ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಬಾಂಗ್ಲಾ ನುಸುಳುಕೋರರಿಗೆ ನಕಲಿ ದಾಖಲೆ ಸೃಷ್ಟಿಸಿ ಜಿಲ್ಲೆಯಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಠಿ ಮಾಡುತ್ತಿದ್ದ ಜಾಲ ಹಾಸನದಲ್ಲಿ ಬಯಲಿಗೆ ಬಂದಿದ್ದು, ಕೂಡಲೇ ಈ ಜಾಲ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅರಕಲಗೂಡು ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಕಳೆದ ಒಂದು ದಿನಗಳಷ್ಟೆ ಬೆಂಗಳೂರು ಭಾಗದಿಂದ ಪರಿಶೀಲನಾ ಅಧಿಕಾರಿ ಪತ್ತೆ ಹಚ್ಚಿದ್ದು, ಅದನ್ನು ಡಿಸಿ ಅವರು ತನಿಖೆಗೆ ಆದೇಶ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಹೊರಗಿನವರಿಗೆ ಆಧಾರ್ ಕಾರ್ಡ್ ಕೊಡುವ ಕೆಲಸ ನಡೆದಿದೆ. ಇದರ ಹಿಂದೆ ದೊಡ್ಡ ಜಾಲವೇ ಇದ್ದು, ಅನೇಕರು ಸೇರಿ ಈ ಕೃತ್ಯದಲ್ಲಿ ತೊಡಗಿದ್ದು, ಇಂಟರ್‌ನೆಟ್ ಕೇಂದ್ರದವರೂ ಇದರಲ್ಲಿ ಭಾಗಿ ಆಗಿದ್ದಾರೆ. ಸ್ಪಂದನಾ ಸೇರಿ ಅನೇಕ ಕಡೆ ಆಧಾರ್ ಕಾರ್ಡ್ ಮಾಡುತ್ತಾರೆ ಎಂದರು.
ಕಂಪ್ಯೂಟರ್ ಆಪರೇಟರ್ ಒಬ್ಬರಿಲ್ಲ ದೊಡ್ಡ ಜಾಲವೇ ಇದೆ. ಆಧಾರ್ ಕಾರ್ಡ್ ನೀಡುವ ಹೊಣೆ ಹೊತ್ತವರು ಹಣಕ್ಕಾಗಿ ಈ ರೀತಿ ಸಂಪಾದನೆ ಮಾಡೋದು ಸರಿಯಲ್ಲ. ಒಂದು ಕಾರ್ಡ್‌ಗೆ 10ರಿಂದ 15 ಸಾವಿರ ರು. ಹಣ ಪಡೆಯುತ್ತಿದ್ದಾರೆ. ದುಷ್ಟರು, ದುರಾಸೆ ಇರುವವರು ಇಂತಹ ಕೆಟ್ಟ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.ಇ-ಖಾತೆ ಮಾಡುವಾಗಲು ಸಹ ಹಣಕ್ಕಾಗಿ ನಕಲಿ ದಾಖಲೆ ಸೃಷ್ಟಿ ಆಗುತ್ತಿವೆ ಅದನ್ನೂ ಪರಿಶೀಲಿಸಬೇಕು. ನಕಲಿ ಜಾತಿ ಪ್ರಮಾಣ ಪತ್ರ, ಮಾರ್ಕ್ಸ್ ಕಾರ್ಡ್, ನಕಲಿ ನೋಟ್ ಕೊಡುತ್ತಿದ್ದು, ಅಂತಹವರಿಗೆ ಶಿಕ್ಷೆ ಆಗಲಿಲ್ಲ. ಆಡಳಿತ ವ್ಯವಸ್ಥೆ ಅಷ್ಟು ದುರ್ಬಲ ಆಗಿದ್ದು, ಇದನ್ನು ದಂಧೆಕೋರರು, ಲೂಟಿಕೋರರು ಸದುಪಯೋಗ ಮಾಡಿಕೊಳ್ಳುತ್ತಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ಆಧಾರ್ ಕಾರ್ಡ್ ಮಾಡುವುದು ದೇಶದ್ರೋಹದ ಕೆಲಸ. ಇದು ದೇಶದ ಅಖಂಡತೆಗೆ ಧಕ್ಕೆ, ನುಸುಳುಕೋರರು ದೇಶಕ್ಕೆ ಅಪಾಯ ಎಂದು ಕಳವಳ ವ್ಯಕ್ತಪಡಿಸಿದರು. ಕೂಡಲೇ ಈ ಜಾಲ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಇಲ್ಲದಿದ್ದರೆ ಆಡಳಿತ ವಿಶ್ವಾಸ ಕಳೆದುಕೊಳ್ಳಲಿದೆ. ಕಣ್ಣೊರೆಸುವ ಕೆಲಸ ಆಗಬಾರದು ಎಂದು ಹೇಳಿದರು.
ಪರಪ್ಪರ ಅಗ್ರಹಾರ ಕರ್ಮಕಾಂಡ ಈಗ ಬಯಲಾಗಿದ್ದು, ಸೆರೆ ಇದ್ದವರು ಸುಧಾರಣೆಗೊಂಡು ಹೊರ ಬರಬೇಕು ಇದು ಉದ್ದೇಶವಾಗಿದೆ. ಕೊಲೆಗಾರ ಆಗಿ ಹೋದವನು ಕುಖ್ಯಾತ ಆಗಿ ಹೊರಗೆ ಬರುತ್ತಾರೆ. ಎಲ್ಲಾ ತಪ್ಪು ಮಾಡಿದವರಿಂದ ಹೀಗೆ ಜನ ಭಯಪಡುವಂತಾಗಿದೆ.ಜೈಲು ಪರಿವರ್ತನಾ ತಾಣ ಎನ್ನಬೇಕಾ! ಐಷಾರಾಮಿ ಜೀವನ ಅಲ್ಲೇ ಸಿಕ್ಕರೆ ಬದಲಾಗಲು ಹೇಗೆ ಸಾಧ್ಯ? ಸೆರೆಮನೆಗಳು ಅವ್ಯವಸ್ಥೆ ಆಗರದ ಜೊತೆ ಭ್ರಷ್ಟಾಚಾರದ ಕೂಪ ಆಗಿವೆ. ಸ್ವಾತಂತ್ರ್ಯ ವೇಳೆ ಹೀಗೆ ಇರಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಹಣ ಕೊಟ್ಟರೆ ಎಲ್ಲ ಸಿಗಲಿದೆ. ಆಡಳಿತ ನಡೆಸುವವರಿಗೆ ಇದೆಲ್ಲಾ ಗೊತ್ತಿಲ್ವವೇ, ಹಣ ಪಡೆದು ಅಧಿಕಾರಿ ನೇಮಕ ಮಾಡಿದ್ರೆ ಆತ ವಸೂಲಿ ಮಾಡಲ್ವಾ. ಮೇಲಧಿಕಾರಿಗಳಿಗೆ ಮಾಮೂಲಿ ಕೊಡಬೇಕಂತೆ, ಹೀಗಾದ್ರೆ ಸುಧಾರಣೆ ಹೇಗೆ ಎಂದು ಪ್ರಶ್ನೆ ಮಾಡಿದರು.
ವ್ಯವಸ್ಥೆ ಬಹಳ ವಿಫಲ ಆಗುತ್ತಿದೆ. ಅಧಿಕಾರಿಗಳು ನಿಷ್ಕ್ರಿಯರು ಅಂತಾ ಇಲ್ಲ, ಇವರು ಜೈಲಿಗೆ ಏಕೆ ಭೇಟಿ ಕೊಡುತ್ತಿಲ್ಲ. ಗುಪ್ತಚರ ಇಲಾಖೆಗೆ ಗೊತ್ತಿಲ್ವಾ, ಕೈಕಟ್ಟಿ ಏಕೆ ಕೂತಿದ್ದಾರೆ? ಗೌರವಾನ್ವಿತ ಲೋಕಾಯುಕ್ತ ಏನು ಮಾಡುತ್ತಿದೆ. ಜೈಲು ಒಳಗೆ ದಂಧೆ, ಐಷರಾಮಿ ಅಂದ್ರೆ ಲೋಕಾ ಏಕೆ ರೇಡ್ ಮಾಡಲಿಲ್ಲ ಎಂದ ಅವರು, ಸುಮೊಟೋ ಕೇಸ್ ದಾಖಲಿಸಿ ತನಿಖೆ ನಡೆಸಲಿ ಎಂದು ಆಗ್ರಹಿಸಿದರು.ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಎಸ್ಪಿ ಡ್ಯೂಟಿ ಅವರ ಕೆಲಸ ಏನು? ಅಪರಾಧ ತಡೆ ಮತ್ತು ವರದಿ ಮಾಡೋದು ಎಸ್ಪಿ ಡ್ಯೂಟಿ, ಕ್ರೈಂ ಡ್ಯೂಟಿ ಅವರ ಕೆಲಸ. ಆದ್ರೆ ಎಷ್ಟು ಮಂದಿ ಹಾಗೆ ಮಾಡ್ತಿದ್ದಾರೆ, ಅವರು ಯಾವ ಉದ್ದೇಶಕ್ಕೆಇದಾರೆ ಹೇಳಲಿ. ಕೇವಲ ಹಣ ವಸೂಲಿಗಾ ಹೇಳಲಿ, ಆಡಳಿತ ವ್ಯವಸ್ಥೆ ಸರಿಯಾಗಬೇಕು.ಆಡಳಿತಕ್ಕೆ ಗೊತ್ತಿದ್ದೇ ಇಂತಹ ಅಕ್ರಮ ನಡೆಯುತ್ತಿವೆ, ದಂಧೆ ಹೆಚ್ಚಾಗುತ್ತಿವೆ. ಸರ್ಕಾರ ಹೊಣೆ ಹೊತ್ತು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇಂದು ಹಣ ಪೂಜೆ, ಸೇವೆ- ಕರ್ತವ್ಯ ಪೂಜೆ ಇಲ್ಲವಾಗಿದೆ. ಕ್ರಮ ಕೈಗೊಳ್ಳದಿದ್ದರೆ ನೀವು ವಿಫಲ ಎಂದು ಹೇಳ ಬೇಕಾಗುತ್ತದೆ. ಮುಂದಾದರೂ ಇಂತಹ ಹುಳುಕು ಸರಿಪಡಿಸೋ ಕೆಲಸ ಮಾಡಲು ಮುಂದಾಗಿ ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾದೇಶ್, ಜನಾರ್ದನ್ ಗುಪ್ತ, ಕೇಶವ ಮೂರ್ತಿ, ಲೋಕೇಶ್ ಇತರರು ಉಪಸ್ಥಿತರಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))