ಸಾರಾಂಶ
ರಾಷ್ಟ್ರೀಯ ಜಂತುಹುಳು ನಿವಾರಣ ದಿನಾಚರಣೆಯಲ್ಲಿ ಟಿಎಚ್‌ಒ ಡಾ.ಮದುಕುಮಾರ್
ಕನ್ನಡಪ್ರಭ ವಾರ್ತೆ ಮೊಳಕಾಲ್ಮುರು
ದೇಹದಲ್ಲಿರುವ ಜಂತುಹುಳುಗಳು ನಾವು ತಿನ್ನುವ ಆಹಾರವನ್ನು ಕಬಳಿಸಿ ರಕ್ತ ಹೀನತೆ ಉಂಟು ಮಾಡಲಿದೆ ಹಾಗಾಗಿ ಪ್ರತಿ ಮಕ್ಕಳು ವರ್ಷಕ್ಕೆ ಎರಡು ಬಾರಿ ಜಂತುಹುಳು ನಿವಾರಣಾ ಮಾತ್ರೆಗಳನ್ನು ಸೇವಿಸಿ ಆರೋಗ್ಯವಂತರಾಗಿ ಬಾಳಬೇಕು ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ.ಮದುಕುಮಾರ್ ಹೇಳಿದರು.ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಜಿಪಂ, ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆಡಳಿತ, ತಾಪಂ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ಜಂತುಹುಳು ನಿವಾರಣ ದಿನಾಚರಣೆಯಲ್ಲಿ ಮಾತನಾಡಿದರು.
ಮಕ್ಕಳ ಕರುಳಿನಲ್ಲಿರುವ ಜಂತು ಹುಳಗಳು ಸೇವಿಸಿದ ಆಹಾರವನ್ನು ಕಬಳಿಸಿ ರಕ್ತಹೀನತೆ ಹಾಗೂ ಅವರ ಭೌದ್ಧಿಕ ಬೆಳವಣಿಗೆ ಕುಂಠಿತಗೊಳ್ಳಬಹುದು. ಜತಗೆ ಅವರ ಬುದ್ಧಿಶಕ್ತಿ ಕಡಿಮೆಯಾಗಿ ಕಲಿಕೆಯಲ್ಲಿ ಹಿಂದೆ ಬೀಳಬಹುದು ಹಾಗಾಗಿ ಪ್ರತಿಯೊಬ್ಬ ಮಗು ವರ್ಷಕ್ಕೆ ಎರಡು ಬಾರಿ ಜಂತುಹುಳು ಮಾತ್ರೆ ಸೇವಿಸಿದರೆ ಅಪೌಷ್ಟಿಕತೆ ನಿವಾರಿಸಬಹುದು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪ್ರಭಾರೆ ಪ್ರಾಂಶುಪಾಲ ತಿಪ್ಪೇಸ್ವಾಮಿ, ಉಪನ್ಯಾಸಕ ವಿಜಯಕುಮಾರ್, ಜಿ.ಟಿ.ಕುಮಾರ್ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಮಾರತಮ್ಮ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿ ರೂಪ, ಆರೋಗ್ಯ ಸುರಕ್ಷತಾ ಅಧಿಕಾರಿ ರಾಧಮ್ಮ, ಆಶಾ ಮೇಲ್ವಿಚಾರಕ ರವಿಶಂಕರ್ ಇದ್ದರು.