ಒತ್ತಡದ ಬದುಕಲ್ಲಿ ಆರೋಗ್ಯದ ಕಾಳಜಿ ಇರಲಿ: ಡಾ. ಅರುಣಕುಮಾರ

| Published : Mar 05 2025, 12:34 AM IST

ಒತ್ತಡದ ಬದುಕಲ್ಲಿ ಆರೋಗ್ಯದ ಕಾಳಜಿ ಇರಲಿ: ಡಾ. ಅರುಣಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯ ಶಿಬಿರಗಳು ಬಡ ಹಾಗೂ ಮಧ್ಯಮ ವರ್ಗದ ಜನರ ಪಾಲಿಗೆ ಉಪಯುಕ್ತವಾಗಿವೆ.

ರಾಣಿಬೆನ್ನೂರು: ಇಂದಿನ ಒತ್ತಡದ ಬದುಕಿನಲ್ಲಿ ಪ್ರತಿಯೊಬ್ಬರೂ ಆರೋಗ್ಯದ ಕಡೆಗೆ ಲಕ್ಷ್ಯ ವಹಿಸಬೇಕಾಗಿದೆ ಎಂದು ದಾವಣಗೆರೆಯ ಎಸ್ಎಸ್ ಕೇರ್ ಟ್ರಸ್ಟ್‌ನ ಡಾ. ಅರುಣಕುಮಾರ ತಿಳಿಸಿದರು.ನಗರದ ನಗರದ ರೈಲ್ವೆ ಸ್ಟೇಷನ್ ರಸ್ತೆ ವರ್ತಕರ ಸಂಘದಲ್ಲಿ ಮಂಗಳವಾರ ಸ್ಥಳೀಯ ವರ್ತಕರ ಸಂಘ, ರೋಟರಿ ಸಂಸ್ಥೆ ವತಿಯಿಂದ ದಾವಣಗೆರೆಯ ಎಸ್ಎಸ್ ಕೇರ್ ಟ್ರಸ್ಟ್ ಸಹಯೋಗದಲ್ಲಿ ಏರ್ಪಡಿಸಿದ್ದ ಉಚಿತ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು. ವಯಸ್ಸಾದ ನಂತರ ರಕ್ತದೊತ್ತಡ, ಸಕ್ಕರೆ ಕಾಯಿಲೆ ಸೇರಿದಂತೆ ಹಲವಾರು ಕಾಯಿಲೆ ಬರುವುದು ಖಚಿತ. ಇಂತಹ ಶಿಬಿರದಲ್ಲಿ ವೈದ್ಯರಿಂದ ತಪಾಸಣೆಗೆ ಒಳಗಾಗುವುದರಿಂದ ಯಾವುದಾದರೂ ಕಾಯಿಲೆ ಇದ್ದರೂ ಅದು ಅರಿವಿಗೆ ಬರುತ್ತದೆ. ಇದರಿಂದ ಅಂತಹ ಕಾಯಿಲೆಗೆ ಸೂಕ್ತ ಚಿಕಿತ್ಸೆ ಪಡೆಯಲು ಸಹಕಾರಿಯಾಗುತ್ತದೆ. ಆರೋಗ್ಯ ಶಿಬಿರಗಳು ಬಡ ಹಾಗೂ ಮಧ್ಯಮ ವರ್ಗದ ಜನರ ಪಾಲಿಗೆ ಉಪಯುಕ್ತವಾಗಿವೆ ಎಂದರು. ನಗರಸಭೆ ಅಧ್ಯಕ್ಷೆ ಚಂಪಕ ಬಿಸಲಹಳ್ಳಿ ಶಿಬಿರವನ್ನು ಉದ್ಘಾಟಿಸಿದರು. ನಗರಸಭೆ ಉಪಾಧ್ಯಕ್ಷ ನಾಗರಾಜ ಪವಾರ ಮಾತನಾಡಿದರು. ವರ್ತಕರ ಸಂಘದ ಅಧ್ಯಕ್ಷ ಜಿ.ಜಿ. ಹೊಟ್ಟಿಗೌಡ್ರ, ರೋಟರಿ ಕ್ಲಬ್ ಅಧ್ಯಕ್ಷ ವೀರೇಶ ಮೋಟಗಿ, ಡಾ. ಬಸವರಾಜ ಕೇಲಗಾರ, ಉಮೇಶ ಹೊನ್ನಾಳಿ, ಕೆ.ವಿ. ಶ್ರೀನಿವಾಸ, ಪ್ರಕಾಶ ಹೊನ್ನಾಳಿ, ಎಂ.ಆರ್. ಪಾಟೀಲ, ಸದಾಶಿವ ಉಪ್ಪಿನ, ಶಿವರಾಜ ಬಾರಾಟಕ್ಕೆ, ವಿನೋದ ಜಂಬಗಿ, ಬಿ.ಎಸ್. ಸಣ್ಣಗೌಡ್ರ, ವಿ.ಪಿ. ಪೊಲೀಸಗೌಡ್ರ, ಗುರುಪ್ರಕಾಶ ಜಂಬಗಿ ಮತ್ತಿತರರಿದ್ದರು.

ದಾವಣಗೆರೆ ಎಸ್ಎಸ್ ಕೇರ್ ಟ್ರಸ್ಟ್‌ನ ಡಾ. ಅಶ್ವಿನಿಕುಮಾರ ಸೇರಿದಂತೆ 40 ವೈದ್ಯರ ತಂಡ ಶಿಬಿರದಲ್ಲಿ ರೋಗಿಗಳ ಆರೋಗ್ಯ ತಪಾಸಣೆ ಮಾಡಿದರು.ಪ್ರತಿಯೊಬ್ಬರೂ ಕ್ರೀಡೆಗೆ ಆದ್ಯತೆ ನೀಡಲಿ

ಶಿಗ್ಗಾಂವಿ: ಪ್ರಸ್ತುತ ಯುಗದಲ್ಲಿ ಸ್ಥಳೀಯ ಕ್ರೀಡೆಗಳು ಮತ್ತು ಸ್ಪರ್ಧೆಗಳ ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಆದ್ದರಿಂದ ಪ್ರತಿಯೊಬ್ಬರೂ ಕ್ರೀಡೆಗೆ ಹೆಚ್ಚಿನ ಮಹತ್ವವನ್ನು ಕೊಡಬೇಕು ಎಂದು ತಾಪಂ ಮಾಜಿ ಸದಸ್ಯ ಕೆ.ಎಸ್. ಭಗಾಡೆ ತಿಳಿಸಿದರು.ತಾಲೂಕಿನ ಹಿರೇಮಣಕಟ್ಟಿಯಲ್ಲಿ ಮುರಘೇಂದ್ರ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ವಿಶ್ವಾರಾಧ್ಯ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ನಡೆದ ಕುಸ್ತಿ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.

ಸ್ಥಳೀಯ ಕ್ರೀಡೆಗಳು ಸಂಸ್ಕೃತಿ, ಪರಂಪರೆ ಮತ್ತು ಸಮುದಾಯದ ಏಕತೆ ಪ್ರತಿಬಿಂಬಿಸುತ್ತವೆ. ಅವು ಶಾರೀರಿಕ ಸಾಮರ್ಥ್ಯವನ್ನು ವೃದ್ಧಿಸಲು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸಲು ಸಹಾಯಕವಾಗಿವೆ ಎಂದರು. ಉತ್ತಮ ಆಹಾರಕ್ಕಾಗಿ ಒಳ್ಳೆಯ ಆಹಾರ ಪದ್ಧತಿಯನ್ನು ಅನುಸರಿಸಲು ಹಾಗೂ ಯೋಗಾಭ್ಯಾಸ ಮಾಡಲು ಮುಂದಾಗಬೇಕು ಎಂದರು.

ಗಣ್ಯರಾದ ಶಿವಯೋಗಿ ಚರಂತಿಮಠ, ವಿರೂಪಾಕ್ಷಪ್ಪ ಪಟ್ಟೆದ್, ಸಿದ್ದಪ್ಪ ಹರಿಜನ, ರಾಮಣ್ಣ ಕಮಡೊಳ್ಳಿ, ಗೂಳಪ್ಪ ಜಾರಗಡ್ಡಿ, ಬಸವಂತಪ್ಪ ವಾಲ್ಮೀಕಿ, ವಿರೂಪಾಕ್ಷಪ್ಪ ಅಂಗಡಿ, ಶಿವಪ್ಪ ಬಿಸ್ಟನ್ನವರ್, ರಾಮಣ್ಣ ಹುಲ್ಲೂರು, ಶಿವನಗೌಡ್ ನಿಂಗನಗೌಡ್ರ ಇತರರು ಇದ್ದರು.