ಸಾರಾಂಶ
ಕನ್ನಡಪ್ರಭ ವಾರ್ತೆ ಜಮಖಂಡಿ ಗಣೇಶ ಹಬ್ಬದ ಜೊತೆಗೆ ಪರಿಸರ ಕಾಳಜಿ ವಹಿಸಬೇಕು. ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಮುತ್ತಿನ ಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಸ್ವಾಮಿಗಳು ತಿಳಿಸಿದರು.ನಗರದಲ್ಲಿ ಗಜಾನನ ಮಹಾಮಂಡಲದಿಂದ ಪ್ರತಿ ಗಣೇಶ ಉತ್ಸವ ಸಮಿತಿಗಳಿಗೆ ಮಂಗಳವಾರ ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ಗಣೇಶ ಹಬ್ಬದ ಜೊತೆಗೆ ಪರಿಸರ ಕಾಳಜಿ ವಹಿಸಬೇಕು. ಸಸಿಗಳನ್ನು ನೆಟ್ಟು ಪೋಷಿಸಬೇಕು ಎಂದು ಮುತ್ತಿನ ಕಂತಿ ಮಠದ ಶಿವಲಿಂಗ ಪಂಡಿತಾರಾಧ್ಯ ಸ್ವಾಮಿಗಳು ತಿಳಿಸಿದರು.ನಗರದಲ್ಲಿ ಗಜಾನನ ಮಹಾಮಂಡಲದಿಂದ ಪ್ರತಿ ಗಣೇಶ ಉತ್ಸವ ಸಮಿತಿಗಳಿಗೆ ಮಂಗಳವಾರ ಸಸಿಗಳನ್ನು ವಿತರಿಸಿ ಅವರು ಮಾತನಾಡಿದರು. ಹಿಂದುಗಳ ಪವಿತ್ರ ಹಬ್ಬವಾದ ಗೌರಿಗಣೇಶ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಿರುವುದರ ಜತೆಗೆ ಪರಿಸರ ಕಾಳಜಿ, ಜೊತೆಗೆ ಇನ್ನಿತರ ಸಾಮಾಜಿಕ ಕಾರ್ಯಗಳನ್ನು ಮಾಡಬೇಕು. ಈ ಮೂಲಕ ನಗರದ ಅಭಿವೃದ್ಧಿಗೆ ಪ್ರೇರಣೆ ದೊರಕುವಂತಾಗಬೇಕು ಎಂದು ಹೇಳಿದರು.ಸಾರ್ವಜನಿಕ ಗಣೇಶ ಉತ್ಸವವು ಒಗ್ಗಟ್ಟಿನ ಸಂಕೇತವಾಗಿದೆ. ಇದನ್ನು ಸದುಪಯೋಗಪಡಿಸಿಕೊಂಡು ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು ಎಂದ ಅವರು, ಸನಾತನ ಸಂಸ್ಕೃತಿಯ ಪ್ರತೀಕವಾದ ಗಣೇಶ ಉತ್ಸವದಿಂದ ಸಮಾಜಕ್ಕೆ ಒಳಿತಾಗಲಿ ಎಂದು ಆಶೀರ್ವಚನ ನೀಡಿದರು. ಇದೆ ವೇಳೆ ನಗರದ 35 ರಿಂದ 40 ಗಣೇಶ ಉತ್ಸವ ಸಮಿತಿಗಳಿಗೆ ಸಸಿಗಳನ್ನು ವಿತರಿಸಲಾಯಿತು.
ಈ ವೇಳೆ ನಗರಸಭೆ ಸದಸ್ಯ ಕುಶಾಲ ವಾಘಮೊರೆ, ಪ್ರಶಾಂತ ಚರಕಿ, ಗಜಾನನ ಮಹಾಮಂಡಲದ ಅಧ್ಯಕ್ಷ ಸಚಿನ ಪಟ್ಟಣಶೆಟ್ಟಿ, ಪ್ರಶಾಂತ ಗಾಯಕವಾಡ, ಶ್ರೀಶೈಲ ಪಾಟೀಲ, ಹೀರಾ ಜಾಧವ, ರುದ್ರಯ್ಯ ಕರಡಿ, ಶ್ರೀಧರ ಕಂಬಿ ಕಿರಣ ಪಾವಟೆ, ಆನಂದ ಗುಳೇದ ಇತರರು ಇದ್ದರು.