ಸಾರಾಂಶ
ದಾಬಸ್‌ಪೇಟೆ: ಆನೆಕಾಲು ರೋಗ ಒಮ್ಮೆ ಬಂದರೆ ಅದನ್ನು ಹೋಗಲಾಡಿಸಲು ಸಾಧ್ಯವಿಲ್ಲ. ರೋಗ ಬರುವ ಮುನ್ನ ಮುಂಜಾಗ್ರತಾ ಕ್ರಮ ಕೈಗೊಳ್ಳುವುದರಿಂದ ರೋಗ ನಿಯಂತ್ರಣ ಸಾಧ್ಯ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಅಶ್ವಿನಿ ಹೇಳಿದರು.
ದಾಬಸ್‌ಪೇಟೆ: ಆನೆಕಾಲು ರೋಗ ಒಮ್ಮೆ ಬಂದರೆ ಅದನ್ನು ಹೋಗಲಾಡಿಸಲು ಸಾಧ್ಯವಿಲ್ಲ. ರೋಗ ಬರುವ ಮುನ್ನ ಮುಂಜಾಗ್ರತಾ ಕ್ರಮ ಕೈಗೊಳ್ಳುವುದರಿಂದ ರೋಗ ನಿಯಂತ್ರಣ ಸಾಧ್ಯ ಎಂದು ಆರೋಗ್ಯ ನಿರೀಕ್ಷಣಾಧಿಕಾರಿ ಅಶ್ವಿನಿ ಹೇಳಿದರು.
ಸೋಂಪುರ ಹೋಬಳಿಯ ಪೆಮ್ಮನಹಳ್ಳಿ ಗ್ರಾಮದಲ್ಲಿ ದಾಬಸ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಆಯೋಜಿಸಿದ್ದ ಆನೆಕಾಲು ರೋಗ ಉಚಿತ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು, ಆನೆಕಾಲು ರೋಗ ಕ್ಯುಲೆಕ್ಸ್ ಎಂಬ ಸೊಳ್ಳೆ ಕಡಿತದಿಂದ ಬರುತ್ತದೆ. ಈ ಸೊಳ್ಳೆ ಕಡಿದ ನಂತರ 8 ವರ್ಷಗಳ ನಂತರ ದೇಹದಲ್ಲಿ ಚುಚ್ಚಿದ ಅನುಭವ, ಚಳಿ, ಜ್ವರ ಬರುವುದರ ಮೂಲಕ ಅದು ತನ್ನ ಜೀವಂತಿಕೆ ಸೂಚಿಸುತ್ತದೆ ಎಂದರು.ಆರೋಗ್ಯ ಸಹಾಯಕಿ ಆಶಾರಾಣಿ ಮಾತನಾಡಿ ಒಮ್ಮೆ ಕಾಲು ಬಾವು ಬಂದರೆ ದೇಹದಲ್ಲಿರುವ ಹುಳುವನ್ನು ಜಾಗೃತಗೊಳ್ಳದಂತೆ ಮಾತ್ರೆಗಳಿಂದ ಮಾಡಬಹುದೇ ಹೊರತು ಅದನ್ನು ನಿರ್ಮೂಲನೆ ಮಾಡಲು ಸಾಧ್ಯವಾಗಿಲ್ಲ. ಕಾರಣ ರೋಗದ ಇರುವಿಕೆಯನ್ನು ರಕ್ತ ಪರೀಕ್ಷೆಯ ಮೂಲಕ ತಿಳಿದು ಮತ್ತು ರೋಗ ಇಲ್ಲದವರು ಕೂಡ ಸರ್ಕಾರ ನೀಡುವ ಉಚಿತ ಡಿಇಸಿ ಮಾತ್ರೆಗಳನ್ನು ಸೇವಿಸುವುದರ ಮೂಲಕ ರೋಗವನ್ನು ನಿರ್ಮೂಲನೆ ಮಾಡಬಹುದು ಎಂದರು.
ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳಾದ ಜಯಲಕ್ಷ್ಮೀ, ಆಶಾರಾಣಿ, ಚಂದ್ರಶೇಖರ್ ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.ಪೋಟೋ 4 : ಸೋಂಪುರ ಹೋಬಳಿಯ ಪೆಮ್ಮನಹಳ್ಳಿ ಗ್ರಾಮದಲ್ಲಿ ದಾಬಸ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರ ಆಯೋಜಿಸಿದ್ದ ಆನೆಕಾಲು ರೋಗ ಉಚಿತ ತಪಾಸಣೆ ಶಿಬಿರದಲ್ಲಿ ಜನರನ್ನು ಆರೋಗ್ಯ ಸಿಬ್ಬಂದಿ ತಪಾಸಣೆ ಮಾಡಿದರು.