ಪ್ರತಿಭೆಗಳನ್ನು ಗುರುತಿಸಿ ಪೂರಕ ಪರಿಕರಗಳನ್ನು ಸಕಾಲದಲ್ಲಿ ನೀಡಬೇಕು: ಶೇಖರ್

| Published : Dec 12 2024, 12:30 AM IST

ಪ್ರತಿಭೆಗಳನ್ನು ಗುರುತಿಸಿ ಪೂರಕ ಪರಿಕರಗಳನ್ನು ಸಕಾಲದಲ್ಲಿ ನೀಡಬೇಕು: ಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣದ ಜೊತೆಯಲ್ಲಿ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವುದು ಅವಶ್ಯವಿದೆ. ತಮ್ಮ ಪರಿಸರದ ಸುತ್ತ ಇರುವ ಮರಗಿಡಗಳ ಜೊತೆ ಮತ್ತಷ್ಟು ಗಿಡ ಬೆಳೆಸಲು ಜಾಗೃತಿ ಮೂಡಿಸಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಶುದ್ಧಗಾಳಿಗಾಗಿ ಹಾಹಾಕಾರವಾಗಲಿದೆ. ಕೋವಿಡ್‌ ಎಲ್ಲ ರೀತಿ ಪಾಠ ಕಲಿಸಿದೆ. ಪರಿಸರ ಉಳಿದರೆ ಮಾತ್ರ ಜೀವಸಂಕಲ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಸರ್ಕಾರಿ ಶಾಲೆ ಮಕ್ಕಳಲ್ಲಿ ಉತ್ತಮ ಪ್ರತಿಭೆಗಳಿವೆ. ಅವರನ್ನು ಗುರುತಿಸಿ ಉತ್ತೇಜಿಸಲು ಪೂರಕ ಪರಿಕರಗಳನ್ನು ಸಕಾಲದಲ್ಲಿ ನೀಡಬೇಕಿದೆ ಎಂದು ರಾಜಲಾಂಛನ ಯುಕ್ತಿ ಸಂಸ್ಥಾನ ಉಪಾಧ್ಯಕ್ಷ ಎಚ್.ಎ.ಹೊನ್ನೇನಹಳ್ಳಿ ಶೇಖರ್‌ ಹೇಳಿದರು.

ಪಟ್ಟಣದ ಕೆಪಿಎಸ್ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬೆಂಗಳೂರು ಚಂದಾಪುರ ಘಟಕದ ರಾಜಲಾಂಛನಯುಕ್ತಿ ಸಂಸ್ಥಾನದ ಎಸಿಪಿ(ಅಡಿಷಿನಲ್‌ಕಮಿಷನರ್‌ಆಫ್ ಪೊಲೀಸ್) ಎಲ್.ವೈ.ರಾಜೇಶ್ ಮಾರ್ಗದರ್ಶನದಲ್ಲಿ ಪಠ್ಯಕ್ಕೆ ಪೂರಕವಾದ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

ಹಳ್ಳಿಗಾಡಿನ ಮಕ್ಕಳಲ್ಲಿ ಹುಟ್ಟಿನಿಂದಲೇ ಸಹಜವಾಗಿ ಪ್ರತಿಭೆ ಇದೆ. ಇಂತಹ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಶಿಕ್ಷಕರ ಪಾತ್ರದೊಡ್ಡಿದೆ. ಇಂತಹ ಮಕ್ಕಳನ್ನು ಗುರುತಿಸಿ ಉತ್ತೇಜಿಸಲು ಸಂಸ್ಥೆ ಬದ್ಧವಿದೆ ಎಂದರು.

ತಾವು ದೂರದ ಊರಿನಲ್ಲಿದ್ದರೂ ಹಳ್ಳಿಗಾಡಿನ ಸರ್ಕಾರಿ ಶಾಲೆ, ಕನ್ನಡ ಶಾಲೆ ಮಕ್ಕಳನ್ನು ಭವಿಷ್ಯದಲ್ಲಿ ಮುನ್ನೆಲೆಗೆ ತರಲು ಸಂತಸವಿದೆ. ಮಕ್ಕಳಲ್ಲಿ ಶಿಕ್ಷಣ, ಪರಿಸರ ಅರಿವು ಮೂಡಿಸುವುದು ಸಂಸ್ಥೆ ಪ್ರಮುಖ ಉದ್ದೇಶವಾಗಿದೆ ಎಂದರು.

ಶಿಕ್ಷಣದ ಜೊತೆಯಲ್ಲಿ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಜಾಗೃತಿ ಮೂಡಿಸುವುದು ಅವಶ್ಯವಿದೆ. ತಮ್ಮ ಪರಿಸರದ ಸುತ್ತ ಇರುವ ಮರಗಿಡಗಳ ಜೊತೆ ಮತ್ತಷ್ಟು ಗಿಡ ಬೆಳೆಸಲು ಜಾಗೃತಿ ಮೂಡಿಸಬೇಕಿದೆ. ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಶುದ್ಧಗಾಳಿಗಾಗಿ ಹಾಹಾಕಾರವಾಗಲಿದೆ. ಕೋವಿಡ್‌ ಎಲ್ಲ ರೀತಿ ಪಾಠ ಕಲಿಸಿದೆ. ಪರಿಸರ ಉಳಿದರೆ ಮಾತ್ರ ಜೀವಸಂಕಲ ಎಂದು ಮನದ ಇಂಗಿತ ವ್ಯಕ್ತಪಡಿಸಿದರು.

ಇನ್ಫೋಸಿಸ್ ಸಾಪ್ಟ್‌ವೆರ್‌ ಎಂಜಿನಿಯರ್ ಸೌಮ್ಯ ಶಹಪುರಕರ್ ಮಾತನಾಡಿ, ಮಕ್ಕಳು ಮೊದಲು ಮಾತೃ ಭಾಷೆಯಲ್ಲಿ ಸುಲಭವಾಗಿ ಓದಿ ಗ್ರಹಿಸಿಕೊಳ್ಳಬಹುದು. ಹಿಂಜರಿಕೆ ತೊರೆದು ಸಕಾರಾತ್ಮಕ ಚಿಂತಿಸಿ ಗುರಿ ಇಟ್ಟುಕೊಂಡು ಓದಿ ಶಿಕ್ಷಣ ತಮ್ಮ ಬದುಕಿನಜೊತೆಗೆ ಸುಶಿಕ್ಷಿತ ಸಮಾಜಕ್ಕೆ ಸಹಕಾರಿಯಾಗಲಿದೆ ಎಂದು ನುಡಿದರು.

ಶಾಲಾ ಮಕ್ಕಳು ಓದಿಗಾಗಿ ಸೂಕ್ತ ಕಾಲದಲ್ಲಿ ಅಗತ್ಯ ಪರಿಕರಗಳನ್ನು ನೀಡಿದ್ದಕ್ಕೆ ಶಾಲಾ ಮಕ್ಕಳು ಖುಷಿಪಟ್ಟರು. ಸಂಸ್ಥೆ ಸದಸ್ಯರಾದ ಕೆ.ಜಿ.ಬಸವರಾಜು, ಎಚ್.ಎ.ಶ್ರೀಧರ್, ನಯನ, ಮುಖ್ಯಶಿಕ್ಷಕಿ ಬಿ.ಕೆ.ಮಮತಾ, ಎಸ್.ಆರ್. ಸುರೇಶ್, ಎಸ್. ವಿಷಕಂಠ, ಬಿ.ಬಿ. ರೇಷ್ಮಾ, ಜ್ಯೋತಿ, ಪುಷ್ಪಲತಾ, ರೇಖಾ ಇದ್ದರು.