ಸಾರಾಂಶ
ಕನ್ನಡಪ್ರಭ ವಾರ್ತೆ ಕೊಟ್ಟೂರು
ವನ್ಯ ಜೀವಿಗಳನ್ನು ಕೆಲವರು ಶೋಕಿತನಕ್ಕೆ ಬಳಸಿಕೊಳ್ಳಲು ಮುಂದಾಗಿರುವುದು ಸರಿಯಲ್ಲ. ಅವುಗಳ ಸ್ವಚ್ಛಂದ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹವಾಗುವ ಮೂಲಕ ವನ್ಯಜೀವಿಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಪ್ರಾಚಾರ್ಯ ಡಾ. ಎಂ. ರವಿಕುಮಾರ್ ಹೇಳಿದರು.ಇಲ್ಲಿನ ಕೊಟ್ಟೂರೇಶ್ವರ ಕಾಲೇಜಿನ ಪ್ರಾಣಿ, ಸಸ್ಯಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ, ಎನ್‌ಸಿಸಿ, ಎನ್‌ಎಸ್ಎಸ್, ಸೈನ್ಸ್ ಫೋರಂ, ಆರ್ ಎನ್ ಡಿ, ಸಂಯೋಜನೆಯೊಂದಿಗೆ ಹಮ್ಮಿಕೊಂಡಿದ್ದ ವನ್ಯ ಜೀವಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
೨೦೨೫ರ ವಿಶ್ವ ವನ್ಯಜೀವಿ ದಿನವನ್ನು ವನ್ಯಜೀವಿ ಸಂರಕ್ಷಣಾ ಹಣಕಾಸು: ಜನರು ಮತ್ತು ಗ್ರಹದಲ್ಲಿ ಹೂಡಿಕೆ ಮಾಡುವುದು ಎಂಬ ಧ್ಯೇಯವಾಕ್ಯ ವಿಷಯದೊಂದಿಗೆ ಈ ವರ್ಷ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆಯ ವಿಶ್ವ ವನ್ಯ ಜೀವಿ ದಿನವನ್ನು ಆಚರಿಸಲು ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ ತೀರ್ಮಾನ ಕೈಗೊಂಡಿದೆ ಎಂದರು.ಆಹಾರ, ಇಂಧನ, ಔಷಧ, ವಸತಿ ಮತ್ತು ಬಟ್ಟೆಗಳಿಂದ ಹಿಡಿದು ನಮ್ಮ ಅಗತ್ಯಗಳನ್ನು ಪೂರೈಸಲು ಎಲ್ಲೆಡೆ ಜನರು ವನ್ಯಜೀವಿ ಮತ್ತು ಜೀವವೈವಿಧ್ಯ ಆಧಾರಿತ ಸಂಪನ್ಮೂಲಗಳನ್ನು ಅವಲಂಬಿಸಿದ್ದಾರೆ. ಪ್ರಕೃತಿ ನಮಗೆ ಮತ್ತು ನಮ್ಮ ಗ್ರಹಕ್ಕೆ ತರುವ ಪ್ರಯೋಜನಗಳು ಮತ್ತು ಸೌಂದರ‍್ಯವನ್ನು ಆನಂದಿಸಲು, ಪರಿಸರ ವ್ಯವಸ್ಥೆಗಳು ಅಭಿವೃದ್ಧಿ ಹೊಂದಲು ಮತ್ತು ಸಸ್ಯ ಮತ್ತು ಪ್ರಾಣಿ ಪ್ರಭೇದಗಳು ಭವಿಷ್ಯದ ಪೀಳಿಗೆಗೆ ಅಸ್ತಿತ್ವದಲ್ಲಿರಲು ಜನರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕರೆ ಕೊಟ್ಟರು.
ರಾಧಾ ಸ್ವಾಮಿ ಕೆ.ಪಿ., ಡಾ. ಚೇತನ್ ಚೌಹಾನ್, ಡಾ. ಸ್ವಾಮಿ ಆರಾಧ್ಯ ಮಠ, ಕೊಟ್ರೇಶ್ ಪ್ರತಿಮಾ ಎಂ.ಎಸ್, ಎಂ. ಗಗನ ಶ್ರೀ, ಎಂ. ನಂದಿತಾ ಉಪಸ್ಥಿತರಿದ್ದರು.ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪೃಥ್ವಿರಾಜ್ ಸಿ.ಬೆಡ್ಜರಿಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ಯಾರ್ಥಿಗಳಾದ ಭೂಮಿಕ ಎಚ್.ಎಸ್, ಮಾಂತೇಶ್, ಸುಕನ್ಯ, ರುಚಿಶ್ರೀ, ಮಹಮ್ಮದ್ ಕೈಫ್, ಸ್ವಾಗತಿಸಿ, ನಯನ ಎಂ. ಪ್ರಾರ್ಥಿಸಿದರು. ಎಲ್ಲ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))