ಸಾರಾಂಶ
ಕ್ರೀಡಾ , ಸಾಂಸ್ಕೃತಿಕ , ಎನ್ ಎಸ್ ಎಸ್ ಹಾಗೂ ಇನ್ನಿತರ ಚಟುವಟಿಕೆಗಳ ಉದ್ಘಾಟನಾ ಸಮಾರಂಭ
ಕನ್ನಡಪ್ರಭ ವಾರ್ತೆ, ತರೀಕೆರೆ2024- 25ನೇ ಶೈಕ್ಷಣಿಕ ವರ್ಷದಿಂದ ಅಧ್ಯಯನವಷ್ಟೇ ಅಲ್ಲದೆ ಕ್ರೀಡೆ ಸಾಂಸ್ಕೃತಿಕ ಚಟುವಟಿಕೆ ಹೀಗೆ ಎಲ್ಲ ವಿಭಾಗಗಳಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪುರಸ್ಕರಿಸುವ ಪ್ರಯತ್ನ ನಡೆಯಲಿ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕ್ರೀಡಾ ,ಸಾಂಸ್ಕೃತಿಕ , ಎನ್ ಎಸ್ ಎಸ್ ಹಾಗೂ ಇನ್ನಿತರ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಕಾಲೇಜು ಪ್ರಧಾನ ಮಂತ್ರಿ ಉಚ್ಚತರ್ ಶಿಕ್ಷಣ ಅಭಿಯಾನಕ್ಕೆ ಒಳಪಟ್ಟಿರುವುದನ್ನು ಅಧಿಕೃತವಾಗಿ ಘೋಷಿಸಿ ಫಲಕ ಅನಾವರಣ ಮಾಡಿದರು. ವಿದ್ಯಾರ್ಥಿ ಪ್ರತಿನಿಧಿಗಳನ್ನು ಪರಿಚಯ ಮಾಡಿಕೊಂಡರು.ಚನ್ನಗಿರಿ ತಾಲೂಕಿನ ಸಿದ್ಧರಮಠದ ಶ್ರೀ ಯುಗಧರ್ಮ ರಾಮಣ್ಣ ವಿದ್ಯಾರ್ಥಿಗಳಿಗೆ ಕನ್ನಡ ನಾಡು-ನುಡಿಗಳ ಹಿರಿಮೆಯನ್ನು ,ಶಿಕ್ಷಣದ ಮಹತ್ವವನ್ನು ತಮ್ಮ ಆಶುಕವಿತೆ ಹಾಗೂ ತತ್ವಪದಗಳ ಉಪನ್ಯಾಸದಲ್ಲಿ ಮನಮುಟ್ಟುವಂತೆ ಬಣ್ಣಿಸಿದರು. ಕಾಲ , ಕಾಸು ಹಾಗೂ ಕಾಯಕಗಳ ಪ್ರಾಮುಖ್ಯತೆ ಕುರಿತು ಪ್ರಾಸಬದ್ಧವಾಗಿ ಪದ ಕಟ್ಟಿ ಹಾಡಿದರು.ಕನ್ನಡ ಉಪನ್ಯಾಸಕ ದತ್ತಾತ್ರೇಯ ಟಿ ಎಲ್ ದೈಹಿಕ ಶಿಕ್ಷಣ ನಿರ್ದೇಶಕ ವಸಂತಕುಮಾರ್, ಸಹ ಪ್ರಾಧ್ಯಾಪಕ ಡಾ. ಎಚ್. ಎಸ್. ಶಿವರುದ್ರಪ್ಪ ಕಾಲೇಜಿನ ಎಲ್ಲಾ ಬೋಧಕ, ಬೋಧಕೇತರ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
10ಕೆಟಿಆರ್.ಕೆ.1ಃತರೀಕೆರೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇನಿಂದ ನಡೆದ ಕ್ರೀಡಾ, ಸಾಂಸ್ಕೃತಿಕ , ಎನ್ ಎಸ್ ಎಸ್ ಹಾಗೂ ಇನ್ನಿತರ ಚಟುವಟಿಕೆಗಳ ಉದ್ಘಾಟನೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ನೆರವೇರಿಸಿದರು.
;Resize=(128,128))
;Resize=(128,128))
;Resize=(128,128))
;Resize=(128,128))