ನೀರಿನ ಬಗ್ಗೆ ಕಾಳಜಿ ವಹಿಸಿ: ಎಸ್‌.ಶಿವಣ್ಣ

| Published : May 28 2024, 01:03 AM IST

ನೀರಿನ ಬಗ್ಗೆ ಕಾಳಜಿ ವಹಿಸಿ: ಎಸ್‌.ಶಿವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ಕಂಚಿಪುರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿ ಕೆರೆ ಪುನಶ್ಚೇತನ ಕಾಮಗಾರಿಗೆ ಯೋಜನಾಧಿಕಾರಿ ಎಸ್.ಶಿವಣ್ಣ ಚಾಲನೆ ನೀಡಿ, ನೀರಿನ ಸಂರಕ್ಷಣೆ ಬಗ್ಗೆ ಕಿವಿಮಾತು ಹೇಳಿದರು.

ಕನ್ನಡಪ್ರಭ ವಾರ್ತೆ ಹೊಸದುರ್ಗ

ಸಾರ್ವಜನಿಕರು ಸ್ವ-ಪ್ರೇರಣೆಯಿಂದ ನೀರಿನ ಮಹತ್ವದ ಬಗ್ಗೆ ಕಾಳಜಿ ವಹಿಸಿದಾಗ ಮಾತ್ರ ನೀರಿನ ಸಂರಕ್ಷಣೆ ಮಾಡಲು ಸಾಧ್ಯವಿದೆ ಎಂದು ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ಎಸ್.ಶಿವಣ್ಣ ತಿಳಿಸಿದರು.

ತಾಲೂಕಿನ ಕಂಚಿಪುರ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದ ಅಡಿಯಲ್ಲಿ ಶ್ರೀ ಕಂಚೀ ಅಲ್ಲಾಳ ನಾಥ ಕೆರೆ ಅಭಿವೃದ್ಧಿ ಕಾಮಗಾರಿಯ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು.

ರಾಜ್ಯದಲ್ಲಿ ಒಟ್ಟು 730 ಕೆರೆಗಳನ್ನು ₹54 ಕೋಟಿ ಖರ್ಚು ಮಾಡಿ ಕೆರೆಗಳನ್ನು ಪುನಃಶ್ಚೇತನ ಮಾಡಲಾಗಿದೆ. ಪ್ರಸ್ತುತ ನಮ್ಮ ತಾಲ್ಲೂಕಿನ ಕಂಚೀಪುರದ ಕೆರೆಯನ್ನು ಆಯ್ಕೆ ಮಾಡಿದ್ದು, ಕೆರೆ ಹೂಳೆತ್ತುವುದರಿಂದ ಜನ ಜಾನುವಾರುಗಳಿಗೆ ಪ್ರಾಣಿ ಪಕ್ಷಿಗಳಿಗೆ, ಕೃಷಿಭೂಮಿಗೆ ಅನುಕೂಲವಾಗಲಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆರೆ ಸಮಿತಿಯ ಗೌರವ ಅಧ್ಯಕ್ಷ ಡಿ.ಪರಶುರಾಮಪ್ಪ ಮಾತನಾಡಿ, ಸರ್ಕಾರಗಳು ಮಾಡದ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿದೆ ಎಂದರು. ಈ ಕಾರ್ಯಕ್ರಮದಲ್ಲಿ ನಮ್ಮ ಊರು ನಮ್ಮ ಕೆರೆ ಯೋಜನೆಯ ಅಧ್ಯಕ್ಷ ಕೆ.ವಿ.ಸುರೇಶ್, ಒಕ್ಕೂಟದ ಅಧ್ಯಕ್ಷೆ ಮಂಜುಳಾ ಮಂಜುನಾಥ್‌, ಗ್ರಾಪಂ ಅಧ್ಯಕ್ಷೆ ಸುಮಾ , ಶೀಲಾ ಸೇರಿದಂತೆ ಗ್ರಾಮಸ್ಥರು ಸ್ವಸಹಾಯ ಸಂಘದ ಸದಸ್ಯರು ಹಾಜರಿದ್ದರು.