ಬರಗಾಲದಲ್ಲಿ ರೈತರು ವ್ಯವಸಾಯಕ್ಕೆ ಅಗತ್ಯ ನೀರು ಪೂರೈಕೆ ಕಷ್ಟಸಾಧ್ಯ. ಹೀಗಾಗಿ ರೈತರಿಗೆ ಆರ್ಥಿಕ ಪರಿಸ್ಥಿತಿ ಕುಸಿಯದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಹೈನುಗಾರಿಕೆಯನ್ನು ಪ್ರೋತ್ಸಾಹಿಸಬೇಕು. ಪಶು ಇಲಾಖೆ ಅಧಿಕಾರಿಗಳು ಬ್ಯಾಂಕ್, ಮನ್ಮುಲ್ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ರೈತರು ಹಸು ಖರೀದಿಸಲು ಸಾಲದ ವ್ಯವಸ್ಥೆ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಮುಂದಿನ ವರ್ಷ ಬರಗಾಲದ ತೀವ್ರತೆ ಹೆಚ್ಚಿರುತ್ತದೆ. ಹೀಗಾಗಿ, ರೈತರು ಮತ್ತು ಜನ ಜಾನುವಾರುಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಮುಂಜಾಗ್ರತೆ ವಹಿಸಿ ಕೆಲಸ ಮಾಡಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಪಟ್ಟಣದ ತಾಪಂ ಕಚೇರಿ ಸಂಭಾಂಗಣದಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಇಲಾಖಾವಾರು ಪ್ರಗತಿ ಮಾಹಿತಿ ಪಡೆದು ಮಾತನಾಡಿ, ಬೇಸಿಗೆ ವೇಳೆ ನೀರಾವರಿ, ಸಣ್ಣ ನೀರಾವರಿ, ಸೆಸ್ಕ್, ಕೃಷಿ, ತೋಟಗಾರಿಕೆ ಹಾಗೂ ಪಸು ವೈದ್ಯಕೀಯ ಮತ್ತು ಸಂಗೋಪನಾ ಇಲಾಖೆ ಮೇಲೆ ಹೆಚ್ಚಿನ ಜವಾಬ್ದಾರಿ ಇದ್ದು. ಈ ಇಲಾಖೆ ಅಧಿಕಾರಿಗಳು ಬರದ ತೀವ್ರತೆ ಅರಿತು ಕೆಲಸ ಮಾಡಬೇಕು ಎಂದರು.

ಬರಗಾಲದಲ್ಲಿ ರೈತರು ವ್ಯವಸಾಯಕ್ಕೆ ಅಗತ್ಯ ನೀರು ಪೂರೈಕೆ ಕಷ್ಟಸಾಧ್ಯ. ಹೀಗಾಗಿ ರೈತರಿಗೆ ಆರ್ಥಿಕ ಪರಿಸ್ಥಿತಿ ಕುಸಿಯದಂತೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಹೈನುಗಾರಿಕೆಯನ್ನು ಪ್ರೋತ್ಸಾಹಿಸಬೇಕು. ಪಶು ಇಲಾಖೆ ಅಧಿಕಾರಿಗಳು ಬ್ಯಾಂಕ್, ಮನ್ಮುಲ್ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿ ರೈತರು ಹಸು ಖರೀದಿಸಲು ಸಾಲದ ವ್ಯವಸ್ಥೆ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಜತೆಗೆ ಹಸುಗಳಿಗಳ ಮೇವಿನ ಬಗ್ಗೆಯೂ ಗಮನ ಹರಿಸಬೇಕು ಎಂದು ಸೂಚನೆ ನೀಡಿದರು.

ದಾಖಲಾತಿ ಕುಸಿಯದಂತೆ ಎಚ್ಚರ ವಹಿಸಿ:

ಕಡಿಮೆ ಮಕ್ಕಳ ದಾಖಲಾತಿ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಆರು ಸರ್ಕಾರಿ ಶಾಲೆಗಳು ಮುಚ್ಚಿವೆ. 126 ಮಕ್ಕಳ ದಾಖಲಾತಿ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಹೇಳಿಕೆಯಿಂದ ಸಿಡಿಮಿಡಿಗೊಂಡ ಶಾಸಕರು. ಸರ್ಕಾರಿ ಶಾಲೆಗಳಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ದಾಖಲಾತಿ ಸಂಖ್ಯೆ ಕುಸಿಯುತ್ತಿದ್ದು, ಮಕ್ಕಳ ದಾಖಲಾತಿ ಎಷ್ಟು ಕುಸಿದಿದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಲು ಎಚ್ಚರ ವಹಿಸುವಂತೆ ಸೂಚಿಸಿದರು.

ತಾಲೂಕಿನ ವಿವಿಧೆಡೆ ಐದು ಬಾಲ್ಯ ವಿವಾಹ ಪ್ರಕರಗಳು ನಡೆದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿವೆ. ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು. ಸಿಡಿಪಿಒ ಪೂರ್ಣಿಮ ಬಾಲ್ಯ ವಿವಾಹ ಬೇರೆ ತಾಲೂಕುಗಳಲ್ಲಿ ನಡೆದು ಅವರು ಇಲ್ಲಿ ಬಂದು ವಾಸ ಮಾಡುತ್ತಿದ್ದರು. ಹೀಗಾಗಿ ನಮ್ಮ ಗಮನಕ್ಕೆ ಬಂದಿಲ್ಲ ಎಂದರು.

ಪ್ರತಿ ಗ್ರಾಮ, ಬಡಾವಣೆಗಳಲ್ಲೂ ಅಂಗನವಾಡಿ ಕಾರ್ಯಕರ್ತರು ಇರುತ್ತಾರೆ ಎಂದಮೇಲೆ ಈ ಬಗ್ಗೆ ಅವರಿಗೆ ಮಾಹಿತಿ ಇರಬೇಕು. ಬಾಲ್ಯ ವಿವಾಹವಾಗಿ ಗರ್ಭಿಣಿಯಾದ ಮೇಲೆ ವೈದ್ಯರು ನಮಗೆ ಈ ಬಗ್ಗೆ ಮಾಹಿತಿ ನೀಡಬೇಕೆ ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಮಂಜುನಾಥ್, ಇಒ ವೀಣಾ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಹೊನಗಾನಹಳ್ಳಿ ಕೃಷ್ಞೇಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪುಟ್ಟಣ್ಣ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

ಬಳಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವೇಶ್ವರಯ್ಯ ಮತ್ತು ಹೇಮಾವತಿ ನಾಲೆ ತಾಲೂಕಿನ ನೀರಿನ ಮೂಲವಾಗಿದೆ. ವರುಣ ಅವಕೃಪೆಯಿಂದ ಎರಡು ಅಣೆಕಟ್ಟೆಗಳು ಭರ್ತಿಯಾಗಿಲ್ಲ. ಈ ಪರಿಸ್ಥಿತಿಯಲ್ಲಿ ನಾಲೆಗಳಲ್ಲಿ ನೀರು ಹರಿಸಲು ಒತ್ತಡ ತಂದು ತಾಲೂಕಿನ ಎಲ್ಲಾ ಕೆರೆ- ಕಟ್ಟೆಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಭರ್ತಿ ಮಾಡಲಾಗಿದೆ. ಮಲ್ಲಿಗೆರೆ ಏತ ನೀರಾವರಿಗೆ ಸಂಬಂಧಿಸಿದಂತೆ ಪೈಪ್ ಲೈನ್ ಅಳವಡಿಕೆಗೆ ಇರುವ ಅಡೆತಡೆಗಳನ್ನು ನಿವಾರಿಸಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.