ಸಾರಾಂಶ
ಕೊರೋನಾ ನಂತರದ ಕಾಲದಲ್ಲಿ ದೇಶದಲ್ಲಿ ಹೃದ್ರೋಗ ಸಮಸ್ಯೆ ಯುವಕರು ಮತ್ತು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೃದಯಸ್ತಂಬನ ಭಾರತದ ಬಹುದೊಡ್ಡ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ನಮ್ಮ ಸರಕಾರಗಳು, ಸಮಾಜ, ಮಠ ಮಾನ್ಯಗಳು ಮತ್ತು ಸಂಘಸಂಸ್ಥೆಗಳು ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿವೆ.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಹೆತ್ತವರನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಯಾವ ಮಕ್ಕಳ ಕೈಯಲ್ಲಿಯೂ ಇಲ್ಲ. ಆದರೆ ಬೆಳೆಯುವಾಗ, ಬೆಳೆದು ಬದುಕು ಕಟ್ಟುಕೊಳ್ಳುವಾಗ ಉತ್ತಮ ಜೀವನ ಶೈಲಿ ಹೊಂದುವುದು, ಆರೋಗ್ಯ ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲಿಯೇ ಇದೆ ಎಂದು ಸತ್ಯಸಾಯಿ ಮಾನವ ಅಭ್ಯುದಯ ವೈದ್ಯಕೀಯ ವಿಶ್ವವಿದ್ಯಾಲಯ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ಸಿ.ಎಸ್. ಹಿರೇಮಠ್ ತಿಳಿಸಿದರು. ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಹುಣ್ಣಿಮೆ ಅಂಗವಾಗಿ ನಡೆದ ಪತ್ರಕರ್ತರ ಸಾಂಸ್ಕೃತಿಕ ಚಿಂತನಾ ಸಮ್ಮಿಲನದ ಭಾಗವಾಗಿ ಎರಡನೇ ತಿಂಗಳ ಕಾರ್ಯಕ್ರಮದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಸಂಬಂಧ ತಜ್ಞರ ಜತೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹೆಚ್ಚುತ್ತಿರುವ ಹೃದಯಾಘಾತ
ಕೊರೋನಾ ನಂತರದ ಕಾಲದಲ್ಲಿ ದೇಶದಲ್ಲಿ ಹೃದ್ರೋಗ ಸಮಸ್ಯೆ ಯುವಕರು ಮತ್ತು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಹೃದಯಸ್ತಂಬನ ಭಾರತದ ಬಹುದೊಡ್ಡ ಸಮಸ್ಯೆಯಾಗಿದೆ. ಇದನ್ನು ಹೋಗಲಾಡಿಸಲು ನಮ್ಮ ಸರಕಾರಗಳು, ಸಮಾಜ, ಮಠ ಮಾನ್ಯಗಳು ಮತ್ತು ಸಂಘಸಂಸ್ಥೆಗಳು ಹೆಚ್ಚಿನ ರೀತಿಯಲ್ಲಿ ಶ್ರಮಿಸುತ್ತಿವೆ. ಜನತೆ ಕೂಡ ಇದನ್ನು ಅರಿತು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗುವುದು ಅಗತ್ಯ ಎಂದರು. ಹೃದಯಾಘಾತಕ್ಕೆ ಒಳಗಾಗುವ ಯಾರೇ ಆಗಲಿ ಹತ್ತಿರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ಈ ಘಟನೆ ಆದ 3 ಗಂಟೆಯ ಒಳಗೆ ಸೂಕ್ತ ಮತ್ತು ಸಮರ್ಥ ಆಸ್ಪತ್ರೆಗೆ ರೋಗಿಯನ್ನು ಕರೆದೊಯ್ದರೆ ಮಾತ್ರ ಅಮೂಲ್ಯ ಜೀವ ಉಳಿಸಬಹುದು. ಸತ್ಯಸಾಯಿ ಸರಳ ಮೆಮೋರಿಯಲ್ ಆಸ್ಪತ್ರೆಯಲ್ಲಿ ಕೂಡ ಹೃದಯಾಘಾತಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.ಡಾ.ಆನಿ, ಡಾ.ಹಿರೇಮಠ್‌ಗೆ ಸನ್ಮಾನ
ಮಕ್ಕಳ ಹೃದ್ರೋಗ ತಜ್ಞೆ ಡಾ.ಆನಿ ಮಾತನಾಡಿ, ಮಕ್ಕಳಲ್ಲಿ ವಂಶಪಾರಂಪರ್ಯವಾಗಿ ಬರುವ ಹೃದ್ರೋಗದ ಸಮಸ್ಯೆ, ಕಾರಣ ಪರಿಣಾಮಗಳ ಬಗ್ಗೆ ತಿಳಿಸಿಕೊಟ್ಟರು. ಇದೇ ವೇಳೆ ಡಾ.ಸಿ.ಎಸ್.ಹಿರೇಮಠ್ ಮತ್ತು ಡಾ.ಆನಿ ರವರನ್ನು ಸತ್ಕರಿಸಲಾಯಿತು.ಸಂಘದ ಜಿಲ್ಲಾಧ್ಯಕ್ಷ ಎಂ.ಜಯರಾಮ್, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ, ಖಜಾಂಚಿ ರವಿಕುಮಾರ್, ಹಿರಿಯ ಪತ್ರಕರ್ತರು, ಸಂಘದ ಸದಸ್ಯರು ಇದ್ದರು.