ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಅನಿಲ್ ಡಿಸೋಜ

| Published : Oct 20 2025, 01:04 AM IST

ಆರೋಗ್ಯದ ಬಗ್ಗೆ ಕಾಳಜಿ ವಹಿಸಿ: ಅನಿಲ್ ಡಿಸೋಜ
Share this Article
  • FB
  • TW
  • Linkdin
  • Email

ಸಾರಾಂಶ

ಆರೋಗ್ಯವೇ ಭಾಗ್ಯ ಎನ್ನುವುದು ಕೇವಲ ಮಾತಿಗೆ ಮಾತ್ರ ಸೀಮಿತವಾಗಬಾರದು. ನಾವು ಆರೋಗ್ಯವಾಗಿದ್ದರೆ ದೇಶವು ಆರೋಗ್ಯದಿಂದಿರುತ್ತದೆ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.

ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿದ ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ

ಕನ್ನಡಪ್ರಭ ವಾರ್ತೆ ಮುಂಡಗೋಡ

ಆರೋಗ್ಯವೇ ಭಾಗ್ಯ ಎನ್ನುವುದು ಕೇವಲ ಮಾತಿಗೆ ಮಾತ್ರ ಸೀಮಿತವಾಗಬಾರದು. ನಾವು ಆರೋಗ್ಯವಾಗಿದ್ದರೆ ದೇಶವು ಆರೋಗ್ಯದಿಂದಿರುತ್ತದೆ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಲೊಯೋಲ ವಿಕಾಸ ಕೇಂದ್ರದ ನಿರ್ದೇಶಕ ಅನಿಲ್ ಡಿಸೋಜ ಹೇಳಿದರು.

ಲಕ್ಕೊಳ್ಳಿ ಗ್ರಾಮದಲ್ಲಿ ಗ್ರಾಮ ಅಭಿವೃದ್ಧಿ ಸಮಿತಿ ಲಕ್ಕೊಳ್ಳಿ, ಜ್ಯೋತಿ ಆರೋಗ್ಯ ಕೇಂದ್ರ ಮುಂಡಗೋಡ ಮತ್ತು ಲೊಯೋಲ ವಿಕಾಸ ಕೇಂದ್ರ ಮುಂಡಗೋಡ ಇವುಗಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳಲಾಗಿದ್ದ ಉಚಿತ ಆರೋಗ್ಯ ಶಿಬಿರ ಉದ್ಘಾಟಿಸಿ ಮಾತನಾಡಿದರು. ಆರೋಗ್ಯವಿಲ್ಲದಿದ್ದರೆ ಆಸ್ತಿ, ಹಣ ಎಲ್ಲವು ನಶ್ವರ ಹಾಗಾಗಿ ಆರೋಗ್ಯ ಶಿಬಿರಗಳಲ್ಲಿ ಪ್ರತಿಯೊಬ್ಬರು ಭಾಗವಹಿಸಿ ಪ್ರಯೋಜನ ಪಡೆಯುವಂತೆ ಕರೆ ನೀಡಿದರು.

ಜ್ಯೋತಿ ಆರೋಗ್ಯ ಕೇಂದ್ರದ ಸ್ತ್ರೀ ರೋಗ ತಜ್ಞರಾದ ಡಾ. ಸಿಸ್ಟರ್ ಗ್ಲ್ಯಾಡಿಸ್ ಮಾತನಾಡಿ, ಚಳಿಗಾಲದಲ್ಲಿ ನೆಗಡಿ, ಕೆಮ್ಮು ಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಹಾಗಾಗಿ ಬಿಸಿನೀರು ಕುಡಿಯುವುದು ಉತ್ತಮ. ಸೊಳ್ಳೆ ಪರದೆ ಬಳಸುವುದು, ಮೊಸರು, ಹಾಲಿನಂತಹ ಆಹಾರ ಹಾಗೂ ವಿಟಮಿನ್ ಸಿ ಇರುವಂತಹ ಹಣ್ಣು ಸೇವಿಸಿ ಆರೋಗ್ಯದಿಂದ ಇರುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಲಕ್ಕೊಳ್ಳಿ ಗ್ರಾಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಮಂಜುನಾಥ ಕಿಳ್ಳಿಕ್ಯಾತರ್, ಉಪಾಧ್ಯಕ್ಷ ಹನೀಫ್ ಸಾಬ, ಕಾರ್ಯದರ್ಶಿ ಗಣಪತಿ ದೇಸಳ್ಳಿ, ಸದಸ್ಯರಾದ ಪಾಂಡು ಸಿಂಗನಳ್ಳಿ, ಆಶಾ ಕಾರ್ಯಕರ್ತೆ ರೇಣುಕಾ ಅಗಸರ, ಲೊಯೋಲ ವಿಕಾಸ ಕೇಂದ್ರದ ತೇಜಸ್ವಿನಿ, ಹಜರತ್, ದೀಪಾ, ನಾಗವೇಣಿ, ಸುರೇಶ, ಶಿಕ್ಷಣ ಫೌಂಡೆಶನ್‌ನ ಅರವಿಂದ, ಶಿವಾನಂದ ಹಾಗೂ ಜ್ಯೋತಿ ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗದವರು ಹಾಜರಿದ್ದರು.