ಪ್ರತಿಭಾವಂತ ಯುವಕರನ್ನು ತೊಡಗಿಸಿಕೊಂಡು ನಿರ್ದಿಗಂತ ಸಂಸ್ಥೆಯಿಂದ ಹೆಚ್ಚೆಚ್ಚು ಕಲಾವಿದರನ್ನು ತರಬೇತಿಗೊಳಿಸುವ ಕೆಲಸ ಮಾಡಲಾಗುವುದು
ಕುರುಗೋಡು:ಕಲ್ಯಾಣ ಕರ್ನಾಟಕ ಪ್ರದೇಶದ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಸೇರಿದಂತೆ ವಚನಕಾರರ ಜೀವಿಸಿದ ನಾಡಿನಲ್ಲೀ ಪ್ರತಿಭಾವಂತ ಕಲಾದವಿದರಿದ್ದಾರೆ ಎಂದು ಚಿತ್ರನಟ ಪ್ರಕಾಶ್ ರೈ ಹೇಳಿದರು.
ಇಲ್ಲಿನ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಪ್ರಕಾಶ್ ರಾಜ್ ಫೌಂಡೇಶನ್ ಸಾರಥ್ಯದ ಮೈಸೂರಿನ ನಿರ್ದಿಗಂತ ಸಂಸ್ಥೆಯಿಂದ ಸಿರಿಗೇರಿಯ ಧಾತ್ರಿರಂಗ ಸಂಸ್ಥೆಯು ಯುವಕರಿಗಾಗಿ ಹಮ್ಮಿಕೊಂಡಿರುವ ರಂಗ ತರಬೇತಿ ಕಾರ್ಯಾಗಾರ ವೀಕ್ಷಿಸಿ ತರಬೇತಿ ಪಡೆಯುತ್ತಿರುವ ಯುವಕರೊಂದಿಗೆ ಸಂವಾದ ನಡೆಸಿ ಅನುಭವ ತಿಳಿದುಕೊಂಡರು.ಯುವಕರಿಗೆ ನಟನೆಯ ಕೆಲವು ಟಿಪ್ಸ್ ನೀಡಿ ಕಲಿಕೆಯಲ್ಲಿ ತೊಡಗಿಸಿಕೊಳ್ಳಲು ಸಲಹೆ ನೀಡಿದರು.
ಪ್ರತಿಭಾವಂತ ಯುವಕರನ್ನು ತೊಡಗಿಸಿಕೊಂಡು ನಿರ್ದಿಗಂತ ಸಂಸ್ಥೆಯಿಂದ ಹೆಚ್ಚೆಚ್ಚು ಕಲಾವಿದರನ್ನು ತರಬೇತಿಗೊಳಿಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು.ಕರ್ನಾಟಕದ ಗದಗ ಮತ್ತು ಕೊಪ್ಪಳ ಜಿಲ್ಲೆಯಲ್ಲಿ ತಮ್ಮ ಅಜ್ಜಿ ತಾತ ನೆಲೆಸಿದ್ದು, ತಮ್ಮ ತಂದೆಯವರು ಮಂಗಳೂರು ತಾವು ಬೆಳೆದಿದ್ದು ಬೆಂಗಳೂರು, ತಮ್ಮ ಬಾಲ್ಯದ ನೆನಪುಗಳು ನಟನೆಯ ರಂಗಕ್ಕೆ ಬಂದ ಬಗೆ ಪ್ರಾರಂಭದಲ್ಲಿ ಅನುಭವಿಸಿದ ಸಮಸ್ಯೆಗಳ ಉದಾಹರಣೆ ನೀಡಿದರು. ಯುವಕರು ಹೆಚ್ಚು ಸದೃಢತೆಯಿಂದ ರಂಗಭೂಮಿ ಕಲೆ ಮೈಗೂಡಿಸಿಕೊಳ್ಳಬೇಕು. ನಂತರ ತಾನೇ ಹೆಚ್ಚಿನ ಅವಕಾಶಗಳಿಗೆ ದಾರಿ ಮಾಡುತ್ತದೆ ಎಂದು ಕಿವಿಮಾತು ಹೇಳಿದರು.
ಉತ್ತರ ಕರ್ನಾಟಕ ಭಾಗವು ಕನ್ನಡಕ್ಕಾಗಿ ಸೇವೆ ಸಲ್ಲಿಸಿದ ಅನೇಕ ಮಹನೀಯರ ತಾಣವಾಗಿದೆ. ಚಿತ್ರರಂಗದ ಹೆಸರಾಂತ ಮೇರು ನಟ ಒಂದು ಗ್ರಾಮಕ್ಕೆ ಭೇಟಿ ನೀಡಿ ಯುವಕರೊಂದಿಗೆ ಸಾಮಾನ್ಯರಂತೆ ನೆಲದಲ್ಲಿ ಕುಳಿತು ರಂಗಭೂಮಿ ಕಲೆಯ ಮಾರ್ಗದರ್ಶನ ನೀಡಿದ್ದು ಯುವಕರಲ್ಲಿ ಪ್ರೇರಣದಾಯಕವಾಗಿತ್ತು.ಈ ಸಂದರ್ಭದಲ್ಲಿ ರಂಗ ನಿರ್ದೇಶಕ ಶಕೀಲಾ ಅಹಮದ್, ಧಾತ್ರಿ ರಂಗ ಸಂಸ್ಥೆಯ ಕಾರ್ಯದರ್ಶಿ ವೈ.ಮಂಜುನಾಥ, ಅಧ್ಯಕ್ಷ ಎಂ. ಪಂಪನಗೌಡ, ಸಿ. ಶಿವರಾಮ್, ರಂಗಭೂಮಿ ಶಿಬಿರಾರ್ಥಿ ಸುಮಿತ್ರ ಮಾನ್ವಿ, ಸುಮಂಗಳ ಎನ್.ಹರಪನಹಳ್ಳಿ, ಸರಸ್ವತಿ ಕಲ್ಬುರ್ಗಿ, ಕಾವ್ಯ ಬೆಂಗಳೂರು, ಪೂಜಾ ಕೊಪ್ಪಳ, ಸಿ.ಎಂ. ಫಕೀರಸ್ವಾಮಿ , ಜಿ.ಎಂ. ವಿಜಯ್ ಕುಮಾರ್ ಸಿರಿಗೇರಿ, ಜಿ. ಗಣೇಶ್ ಕುಮಾರ್, ಮಹೆಬೂಬ್, ಸಿದ್ದೇಶ್ , ವಿನಯ್, ನಾಗರಾಜ್ ಬಡಿಗೇರ್, ಮಿಥುನ್ ದೊಡ್ಮನಿ, ತೇಜಸ್, ಮಲ್ಲಯ್ಯ , ವಸಂತ್ ಕುಮಾರ್ ಹಾಗೂ ಅಭಿನಯ ತರಬೇತಿ ಶಿಕ್ಷಕ ತಂಡದ ರಂಗ ನಿರ್ದೇಶಕ ಗಣೇಶ್, ಮಂದಾರ್ತಿ ಉಡುಪಿ, ಶಕೀಲ್ ಅಹಮದ್ , ಅರುಣ್ ಲಾಲ್ ಕೇರಳ, ಅಮಿತ್ ರೆಡ್ಡಿ, ಚಿತ್ರದುರ್ಗ, ಶಶಿಕುಮಾರ್, ವಿ.ಷಣ್ಮುಖ, ಗುರುದೇವ, ದೇವಸ್ಥಾನದ ಕಮಿಟಿಯ ಸದಸ್ಯರು ಸೇರಿ ಇತರರು ಇದ್ದರು.