ಸಾರಾಂಶ
- ಹೊನ್ನಾಳಿ, ನ್ಯಾಮತಿ ಪ್ರತಿಭಾವಂತ ಮಕ್ಕಳು ದಾಖಲೆಗಳ ಸಲ್ಲಿಸಲು ಸಲಹೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ಎಲ್ಲ ವಿದ್ಯಾರ್ಥಿಗಳಿಗೆ ಸ್ವಾಭಿಮಾನಿ ಬಳಗ ಮತ್ತು ಇನ್ ಸೈಟ್ ಐಎಎಸ್ ಅಕಾಡೆಮಿ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ನಗದು ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಲಾಗುವುದು ಎಂದು ಬಳಗದ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್ ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷವಾಗಿ ಗ್ರಾಮೀಣ ಮಕ್ಕಳಿಗೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಆದ ನಂತರ ತಾವು ಮುಂದೆ ಯಾವ ಕೋರ್ಸ್ ಆಯ್ಕೆಮಾಡಿಕೊಳ್ಳಬೇಕು ಎನ್ನುವ ಬಗ್ಗೆ ಮಾಹಿತಿ ಕೊರತೆ, ಗೊಂದಲಗಳಿರುತ್ತವೆ. ಹೊನ್ನಾಳಿಯಲ್ಲಿ ನಡೆಯಲಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಈ ಬಗ್ಗೆ ಉನ್ನತ ವ್ಯಾಸಂಗದ ಹೆಜ್ಜೆಗಳ ಬಗ್ಗೆ ದಿಕ್ಸೂಚಿ ಮಾರ್ಗದರ್ಶನ ನೀಡುವ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ ಎಂದರು.
ಅವಳಿ ತಾಲೂಕುಗಳ ಪ್ರತಿಭಾವಂತ ಮಕ್ಕಳು ಮೇ 30ರೊಳಗೆ ತಮ್ಮ ಹೆಸರು, ಅಂಕಪಟ್ಟಿಯ ನಕಲು ಪ್ರತಿಗಳನ್ನು ಕಾರ್ಯಕ್ರಮದ ಸಂಚಾಲಕರಿಗೆ ನೀಡಬೇಕು. ಕಾರ್ಯಕ್ರಮ ನಡೆಯುವ ದಿನಾಂಕವನ್ನು ನಂತರ ತಿಳಿಸಲಾಗುವುದು. ರಾಜು ಕಣಗಣ್ಣಾರ - 8073362266, ವಿನಯ್ ಎಂ. ವಗ್ಗರ- 7975650416, ಹರೀಶ್-73533480890, ಸಂದೀಪ್- 8095446750, ಮಂಜು. ಜೆ 9902369894,ರಘು ಎಂ.8880117779, ಕರೀಂ-8197069136, ನಾಗೇಶ್ ಗಂಜೀನಹಳ್ಳಿ- 7892229504, ಯತೀಶ್ ನ್ಯಾಮತಿ- 9986675383, ಸಿದ್ದ ಮಾದನಬಾವಿ- 8497099298, ಧರ್ಮ ಗಡೇಕಟ್ಟೆ- 7760708923 ಸಂಚಾಲಕರಾಗಿದ್ದು, ಅವರ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆದು, ಹೆಸರು, ಅಂಕಪಟ್ಟಿ ಮಾಹಿತಿ ಸಲ್ಲಿಸಬೇಕು ಎಂದರು.ತಮ್ಮ ಸಂಸ್ಥೆಯಿಂದ ನಮ್ಮ ನಡೆ ಶಾಲೆ ಕಡೆಗೆ ಎಂಬ ಅಭಿಯಾನವನ್ನು ಅವಳಿ ತಾಲೂಕುಗಳಲ್ಲಿ ಈ ಹಿಂದೆ ಮಾಡಲಾಗಿದೆ. ಇದಕ್ಕೆ ಉತ್ತಮ ಪ್ರತ್ರಿಕ್ರಿಯೆ ದೊರೆತ್ತಿದೆ. ಈ ತಾಲೂಕುಗಳಲ್ಲಿ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಅಧ್ಯಯನದ ಶಿಕ್ಷಣ ಅದಾಲತ್ ಅಭಿಯಾನ ಜುಲೈ ತಿಂಗಳಿಂದ ಮುಂದುವರಿಸಲಾಗುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಳಗದ ಜಿಲ್ಲಾ ಅಧ್ಯಕ್ಷ ವಿರೂಪಾಕ್ಷ ಪಂಡಿತ್, ತಾಲೂಕು ಸಂಚಾಲಕರಾದ ರಾಜು ಕಣಗಣ್ಣಾರ, ವಿನಯ್ ಎಂ.ವಗ್ಗರ್, ಸಂದೀಪ್, ಮಂಜು ಜೆ, ರವಿ, ಕಿರಣ್, ದೇವರಾಜ್, ಹಳದಪ್ಪ ಇತರರು ಇದ್ದರು.- - -
-21ಎಚ್.ಎಲ್.ಐ2।:ಇನ್ ಸೈಟ್ ಐಎಎಸ್.ಅಕಾಡೆಮಿ, ಸ್ವಾಭಿಮಾನಿ ಬಳಗ ರಾಜ್ಯಾಧ್ಯಕ್ಷ ಜಿ.ಬಿ.ವಿನಯ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.