ಪ್ರೇಕ್ಷಕರಲ್ಲಿ ಸುಪ್ತವಾಗಿರುವಂತ ಜ್ಞಾನದ ಅಮೃತದ ಧಾರೆ ಪಡೆಯಲಿಕ್ಕೆ ಯಕ್ಷಗಾನ ಕಾರಣವಾಗುತ್ತಿದೆ. ಸನಾತನ ಧರ್ಮದ ಭಾರತೀಯ ದರ್ಶನದ ಪ್ರವೇಶಕ್ಕೆ ಸುಲಭ ಮಾರ್ಗ ಯಕ್ಷಗಾನ ತಾಳಮದ್ದಳೆ ಎಂದು ಮೂಡುಬಿದಿರಿ ಶ್ರೀ ಜೈನ ಮಠದ ಶ್ರೀ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಪ್ರಭವಾರ್ತೆ ಮೂಡುಬಿದಿರಿ

ಪ್ರೇಕ್ಷಕರಲ್ಲಿ ಸುಪ್ತವಾಗಿರುವಂತ ಜ್ಞಾನದ ಅಮೃತದ ಧಾರೆ ಪಡೆಯಲಿಕ್ಕೆ ಯಕ್ಷಗಾನ ಕಾರಣವಾಗುತ್ತಿದೆ. ಸನಾತನ ಧರ್ಮದ ಭಾರತೀಯ ದರ್ಶನದ ಪ್ರವೇಶಕ್ಕೆ ಸುಲಭ ಮಾರ್ಗ ಯಕ್ಷಗಾನ ತಾಳಮದ್ದಳೆ ಎಂದು ಮೂಡುಬಿದಿರಿ ಶ್ರೀ ಜೈನ ಮಠದ ಶ್ರೀ ಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಸ್ವಾಮಿಗಳು ಅಭಿಪ್ರಾಯಪಟ್ಟಿದ್ದಾರೆ.

ಜೈನ ಮಠದ ಸಭಾಂಗಣದಲ್ಲಿ ನಡೆದ ಆಮ್ನಾಯಃ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆಯ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿದರು.

ಮೂಡುಬಿದಿರಿ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನೂಮಂತ ದೇವಸ್ಥಾನದ ಮೊಕ್ತೇಸರ ಹಿರಿಯ ಸಹಕಾರಿ ಧುರೀಣ ಪಡುಮಾರ್ನಾಡು ದಯಾನಂದ ಪೈ ಅಧ್ಯಕ್ಷತೆ ವಹಿಸಿದ್ದರು.

ಮೂಡುಬಿದಿರಿಯ ಯುವ ಉದ್ಯಮಿ ರುದ್ರಾಂಶ ಕನ್ಸ್ಟ್ರಕ್ಷನ್ ನ ಅಜಯ್ ದೀಕ್ಷಿತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.ಯಕ್ಷಗಾನ ಸಂಘಟಕ, ವಿಮರ್ಶಕ ಎಂ ಶಾಂತರಾಮ ಕುಡ್ವ ಇದ್ದರು. ಬಳಗದ ಸಂಚಾಲಕ ಡಾ. ವಿನಾಯಕ ಭಟ್ ಗಾಳಿಮನೆ ಸ್ವಾಗತಿಸಿದರು. ಭಾಗವತ ಶಿವಪ್ರಸಾದ್ ಭಟ್ ಕಾಂತಾವರ ನಿರೂಪಿಸಿ, ವಂದಿಸಿದರು.