ನೆರೆಹೊರೆ ಕನ್ನಡಿಗರನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಕ್ರಮ ಕೈಗೊಳ್ಳಿ: ಹರೀಶ್

| Published : Nov 02 2024, 01:33 AM IST

ನೆರೆಹೊರೆ ಕನ್ನಡಿಗರನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಕ್ರಮ ಕೈಗೊಳ್ಳಿ: ಹರೀಶ್
Share this Article
  • FB
  • TW
  • Linkdin
  • Email

ಸಾರಾಂಶ

ನೆರೆಹೊರೆ ರಾಜ್ಯದ ಗಡಿಗಳಲ್ಲಿ ನೆಲೆಸಿರುವ ಕನ್ನಡ ಭಾಷಿಕರು ಕರ್ನಾಟಕ ಸೇರಲು ಉತ್ಸುಕರಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಪಿ.ಹರೀಶ್ ಹರಿಹರದಲ್ಲಿ ಹೇಳಿದ್ದಾರೆ.

- ಹರಿಹರ ಗಾಂಧಿ ಮೈದಾನದಲ್ಲಿ 69ನೇ ಕನ್ನಡ ರಾಜ್ಯೋತ್ಸವ- - - ಕನ್ನಡಪ್ರಭ ವಾರ್ತೆ ಹರಿಹರ

ನೆರೆಹೊರೆ ರಾಜ್ಯದ ಗಡಿಗಳಲ್ಲಿ ನೆಲೆಸಿರುವ ಕನ್ನಡ ಭಾಷಿಕರು ಕರ್ನಾಟಕ ಸೇರಲು ಉತ್ಸುಕರಾಗಿದ್ದು, ಈ ಸಂಬಂಧ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ತಾಲೂಕು ರಾಷ್ಟ್ರೀಯ ಮತ್ತು ನಾಡಹಬ್ಬ ಆಚರಣಾ ಸಮಿತಿಯಿಂದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ 69ನೇ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಚುನಾವಣೆ ಸಂದರ್ಭ ನೆರೆ ರಾಜ್ಯಗಳ ರಾಜಕಾರಣಿಗಳು ಕರ್ನಾಟಕದ ಕೆಲವು ಪ್ರದೇಶಗಳನ್ನು ತಮ್ಮ ರಾಜ್ಯಕ್ಕೆ ಸೇರಿಸಿಕೊಳ್ಳುತ್ತೇವೆಂದು ಭಾಷಣ ಮಾಡುತ್ತಾರೆ. ಆದರೆ, ಅದೇ ರಾಜ್ಯಗಳ ಕನ್ನಡ ಭಾಷಿಕರು ಕರ್ನಾಟಕದ ಜೊತೆ ವಿಲೀನರಾಗಲು ತುದಿಗಾಲಲ್ಲಿದ್ದಾರೆ ಎಂದರು.

ಆಲೂರು ವೆಂಕಟರಾಯರ ನೇತೃತ್ವದಲ್ಲಿ 1904ರಲ್ಲಿ ಆರಂಭವಾದ ಕನ್ನಡನಾಡು ಕಟ್ಟುವ ಹೋರಾಟ ಅನೇಕ ಸಾಹಿತಿಗಳು, ಸಾರ್ವಜನಿಕರ ಬೆಂಬಲ ಪಡೆದು, 1956ರಲ್ಲಿ ಮೈಸೂರು ರಾಜ್ಯವಾಗಿ ಜನ್ಮತಾಳಿತು, ನಂತರ 1973 ರಲ್ಲಿ ಕರ್ನಾಟಕವೆಂದು ಕರೆಯಲ್ಪಟ್ಟಿತು. 1980-82 ರಲ್ಲಿ ಡಾ.ರಾಜ್ ಕುಮಾರ್ ಭಾಗವಹಿಸಿದ್ದ ಗೋಕಾಕ ಚಳವಳಿ ಪರಿಣಾಮವಾಗಿ ಕನ್ನಡ ರಾಜ್ಯದ ಅಧಿಕೃತ ಭಾಷೆಯಾಗಿ ಹೊರಹೊಮ್ಮಿತು ಎಂದರು.

ಕನ್ನಡ ಧ್ವಜಾರೋಹಣ ನೆರವೇರಿಸಿದ ತಹಸಿಲ್ದಾರ್ ಕೆ.ಎಂ.ಗುರುಬಸವರಾಜ, 2,000 ವರ್ಷಗಳ ಇತಿಹಾಸವಿರುವ, ಸುಂದರ ಭಾಷೆಯಾದ ಕನ್ನಡಡಕ್ಕೆ ವಿನೋಭಾ ಭಾವೆ ಲಿಪಿಗಳ ರಾಣಿ ಎಂದು ಕರೆದರು. ವರಕವಿ ಬೇಂದ್ರೆ ಭಾವನಾತ್ಮಕ ಕವನಗಳ ರಚನೆಗೆ ಕನ್ನಡ ಭಾμÉಯೇ ಸೂಕ್ತ ಮತ್ತು ಹೃದಯಕ್ಕೆ ಹತ್ತಿರವಾದ ಭಾಷೆ ಎಂದು ಕೊಂಡಾಡಿದ್ದಾರೆ ಎಂದು ವಿವರಿಸಿದರು.

ಉಪನ್ಯಾಸ ನೀಡಿದ ಬಿ.ಬಿ. ರೇವಣ ನಾಯ್ಕ, ಜಗತ್ತಿನ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಕನ್ನಡವೂ ಒಂದು, ಗ್ರೀಕ್‍ನ ರೋಮನ್, ಭಾರತದ ಸಂಸ್ಕೃತದ ನಂತರ 3ನೇ ಸ್ಥಾನ ಕನ್ನಡಕ್ಕಿದೆ ಎಂದರು.

ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್, ಬಿಇಒ ಡಿ.ದುರುಗಪ್ಪ, ತಾಪಂ ಇಒ ಎಸ್.ಪಿ.ಸುಮಲತಾ, ಪೌರಾಯುಕ್ತ ಸುಬ್ರಹ್ಮಣ್ಯ ಶ್ರೇಷ್ಠಿ, ಪಿಐ ಎಸ್. ದೇವಾನಂದ್, ಕೃಷಿ ಇಲಾಖೆಯ ಎ.ನಾರನ ಗೌಡ, ತೋಟಗಾರಿಕೆ ಇಲಾಖೆಯ ಶಶಿಧರಯ್ಯ, ಪಶು ಸಂಗೋಪನ ಇಲಾಖೆಯ ಸಿದ್ದೇಶ್, ಟಿಹೆಚ್‍ಒ ಡಾ. ಅಬ್ದುಲ್ ಖಾದರ್, ಸಿಡಿಪಿಒ ಪೂರ್ಣಿಮಾ, ಗ್ರಾಮೀಣ ನೀರು ಸರಬರಾಜು ಇಲಾಖೆಯ ಗಿರೀಶ್, ಕಂದಾಯ ಇಲಾಖೆ ಸಮೀರ್ ಅಹ್ಮದ್, ಕನ್ನಡಪರ ಸಂಘಟನೆಗಳ ಮುಖಂಡರು, ಶಿಕ್ಷಕರು ವಿದ್ಯಾರ್ಥಿಗಳಿದ್ದರು.

- - -

-1ಎಚ್‍ಆರ್‍ಆರ್1:

ಹರಿಹರದ ಗಾಂಧಿ ಮೈದಾನದಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅಧ್ಯಕ್ಷತೆ ವಹಿಸಿ ಶಾಸಕ ಬಿ.ಪಿ.ಹರೀಶ್ ಮಾತನಾಡಿದರು.