ಹುಬ್ಬಳ್ಳಿ: ಪಶ್ಚಿಮ ಪದವೀಧರ ಕ್ಷೇತ್ರದಿಂದ ಪರಿಷತ್‌ಗೆ ನಡೆಯಲಿರುವ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಇಲ್ಲಿನ ಅರವಿಂದ ನಗರದಲ್ಲಿನ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ದೊಡ್ಡ ಪ್ರಮಾಣದಲ್ಲಿ ಪದವೀಧರರು ಇರುವುದರಿಂದ ಹೆಚ್ಚಿನ ಶಕ್ತಿ ಹಾಕಬೇಕು. ಎಲ್ಲರನ್ನು ಹೆಚ್ಚಿನ ಸಂಪರ್ಕ ಮಾಡಬೇಕು ಎಂದರು. ಸಂಸದ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್ ಅಧಿಕಾರದಲ್ಲಿರುವುದರಿಂದ ಜಿದ್ದಿಗೆ ಬಿದ್ದವರಂತೆ ಗೆಲ್ಲಲೆಬೇಕೇಂಬ ಪಣ ತೊಟ್ಟಿದ್ದಾರೆ. ಇದಕ್ಕೆ ಬೇಕಾಗುವ ಎಲ್ಲ ವಾಮಮಾರ್ಗ ಅನುಸರಿಸಲು ಕಾಂಗ್ರೆಸ್ ಹಿಂಜರಿಯುವದಿಲ್ಲ. ಆದಕಾರಣ ನಾವು ಎಚ್ಚರಿಕೆಯಿಂದ ಚುನಾವಣೆ ಎದುರಿಸಬೇಕಿದೆ ಎಂದರು. ಶಾಸಕರಾದ ಮಹೇಶ ಟೆಂಗಿನಕಾಯಿ, ಎಂ.ಆರ್. ಪಾಟೀಲ್, ಮೇಯರ್ ಜ್ಯೋತಿ ಪಾಟೀಲ್, ಎಸ್.ವಿ.ಸಂಕನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಮನ್ ಕೀ ಬಾತ್ ವೀಕ್ಷಣೆ
ಹುಬ್ಬಳ್ಳಿ: ದೂರದೃಷ್ಟಿ ನಾಯಕತ್ವದಿಂದ ದೇಶದ ಇಂಧನ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕೀ ಬಾತ್ ಮೂಲಕ ಭಾರತದ ಸೌರಶಕ್ತಿ, ಪವನ ಶಕ್ತಿ ಮೇಲೆ ಪ್ರಖರ ಬೆಳಕು ಚೆಲ್ಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬಣ್ಣಿಸಿದರು.ಇಲ್ಲಿನ 52ನೇ ವಾರ್ಡಿನಲ್ಲಿ ಜನಸಾಮಾನ್ಯರೊಡಗೂಡಿ ಪ್ರಧಾನಿ ಮೋದಿ ಅವರ 133ನೇ ಮನ್ ಕೀ ಬಾತ್ ವೀಕ್ಷಿಸಿ ಮಾತನಾಡಿದರು.
ಭಾರತದ ಹೊಸ ಮತ್ತು ನವೀಕರಿಸಬಹುದಾದ ಇಂಧನ ವ್ಯವಸ್ಥೆ ಬಗ್ಗೆ ಪ್ರಧಾನಿ ಅತ್ಯಂತ ವಿಶ್ವಾಸಾರ್ಹ ಮಾತುಗಳನ್ನಾಡಿದ್ದಾರೆ. ಇದು ಶುದ್ಧ ಇಂಧನ ಪರಿವರ್ತನೆ ಪಥದಲ್ಲಿ ಸಾಗಿದ ನಮ್ಮ ಪ್ರಯತ್ನಕ್ಕೆ ಮತ್ತಷ್ಟು ಸ್ಫೂರ್ತಿ ತುಂಬಿದೆ ಎಂದು ಹೇಳಿದರು.56 gw ದಾಟಿದ ಪವನ ಶಕ್ತಿ: ಭಾರತದ ಪವನ ಶಕ್ತಿ ಸಾಮರ್ಥ್ಯ ಇದೀಗ 56 GW ದಾಟಿದೆ, ಕಳೆದ ವರ್ಷ 6 GW ಸೇರಿಸಿದ್ದು, ಇದು ಇದುವರೆಗಿನ ಅತ್ಯಧಿಕ ಸಾಮರ್ಥ್ಯ ಸೇರ್ಪಡೆಯಾಗಿದೆ. ಭಾರತ ಪವನ ಶಕ್ತಿ ಪ್ರಯಾಣವನ್ನು ವೇಗಗೊಳಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಸಂಸದ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಶಾಸಕ ಮಹೇಶ್ ಟೆಂಗಿನಕಾಯಿ, ವಿಭಾಗ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ, ಬಂಗಾರು ಹನುಮಂತು, ಭರತ ಬೊಮ್ಮಾಯಿ, ಮಹೇಂದ್ರ ಕೌತಾಳ, ಕೃಷ್ಣಾ ಗಂಡಗಾಳೇಕರ್, ಪ್ರಭು ನವಲಗುಂದಮಠ ಸೇರಿದಂತೆ ಹಲವರು ಉಪಸ್ಥಿತರಿದ್ದರು.