ಸಾರಾಂಶ
ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಾಯಕವಾಗಿದೆ ಎಂದು ಕುಮಾರಪಟ್ಟಣಂನ ಅಮೃತ ವರ್ಷಿಣಿ ವಿದ್ಯಾಲಯ ಸಂಸ್ಥೆ ಅಧ್ಯಕ್ಷ ಪಿ.ಕೆ.ಪ್ರಕಾಶ್ ರಾವ್ ಹೇಳಿದ್ದಾರೆ.
- ಕ್ಲಸ್ಟರ್‌ಮಟ್ಟದ ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಪಿ.ಕೆ.ಪ್ರಕಾಶ್ ರಾವ್ ಅಭಿಮತ
- - -ಕನ್ನಡಪ್ರಭ ವಾರ್ತೆ ಹರಿಹರ
ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಪ್ರತಿಭಾ ಕಾರಂಜಿ ಕಾರ್ಯಕ್ರಮ ಸಹಾಯಕವಾಗಿದೆ ಎಂದು ಕುಮಾರಪಟ್ಟಣಂನ ಅಮೃತ ವರ್ಷಿಣಿ ವಿದ್ಯಾಲಯ ಸಂಸ್ಥೆ ಅಧ್ಯಕ್ಷ ಪಿ.ಕೆ.ಪ್ರಕಾಶ್ ರಾವ್ ಹೇಳಿದರು.ಇಲ್ಲಿಗೆ ಸಮೀಪದ ಕುಮಾರಪಟ್ಟಣಂನ ಅಮೃತವರ್ಷಿಣಿ ವಿದ್ಯಾಲಯದಲ್ಲಿ ಗುರುವಾರ ನಡೆದ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನಾ ಸಮಾರಂಭ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕತೆಯೇ ಸಮಾಜದಲ್ಲಿ ಒಬ್ಬ ವ್ಯಕ್ತಿಯನ್ನು ಇನ್ನೊಬ್ಬ ವ್ಯಕ್ತಿಯಿಂದ ಉತ್ತಮ ಸ್ಥಾನ ಪಡೆಯಲು ಅವಕಾಶ ದೊರಕಿಸುತ್ತದೆ. ವಿದ್ಯಾರ್ಥಿ ದೆಸೆಯಲ್ಲೆ ಈ ಗುಣ ಬೆಳೆಸುವುದು ಮುಖ್ಯವಾಗಿದೆ. ಪ್ರತಿಭಾ ಕಾರಂಜಿ ಈ ದಿಸೆಯಲ್ಲಿ ಉತ್ತಮ ವೇದಿಕೆಯಾಗಿದೆ ಎಂದರು.ಶಿಕ್ಷಣ ಮತ್ತು ಮನರಂಜನೆಯ ಜೊತೆಗೆ ನಮ್ಮ ಸಂಸ್ಕೃತಿ, ಪರಂಪರೆಯ ಅರಿವು ಮೂಡಿಸಿ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೂ ಈ ಸ್ಪರ್ಧೆಗಳು ಸಹಾಯ ಮಾಡುತ್ತದೆ. ಪ್ರತಿ ಶಾಲೆಯ ಪ್ರತಿ ವಿದ್ಯಾರ್ಥಿಯೂ ಈ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಶಿಕ್ಷಕರು ಗಮನಹರಿಸಬೇಕು ಎಂದರು.
ಸುತ್ತಲಿನ 16 ಶಾಲೆಗಳ 400ಕ್ಕೂ ಹೆಚ್ಚು ಮಕ್ಕಳು ಶಿಕ್ಷಕರೊಂದಿಗೆ ಭಾಗವಹಿಸಿದ್ದರು. ಕಂಠಪಾಠ, ಧಾರ್ಮಿಕ ಪಠಣ, ಗೀತಗಾಯನ, ಕಥೆ ಹೇಳುವುದು, ಛದ್ಮವೇಷ, ಚಿತ್ರಕಲೆ, ಆಭಿನಯ ಗೀತೆ, ಆಶುಭಾಷಣ, ಮಣ್ಣಿನ ಮಾದರಿ ರಚನೆ, ಪ್ರಬಂಧ ರಚನೆ ಸೇರಿದಂತೆ ಹತ್ತು ಹಲವಾರು ಸ್ಪರ್ಧೆಗಳು ನಡೆದವು. ಜಯ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.ಹುಲಿಕಟ್ಟೆ ಗ್ರಾಮದ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ನಾಗರಾಜ್ ಬಣಕಾರ್, ಶಿಕ್ಷಣ ಸಂಯೋಜಕ ಎನ್.ಎನ್.ಅಣ್ಣೇರ್, ಮಾಕನೂರು ಕ್ಷೇತ್ರದ ಸಮೂಹ ಸಂಪನ್ಮೂಲ ವ್ಯಕ್ತಿ ರಾಜು ಉಕ್ಕುಂದ, ಸಂಸ್ಥೆ ಕಾರ್ಯದರ್ಶಿ ವಿನಯ್ ಪಿ. ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
- - --20HRR.01.ಜೆಪಿಜಿ:
ಹರಿಹರ ಸಮೀಪದ ಕುಮಾರಪಟ್ಟಣಂನ ಅಮೃತವರ್ಷಿಣಿ ವಿದ್ಯಾಲಯದಲ್ಲಿ ಗುರುವಾರ ಕ್ಲಸ್ಟರ್‌ಮಟ್ಟದ ಪ್ರತಿಭಾ ಕಾರಂಜಿ ಸಮಾರಂಭ ನಡೆಯಿತು. ಸಂಸ್ಥೆ ಅಧ್ಯಕ್ಷ ಪಿ.ಕೆ.ಪ್ರಕಾಶ್ ರಾವ್ ಭಾಗವಹಿಸಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))