ಗುಣಮಟ್ಟದ ಹಾಲಿನ ವಿತರಣೆಗೆ ಕಾಳಜಿ ವಹಿಸಿ: ಎಚ್.ಟಿ.ಮಂಜು

| Published : Sep 10 2024, 01:35 AM IST

ಗುಣಮಟ್ಟದ ಹಾಲಿನ ವಿತರಣೆಗೆ ಕಾಳಜಿ ವಹಿಸಿ: ಎಚ್.ಟಿ.ಮಂಜು
Share this Article
  • FB
  • TW
  • Linkdin
  • Email

ಸಾರಾಂಶ

ಮಂಡ್ಯ ಜಿಲ್ಲೆಯಲ್ಲಿ ಕೆ.ಆರ್.ಪೇಟೆ ಅತಿ ಹೆಚ್ಚು ಹಾಲು ಸರಬರಾಜು ಮಾಡುವ ತಾಲೂಕು. ಮನ್ಮುಲ್ ನಿರ್ದೇಶಕನಾಗಿ ಹೈನುಗಾರಿಕೆ ನಂಬಿದರೆ ಮೋಸವಾಗಲಾರದು ಎಂದು ಅರಿತಿರುವೆ. ರಾಸುಗಳಿಗೆ ಪೋಷಕಾಂಶ ಭರಿತ ಆಹಾರ ಮುಖ್ಯ. ಕೊಟ್ಟಿಗೆ ನಿರ್ವಹಣೆಗೆ ಆದ್ಯತೆ ನೀಡಬೇಕು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಗುಣಮಟ್ಟದ ಹಾಲು ಸರಬರಾಜು ಮಾಡಿ ಸಂಘದ ಹೆಸರು ಉಳಿಸಿ ತಾವು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಎಚ್.ಟಿ.ಮಂಜು ಹೇಳಿದರು.

ಗೋವಿಂದನಹಳ್ಳಿಯ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಹಾಗೂ ನೂತನ ಬಿಎಂಸಿ ಘಟಕ ಉದ್ಘಾಟಿಸಿ ಮಾತನಾಡಿ, ಒಂದು ಗ್ರಾಮದ ಅಭಿವೃದ್ಧಿ ಸಂಕೇತ ಹೈನುಗಾರಿಕೆಯಾಗಿದೆ ಎಂದರು.

ಉತ್ಪಾದಕರು ರಾಸುಗಳ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಹಬೇಕು. ಸಾವಿರಾರು ರು. ನೀಡಿ ಖರೀದಿಸುವ ರಾಸುಗಳು ಮಿಶ್ರತಳಿಯಾಗಿ ಬಲು ಸೂಕ್ಷವಾಗಿರುತ್ತವೆ. ಶೇ.25 ರಷ್ಟು ಭರಿಸಿ ವಿಮೆ ಮಾಡಿಸಿದರೆ ಮನ್ಮುಲ್ ಶೇ.75ರಷ್ಟು ವಿಮೆ ಹಣ ಭರಿಸಲಿದೆ ಎಂದರು.

ಜಿಲ್ಲೆಯಲ್ಲಿ ಕೆ.ಆರ್.ಪೇಟೆ ಅತಿ ಹೆಚ್ಚು ಹಾಲು ಸರಬರಾಜು ಮಾಡುವ ತಾಲೂಕು. ಮನ್ಮುಲ್ ನಿರ್ದೇಶಕನಾಗಿ ಹೈನುಗಾರಿಕೆ ನಂಬಿದರೆ ಮೋಸವಾಗಲಾರದು ಎಂದು ಅರಿತಿರುವೆ. ರಾಸುಗಳಿಗೆ ಪೋಷಕಾಂಶ ಭರಿತ ಆಹಾರ ಮುಖ್ಯ. ಕೊಟ್ಟಿಗೆ ನಿರ್ವಹಣೆಗೆ ಆದ್ಯತೆ ನೀಡಬೇಕು ಎಂದರು.

ಮನ್ಮುಲ್‌ ನಿರ್ದೇಶಕ ಡಾಲುರವಿ ಮಾತನಾಡಿ, ಪ್ರಮುಖ ಕೇಂದ್ರಗಳಲ್ಲಿ ಹಾಲು ಶೇಖರಣೆಗೆ ಬಿಎಂಸಿ ಘಟಕ ಸ್ಥಾಪಿಸಲಾಗುತ್ತಿದೆ. ಕೃಷಿ ಜೊತೆಗೆ ಹೈನುಗಾರಿಕೆ, ಕುರಿ, ಮೇಕೆ ಸಾಕಾಣೆಗೆ ಒತ್ತು ನೀಡಬೇಕು ಎಂದರು.

ಮಾರ್ಗ ವಿಸ್ತರಣಾಧಿಕಾರಿ ಗುರುರಾಜ್ ಸುರಗಿಹಳ್ಳಿ ಆಯ್ಯವ್ಯಯ, ಬಜೆಟ್ ಮಂಡಿಸಿದರು. ಮನ್ಮುಲ್‌ ತಾಲೂಕು ಉಪವ್ಯವಸ್ಥಾಪಕ ಆರ್.ಪ್ರಸಾದ್, ಸಂಘದ ಅಧ್ಯಕ್ಷ ವಿಜಯಕುಮಾರ್, ಉಪಾಧ್ಯಕ್ಷ ಚಂದ್ರಪ್ಪ, ನಿರ್ದೇಶಕರಾದ ಜಿ.ಎಂ ನಿಂಗಪ್ಪ, ಪ್ರಸಾದ್, ಆನಂದ್, ಕಿರಣ್‌ಕುಮಾರ್, ಶಿವಪ್ಪ, ಕುಮಾರ್, ಅಂಬುಜಾಕ್ಷಿ, ಪುಟ್ಟಮಣಿ, ನಟೇಶಾಚಾರಿ, ರಮೇಶ್, ಮಹೇಂದ್ರ, ಹಾಲು ಪರೀಕ್ಷಕ ವಿರೂಪಾಕ್ಷ, ಸಹಾಯಕರಾದ ಚನ್ನಪ್ಪ, ರುದ್ರೇಶ್‌ ಉಪಸ್ಥಿತರಿದ್ದರು.

ವಿಕಲಚೇತನರಿಗೆ ಉಚಿತ ಕೃತಕ ಕೈಕಾಲು ವಿತರಣೆಮಂಡ್ಯ: ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ, ದಕ್ಷಿಣಾಮ್ನಾಯ ಶ್ರೀ ಶಾರದಾಪೀಠ, ಶೃಂಗೇರಿ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳ ಸನ್ಯಾಸ ದೀಕ್ಷೆಯ ಸುವರ್ಣ ಮಹೋತ್ಸವದ ಅಂಗವಾಗಿ ವಿಕಲಚೇತನರಿಗೆ ಕೃತಕ ಕೈ ಕಾಲುಗಳನ್ನು ಉಚಿತವಾಗಿ ನೀಡಲು ಸೆ.27 ರಿಂದ 29 ರವರೆಗೆ ಬೆಂಗಳೂರಿನ ಶಂಕರಪುರಂನ ಪಂಚಮಹಾಕವಿ ರಸ್ತೆಯ ಶ್ರೀ ಚಂದ್ರಶೇಖರ ಭಾರತಿ ಕಲ್ಯಾಣ ಮಂಟಪದಲ್ಲಿ ಶಿಬಿರವನ್ನು ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ವಿಕಲಚೇತನರು ಶಿಬಿರಕ್ಕೆ ಆಧಾರ್ ಕಾರ್ಡ್ ಹಾಗೂ ಅಂಗವಿಕಲರ ಗುರುತಿನ ಚೀಟಿಯ ಜೆರಾಕ್ಸ್ ಪ್ರತಿಯೊಂದಿಗೆ ಶಿಬಿರದಲ್ಲಿ ಭಾಗವಹಿಸಿ ಕೃತಕಾಂಗಗಳನ್ನು ಉಚಿತವಾಗಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ಮೊ-9845585213 (ಸೂರ್ಯನಾರಾಯಣ) ಹಾಗೂ ಮೊ-9342069904 (ಶಂಕರ್ ಅಗರ್ವಾಲ್) ನ್ನು ಸಂಪರ್ಕಿಸಬಹುದು ಎಂದು ಮಂಡ್ಯ ಜಿಲ್ಲಾ ಅಂಗವಿಕಲರ ಹಾಗೂ ಹಿರಿಯ ನಾಗರೀಕರ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.