೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ವಾಲ್ಮೀಕಿ ಯುವಪಡೆ ಜಿಲ್ಲಾಧ್ಯಕ್ಷ ಮರಿಯಪ್ಪ ಎಂ.ಗ್ವಾತಗಿ ಒತ್ತಾಯಿಸಿದರು.
ಪಟ್ಟಣದ ಪೊಲೀಸ್ ಠಾಣೆಯಲ್ಲಿ ವಾಲ್ಮೀಕಿ ಯುವಪಡೆಯಿಂದ ಮಾಜಿ ಸಂಸದ ರಮೇಶ ಕತ್ತಿ ವಿರುದ್ಧ ದೂರು ದಾಖಲಿಸಿ ಮಾತನಾಡಿದ ಅವರು, ರಮೇಶ ಕತ್ತಿ ಅವರು ಜಾರಕಿಹೊಳಿ ಸಹೋದರರನ್ನು ಟೀಕಿಸುವ ಭರದಲ್ಲಿ ಇಡೀ ವಾಲ್ಮೀಕಿ ಸಮುದಾಯಕ್ಕೆ ಅವಾಚ್ಯ ಪದ ಬಳಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ರಮೇಶ ಕತ್ತಿ ಅವರ ತಪ್ಪು ಇದ್ದರೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಒಂದು ವೇಳೆ ವಿಡಿಯೋ ತಿರುಚಿದ್ದರೆ ಅವರ ಮೇಲೂ ಸೂಕ್ತ ಕ್ರಮ ಜರುಗಿಸಬೇಕು ಎಂದು ಮನವಿ ಮಾಡಿದರು.ವಾಲ್ಮೀಕಿ ಸಮುದಾಯದ ಮುಖಂಡರಾದ ಹನಮಂತ ಲಂಡೂರಿ, ನಾಗರಾಜ ಕಂದಗಲ್, ಪಾರಪ್ಪ ಮುಡಿಯಪ್ಪನವರ, ಕಲ್ಲನಗೌಡ ಪೊಲೀಸ್ ಪಾಟೀಲ್, ಹನುಮಂತ ಮೂಗನೂರು, ಯಮನೂರಗೌಡ ಪರಸಾಪೂರ, ಮಹಾಂತೇಶ ಪೂಜಾರ, ದೇವಪ್ಪ ಮೆಣಸಗಿ, ಯಮನೂರಪ್ಪ ಹೂಲಗೇರಿ, ಯಮನೂರ ಅಬ್ಬಿಗೇರಿ, ಶಿವು ಪೂಜಾರ, ನಿಜಲಿಂಗಪ್ಪ ವಾಲಿಕಾರ, ಮಲ್ಲಿಕಾರ್ಜುನ ಪರಸಾಪೂರ, ಶರಣಪ್ಪ ಪೂಜಾರ, ಮಹಾಂತೇಶ ಮುಡಿಯಪ್ಪನವರ, ನಾಗರಾಜ ಪರಸಾಪೂರ, ಮಂಜುನಾಥ ಗೌಡ್ರ, ಯಮನೂರ ವಾಲ್ಮೀಕಿ, ಮಂಜುನಾಥ ವಾಲ್ಮೀಕಿ, ಶರಣಪ್ಪ ಮಾಗಿ, ಆಂಜನೇಯ ಗೌಡರ ಇತರರು ಇದ್ದರು.