ಸಾರಾಂಶ
ಸಾಧನೆ ಮೆರೆದ ಮಕ್ಕಳನ್ನು ಪ್ರೋತ್ಸಾಹಿಸುವ ಗುರುತರ ಹೊಣೆಗಾರಿಕೆ ಸಮಾಜದ ಎಲ್ಲ ಬಾಂಧವರಿಗೆ ಸೇರಿದ ಕಾರಣ ಪ್ರತಿಭಾವಂತರನ್ನು ನಮ್ಮ ಆಸ್ತಿ ಎಂಬಂತೆ ಗೌರವಿಸಿ ಅವರ ಸಾಧನೆಗೆ ನೀರೆರೆದು ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದು ಉದ್ಯಮಿ ರವಿ ದೇಸಾಯಿ ಹೇಳಿದರು.
ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ಸಾಧನೆ ಮೆರೆದ ಮಕ್ಕಳನ್ನು ಪ್ರೋತ್ಸಾಹಿಸುವ ಗುರುತರ ಹೊಣೆಗಾರಿಕೆ ಸಮಾಜದ ಎಲ್ಲ ಬಾಂಧವರಿಗೆ ಸೇರಿದ ಕಾರಣ ಪ್ರತಿಭಾವಂತರನ್ನು ನಮ್ಮ ಆಸ್ತಿ ಎಂಬಂತೆ ಗೌರವಿಸಿ ಅವರ ಸಾಧನೆಗೆ ನೀರೆರೆದು ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದು ಉದ್ಯಮಿ ರವಿ ದೇಸಾಯಿ ಹೇಳಿದರು.ರಾಮಪುರ-ರಬಕವಿಯ ಪೂರ್ಣಪ್ರಜ್ಞ ವಿಜ್ಞಾನ ಪಿಯು ಕಾಲೇಜಿನ ವಿದ್ಯಾರ್ಥಿನಿ ಸ್ವಾತಿ ಮಲ್ಲಿಕಾರ್ಜುನ ಮುಳವಾಡ ರಾಜ್ಯಮಟ್ಟದ ಜೂಡೋ ಕ್ರೀಡೆಯಲ್ಲಿ ಪ್ರಥಮಳಾಗಿದ್ದು, ರಾಷ್ಟ್ರಮಟ್ಟಕ್ಕೆ 2ನೇ ಬಾರಿ ಆಯ್ಕೆಯಾದ ಹಿನ್ನೆಲೆ ಪಂಚಮಸಾಲಿ ಸಮಾಜದ ರಬಕವಿ ಘಟಕದಿಂದ ಸನ್ಮಾನಿಸಿ ಮಾತನಾಡಿದ ಅವರು, ಪ್ರತಿಭಾವಂತರು ಸಮಾಜದ ಮತ್ತು ರಾಷ್ಟ್ರದ ಆಸ್ತಿಯಾಗಿರುತ್ತಾರೆ. ಅಂಥ ಪ್ರತಿಭೆಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳೆಗೆಗೂ ಸಮಾಜ ಇದೇ ಗೌರವ ನೀಡುತ್ತದೆಂಬ ಸಂದೇಶ ನೀಡುವ ಮೂಲಕ ಸಾಧಕರನ್ನು ಬೆಳೆಸಬೇಕು ಎಂದರು.ಮಹಾದೇವ ದುಪದಾಳ, ಪ್ರಶಾಂತ ಫಾಲಭಾಂವಿ, ಮಲ್ಲಿಕಾರ್ಜುನ ಮುಳವಾಡ, ಶ್ರೀಶೈಲ ಕಿತ್ತೂರ, ಪ್ರಕಾಶ ಮೂಡಲಗಿ, ಮಾಜಿ ನಗರಾಧ್ಯಕ್ಷ ಸಂಜಯ ತೆಗ್ಗಿ ಸೇರಿದಂತೆ ಅನೇಕರಿದ್ದರು.ಪ್ರತಿಭಾವಂತರು ಸಮಾಜದ ಮತ್ತು ರಾಷ್ಟ್ರದ ಆಸ್ತಿಯಾಗಿರುತ್ತಾರೆ. ಅಂಥ ಪ್ರತಿಭೆಗಳನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳೆಗೆಗೂ ಸಮಾಜ ಇದೇ ಗೌರವ ನೀಡುತ್ತದೆಂಬ ಸಂದೇಶ ನೀಡುವ ಮೂಲಕ ಸಾಧಕರನ್ನು ಬೆಳೆಸಬೇಕು.
-ರವಿ ದೇಸಾಯಿ, ಉದ್ಯಮಿ.