ಪರಿಸರ ಉಳಿಯದಿದ್ದರೆ ಮಾನವ ಸಂಕುಲ ಉಳಿಯದು: ಸಚಿವ

| Published : Jul 11 2024, 01:36 AM IST

ಸಾರಾಂಶ

take step for control dengue

-ಹಿರಿಯೂರು ವೇದಾವತಿ ಕಾಲೇಜು ಶಿಕ್ಷಣ ಇಲಾಖೆ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ

----

ಕನ್ನಡಪ್ರಭ ವಾರ್ತೆ ಹಿರಿಯೂರುಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತ ಗಿಡಮರ ಬೆಳೆಸುವ ಮೂಲಕ ಪರಿಸರ ವೃದ್ಧಿಗೆ ಸಂಕಲ್ಪ ತೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಹೇಳಿದರು.

ನಗರದ ವೇದಾವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಇಲಾಖೆ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಲುಷಿತ ವಾತಾವರಣ ತಿಳಿಯಾಗಲು ಮತ್ತು ಶುದ್ಧ ಆಮ್ಲಜನಕದ ಪ್ರಮಾಣ ಹೆಚ್ಚಾಗಲು ಗಿಡಮರ ಬೆಳೆಸುವ ಅವಶ್ಯಕತೆ ಇದೆ. ಮಾನವನ ಉಳಿವು ಗಿಡ ಮರಗಳ ಉಳಿವಿನ ಮೇಲೆ ಅವಲಂಬಿತವಾಗಿದ್ದು, ಪರಿಸರ ನಾಶವಾದರೆ ಮಾನವ ಸಂಕುಲವು ಅವನತಿಯಾಗುತ್ತದೆ ಎಂಬ ಕಟುಸತ್ಯದ ಅರಿವು ನಮಗಿರಬೇಕಿದೆ. ಕಾಲೇಜಿನ ಕಟ್ಟಡಗಳ ನಿರ್ಮಾಣಕ್ಕೆ ಅನುದಾನ ಒದಗಿಸಲಾಗುವುದು. ಹೆಚ್ಚಿನ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುವುದು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಪ್ರಾoಶುಪಾಲ ಚಂದ್ರಶೇಖರಪ್ಪ, ಫ್ರೊ.ಎಚ್.ತಿಪ್ಪೇಸ್ವಾಮಿ, ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಕಾಂಗ್ರೆಸ್ ಮುಖಂಡ ಗಿಡ್ಡೋಬನಹಳ್ಳಿ ಅಶೋಕ್, ನಿವೃತ್ತ ಪ್ರಾಂಶುಪಾಲ ಶಾಂತರಾಜು, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಚ್.ಡಿ.ಚಂದ್ರಶೇಖರ್, ರವಿಚಂದ್ರ ನಾಯ್ಕ್, ಮಹಮ್ಮದ್ ಫಕ್ರುದ್ಧೀನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಲಿಂಗೇಗೌಡ, ಜಿ.ಎಲ್.ಮೂರ್ತಿ, ಫ್ರೊ. ಧನಂಜಯ್, ಡಾ. ಅಣ್ಣಪ್ಪಸ್ವಾಮಿ, ಫ್ರೊ.ನಾಗರಾಜ್, ಡಿ.ಆರ್. ಪ್ರಸನ್ನ ಕುಮಾರ್, ಡಾ. ನಟರಾಜ್, ಪರಮೇಶ್ ಉಪಸ್ಥಿತರಿದ್ದರು.

-------

ಫೋಟೊ:1

ನಗರದ ವೇದಾವತಿ ಪ್ರಥಮ ದರ್ಜೆ ಕಾಲೇಜು ಶಿಕ್ಷಣ ಇಲಾಖೆ ಆಯೋಜಿಸಲಾಗಿದ್ದ ವನಮಹೋತ್ಸವ ಕಾರ್ಯಕ್ರಮ ಹಾಗೂ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭಕ್ಕೆ ಸಚಿವ ಡಿ. ಸುಧಾಕರ್ ಚಾಲನೆ ನೀಡಿ ಮಾತನಾಡಿದರು.