ಪರಿಸರ ರಕ್ಷಣೆಗೆ ಕಾಳಜಿ ವಹಿಸಿ: ನ್ಯಾ. ಮಹಾವೀರ ಮ. ಕರೆಣ್ಣವರ್

| Published : Jul 01 2024, 01:55 AM IST

ಪರಿಸರ ರಕ್ಷಣೆಗೆ ಕಾಳಜಿ ವಹಿಸಿ: ನ್ಯಾ. ಮಹಾವೀರ ಮ. ಕರೆಣ್ಣವರ್
Share this Article
  • FB
  • TW
  • Linkdin
  • Email

ಸಾರಾಂಶ

ಮಾನವರಾಗಿ ನಾವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕೆಎಚ್‌ಬಿ ಕಾಲನಿಯಲ್ಲಿ ವಿಶ್ವ ಪರಿಸರ ದಿನಾಚರಣೆ - - -

ದಾವಣಗೆರೆ: ಮಾನವರಾಗಿ ನಾವು ಮಾಡಬಹುದಾದ ಅತ್ಯುತ್ತಮ ಕೆಲಸವೆಂದರೆ ಸುತ್ತಮುತ್ತಲಿನ ಪರಿಸರವನ್ನು ಸಂರಕ್ಷಿಸುವುದಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಮಹಾವೀರ ಮ. ಕರೆಣ್ಣವರ್ ಹೇಳಿದರು.

ತಾಲೂಕಿನ ಕುಂದುವಾಡ ಹತ್ತಿರದ ಕೆ.ಎಚ್.ಬಿ. ಕಾಲನಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜಿಲ್ಲಾ ನ್ಯಾಯಾಂಗ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಾನಗರ ಪಾಲಿಕೆ ಮತ್ತು ಅರಣ್ಯ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಲಾದ ವಿಶ್ವ ಪರಿಸರ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಒಬ್ಬ ಮನುಷ್ಯ ಗಿಡ,ಗಳ ನೆಟ್ಟು, ಮರವಾಗುವಂತೆ ಪೋಷಿಸುವುದರಿಂದ ಈ ಜಗತ್ತಿನ ಮತ್ತೊಬ್ಬ ಮನುಷ್ಯನಿಗೆ ಸಹಾಯ ಮಾಡಿದಂತಾಗುವುದು. ಆ ಮೂಲಕ ಜಗತ್ತಿಗೆ ಋಣ ಸಂದಾಯ ಮಾಡಿದಂತಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಪರಿಸರ ಸಂರಕ್ಷಣೆ ಮಾಡಬೇಕು. ಒಂದು ಗಿಡ ನೆಟ್ಟು ಪೋಷಿಸುವ ಪ್ರತಿಯೊಂದು ಮಹೋನ್ನತ ಕೆಲಸವೂ ಮನುಷ್ಯನ ಮುಖವನ್ನು ಹೆಚ್ಚು ಆಕರ್ಷಣೀಯ ಮತ್ತು ಶ್ರೀಮಂತಗೊಳಿಸುತ್ತದೆ. ಪರಿಸರದ ಸಂರಕ್ಷಣೆಯಂತಹ ಕಾರ್ಯಕ್ಕೆ ಸಮಾನ ಸೇವೆ ಬೇರಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಪಾಲಿಕೆ ಆಯುಕ್ತೆ ರೇಣುಕಾ, ಜಿಲ್ಲಾ ನ್ಯಾಯಾಲಯ ಮುಖ್ಯ ಆಡಳಿತಾಧಿಕಾರಿ ಬಿ.ಶ್ರೀನಿವಾಸ್, ಕೋರ್ಟ್ ಮ್ಯಾನೇಜರ್ ಅಶ್ವಿನಿ ಕುಮಾರ, ಅರಣ್ಯ ಇಲಾಖೆ ಅಧಿಕಾರಿ ಜ್ಯೋತಿ, ನ್ಯಾಯಾಂಗ, ಮಹಾನಗರ ಪಾಲಿಕೆ, ಅರಣ್ಯ ಇಲಾಖೆ ಸಿಬ್ಬಂದಿ ಪಾಲ್ಗೊಂಡಿದ್ದರು.

- - -

-28ಕೆಡಿವಿಜಿ36ಃ:

ದಾವಣಗೆರೆಯ ಕೆಎಚ್‌ಬಿ ಕಾಲನಿಯಲ್ಲಿ ನಡೆದ ಪರಿಸರ ದಿನ ಕಾರ್ಯಕ್ರಮವನ್ನು ನ್ಯಾಯಾಧೀಶ ಮಹಾವೀರ ಮ. ಕರೆಣ್ಣವರ್ ಉದ್ಘಾಟಿಸಿದರು.