ಕುಡಿಯುವ ನೀರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ

| Published : Mar 01 2025, 01:05 AM IST

ಸಾರಾಂಶ

ಈಗಾಗಲೇ ಶಿವರಾತ್ರಿ ಹಬ್ಬ ಕಳೆದು ಬೇಸಿಗೆ ಅರಂಭವಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಸ್ಥಳೀಯ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಅಧಿಕಾರಿಗಳು ಎಚ್ಚರಿಕೆಯಿಂದ ನೀರು ನಿರ್ವಹಣೆಯ ಕಾರ್ಯನಿರ್ವಹಿಸುವಂತೆ ಶಾಸಕರು ಎ. ಮಂಜು ಸೂಚಿಸಿದರು. ಕೆಲವು ಗ್ರಾಮ ಪಂಚಾಯತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ. ತೊಂದರೆಯಾದರೆ ಟ್ಯಾಂಕ್ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು.

ಕನ್ನಡಪ್ರಭ ವಾರ್ತೆ ರಾಮನಾಥಪುರ

ಈಗಾಗಲೇ ಶಿವರಾತ್ರಿ ಹಬ್ಬ ಕಳೆದು ಬೇಸಿಗೆ ಅರಂಭವಾಗುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲು ಸ್ಥಳೀಯ ಗ್ರಾಪಂ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಅಧಿಕಾರಿಗಳು ಎಚ್ಚರಿಕೆಯಿಂದ ನೀರು ನಿರ್ವಹಣೆಯ ಕಾರ್ಯನಿರ್ವಹಿಸುವಂತೆ ಶಾಸಕರು ಎ. ಮಂಜು ಸೂಚಿಸಿದರು.

ರಾಮನಾಥಪುರ ಹೋಬಳಿ ಹನ್ಯಾಳು ಕಾಲೋನಿ, ಸೋಂಪುರ ಕಾಲೋನಿ, ಮಲ್ಲಾಪುರ ಕಾಲೋನಿ, ಲಕ್ಕೂರು ಕಾಲೋನಿ, ಆನಂದೂರು ಕಾಲೋನಿ, ರುದ್ರಪಟ್ಟಣ ಕಾಲೋನಿ ಹಾಗೂ ವಡ್ಡರಹಳ್ಳಿ ಕಾಲೋನಿಗಳ ಸುಮಾರು ಒಂದು ಕೋಟಿ ರು. ವೆಚ್ಚದಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ನಂತರ ಹನ್ಯಾಳು ಗ್ರಾಮದ ಕಾಲೋನಿಯಲ್ಲಿ ಗುದ್ದಲಿ ಪೂಜೆ ಕಾರ್ಯಕ್ರಮದ ನಂತರ ಮಾತನಾಡಿದ ಅವರು, ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಜೆ.ಜೆ.ಎಂ. ಯೋಜನೆಯಡಿ ನಿರ್ವಹಣೆ ಮಾಡುತ್ತಿರುವ ಪೈಪ್‌ಲೈನ್ ಕೆಲಸವನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದರು. ಕೆಲವು ಗ್ರಾಮ ಪಂಚಾಯತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ. ತೊಂದರೆಯಾದರೆ ಟ್ಯಾಂಕ್ ನಿರ್ಮಾಣಕ್ಕೆ ಸಹಕರಿಸಬೇಕು ಎಂದರು. ಚಾಲನೆ ನೀಡಲಾಗಿರುವ ಕಾಮಗಾರಿಯನ್ನು ಒಂದು ತಿಂಗಳೊಳಗಾಗಿ ಉತ್ತಮ ಗುಣಮಟ್ಟದ ಕಾಮಗಾರಿ ಮುಗಿಸಬೇಕು. ಪಂಚಾಯತಿ ಅಧ್ಯಕ್ಷರು, ಸದಸ್ಯರು ಮತ್ತು ಅಧಿಕಾರಿಗಳು ಒಗ್ಗಟ್ಟಿನಿಂದ ಗ್ರಾಮೀಣ ಪ್ರದೇಶಗಳಲ್ಲಿ ಇರುವ ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆಗಳು, ಚರಂಡಿಗಳು ಹಾಗೂ ಶೌಚಾಲಯದ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಉತ್ತಮ ರೀತಿಯಲ್ಲಿ ಜನರ ಕುಂದುಕೊರತೆ ನಿವಾರಿಸಲು ಸೂಚಿಸಿದರು.ಈ ಸಂದರ್ಭದಲ್ಲಿ ಹನ್ಯಾಳು ಗ್ರಾಮ ಪಂಚಾಯತಿ ಅಧ್ಯಕ್ಷರು ಸಂಗೀತ, ಉಪಾಧ್ಯಕ್ಷರು ಮಹೇಶ್, ರುದ್ರಪಟ್ಟಣದ ಅಧ್ಯಕ್ಷರು ಸಾಗರ್, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಗುಂಡಣ್ಣ ಮುಖಂಡರುಗಳಾದ ವಿಜಯಕುಮಾರ್, ಸುವಾಸ್, ಮಂಜಣ್ಣ, ಸ್ವಾಮಿಗೌಡರು, ನಾಗರಾಜು ಭಾಗವಹಿಸಿದ್ದರು.